/newsfirstlive-kannada/media/media_files/2025/10/06/actor-darshan-in-jail-2025-10-06-16-30-23.jpg)
ಪರಪ್ಪನ ಅಗ್ರಹಾರ ಜೈಲಿನಲ್ಲಿ 100 ದಿನ ಕಳೆದ ನಟ ದರ್ಶನ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಸ ವಾಸ ಮಾಡ್ತಾ ಈಗಾಗಲೇ ಹಂಡ್ರೆಡ್ ಡೇಸ್ ಕಂಪ್ಲೀಟ್ ಆಗಿ ಇಂದಿಗೆ 105 ದಿನಕ್ಕೆ ಕಾಲಿ ಇಟ್ಟಿದೆ. 2ನೇ ಬಾರಿ ಜೈಲು ಸೇರಿರೋ ದರ್ಶನ್​ಗೆ ಫುಲ್ ಟೈಟ್ ಸಿಸ್ಟಮ್ ಇರೋದ್ರಿಂದ ಪ್ರತಿಯೊಂದಕ್ಕೂ ಕೋರ್ಟ್ ಮೊರೆಹೋಗುವಂತಾಗಿದೆ. ಹಾಗಿದ್ರೆ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಜೈಲಿನಲ್ಲಿರೋ ದಾಸನ ಲೈಫ್ ಸ್ಟೈಲ್ ಹೇಗಿದೆ ಅನ್ನೋದಕ್ಕೆ ಇಲ್ಲಿದೆ ರಿಪೋರ್ಟ್​.
ಚಾಲೆಂಜಿಂಗ್ ಸ್ಟಾರ್ ದರ್ಶನ್.. ಈ ದಿನಗಳನ್ನು ಕಾಣ್ತಾರೆ ಅಂತ ಅಂದ್ಕೊಂಡಿರಲಿಲ್ಲ ಅನ್ಸುತ್ತೆ.. ಕೇವಲ ತಮ್ಮ ಸಿನಿಮಾ ಹಂಡ್ರೆಡ್​ ಡೇಸ್ ಪೂರೈಸಿದ್ದನ್ನು ಸಂಭ್ರಮಿಸಿದ್ದ ದಾಸ ಈಗ ಮತ್ತೊಂದು ಶತದಿನಕ್ಕೆ ಸಾಕ್ಷಿಯಾಗಿದ್ದಾರೆ.
ನಟ ದರ್ಶನ್ ಜೈಲು ಸೇರಿ 100 ಡೇಸ್ ಕಂಪ್ಲೀಟ್!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ನಟ ದರ್ಶನ್ ಹಾಗೋ ಹೀಗೋ ನೂರು ದಿನ ಕಂಪ್ಲೀಟ್ ಮಾಡಿದ್ದಾರೆ. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ ಜೈಲಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಬೆನ್ನಲ್ಲೇ ದರ್ಶನ್​ ಮೇಲೆ ಭಾರೀ ಪೊಲೀಸರು ಕಣ್ಗಾವಲಿಟ್ಟಿದ್ದಾರೆ. ಸದ್ಯ ಜೈಲಿನಲ್ಲಿ 100 ದಿನ ಸವೆಸಿದ ದರ್ಶನ ಪ್ರತಿಯೊಂದು ಸವಲತ್ತಿಗೂ ಕೋರ್ಟ್ ಮೊರೆ ಹೋಗುವಂತಾಗಿದೆ.
ದರ್ಶನ್ ಜೈಲ್ @ 100 ಡೇಸ್
ಕಳೆದ ಬಾರಿ ಜೈಲು ಸೇರಿದಾಗ 131 ದಿನ ಜೈಲಿನಲ್ಲಿ ಕಳೆದಿದ್ದ ದರ್ಶನ್
ಪರಪ್ಪನ ಅಗ್ರಹಾರ ಜೈಲಿನಲ್ಲಿ 62 ದಿನ, ಬಳ್ಳಾರಿ ಜೈಲಿನಲ್ಲಿ 70 ದಿನ
ಪರಪ್ಪನ ಅಗ್ರಹಾರ ಜೈಲಿನ ಕ್ವಾರೆಂಟೈನ್ ಸೆಲ್​ನಲ್ಲಿರುವ ದರ್ಶನ್
ಜೈಲಿನಲ್ಲಿರಲಾಗದೆ ನ್ಯಾಯಾಧೀಶರ ಮುಂದೆ ವಿಷ ಕೊಡಿ - ದರ್ಶನ್
ಕಳೆದ ಬಾರಿ ವಿಪರೀತ ಚಳಿ ಇದೆ ಕಂಬಳಿ ಕೊಡಿ ಎಂದಿದ್ದ ದರ್ಶನ್
ಬೆಡ್ ಶೀಟ್ ಕೊಡಲು ಸೂಚಿಸಿದ ಕೋರ್ಟ್ ಅಧಿಕಾರಿಗಳಿಗೆ ಛೀಮಾರಿ
ಹಲವು ಅಡೆತಡೆ ಎದುರಿಸಿ ದರ್ಶನ್ & ಗ್ಯಾಂಗ್ 100 ದಿನ ಕಂಪ್ಲೀಟ್
ಅಂದಾಗೆ ಈ ಹಿಂದೆ ಅರೆಸ್ಟ್ ಆಗಿದ್ದಾಗ 131 ದಿನ ದರ್ಶನ್ ಜೈಲಿನಲ್ಲಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ 62 ದಿನ ಹಾಗೂ ಬಳ್ಳಾರಿ ಜೈಲಿನಲ್ಲಿ 70 ದಿನ ಡಿ ಗ್ಯಾಂಗ್ ವಾಸ್ತವ್ಯ ಹೂಡಿತ್ತು. ಈ ಬಾರಿ ಪರಪ್ಪನ ಅಗ್ರಹಾರ ಕ್ವಾರೆಂಟೈನ್ ಸೆಲ್​ನಲ್ಲಿರುವ ದರ್ಶನ್ ಇದ್ದಾರೆ. ಜೈಲಿನಲ್ಲಿರಲಾಗದೆ ನ್ಯಾಯಾಧೀಶರ ಮುಂದೆ ವಿಷ ಕೊಡಿ ಅಂತ ವಿಡಿಯೋ ಕಾನ್ಫರೆನ್ಸ್​​ನಲ್ಲಿ ದರ್ಶನ್ ಮನವಿ ಮಾಡಿದ್ದರು. ಅಲ್ಲದೇ ಮೊನ್ನೆ ನಡೆದ ವಿಚಾರಣೆಯಲ್ಲೂ ಚಳಿ ಹೆಚ್ಚಾಗಿದೆ, ಬೆಡ್ ಶೀಟ್ ಕೊಡ್ತಿಲ್ಲ ಅಂತಾ ದೂರಿದ್ರು. ಕೂಡಲೇ ಬೆಡ್ ಶೀಟ್ ಕೊಡಲು ಸೂಚಿಸಿದ ಕೋರ್ಟ್ ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿತ್ತು. ಹಲವು ಅಡೆತಡೆಗಳನ್ನ ಎದುರಿಸಿದ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿ ನೂರು ದಿನ ಕಂಪ್ಲೀಟ್ ಮಾಡಿದೆ.
/filters:format(webp)/newsfirstlive-kannada/media/media_files/2025/11/04/darshan-and-pavitra-gowda-1-2025-11-04-18-23-54.jpg)
ಸದ್ಯ ಕೊಲೆ ಪ್ರಕರಣದ ಚಾರ್ಜ್ ಫ್ರೇಮ್ ಒಪ್ಪದ ಡಿ ಗ್ಯಾಂಗ್​ಗೆ ಶೀಘ್ರದಲ್ಲೇ ಟ್ರಯಲ್ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ . ಸದ್ಯ ಜಾಮೀನು ಸಿಗುವ ಸಾಧ್ಯತೆ ಇಲ್ಲ. ಕೆಳ ನ್ಯಾಯಾಲಯದಲ್ಲಿ ಕೊಲೆ ಕೇಸ್ ನ ವಿಚಾರಣೆ ಪೂರ್ಣವಾಗಿ ತೀರ್ಪು ಬರುವವರೆಗೂ ದರ್ಶನ್ ಅಂಡ್ ಟೀಮ್​ಗೆ ಜೈಲೇ ಗತಿಯಾಗಿದೆ. ದರ್ಶನ್ ಮಾತ್ರ ತನ್ನ ದಿ ಡೆವಿಲ್ ಮೂವಿ ಪ್ರಮೋಷನ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.
ಅಂಕಿತಾ ಕ್ರೈಮ್​ ಬ್ಯೂರೋ ನ್ಯೂಸ್​ ಫಸ್ಟ್​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us