/newsfirstlive-kannada/media/media_files/2025/10/06/actor-darshan-in-jail-2025-10-06-16-30-23.jpg)
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಜೈಲಿನಲ್ಲಿ ಹಾಸಿಗೆ, ತಲೆ ದಿಂಬು, ಬೆಡ್ ಶೀಟ್ ನೀಡಬೇಕು. ಜೈಲಿನಲ್ಲಿ ವಾಕಿಂಗ್ ಮಾಡಲು ಅವಕಾಶ ನೀಡಬೇಕು ಎನ್ನುವುದು ಸೇರಿದಂತೆ ಇತರೆ ಮೂಲಸೌಕರ್ಯ ನೀಡಿಕೆ ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಬೆಂಗಳೂರಿನ 57 ಸಿಸಿಎಚ್ ಕೋರ್ಟ್ ಆದೇಶ ನೀಡಿದೆ. ಆದರೇ, ನಟ ದರ್ಶನ್ ಬೇಡಿಕೆಗಳಿಗೆ ಕೋರ್ಟ್ ಮನ್ನಣೆ ನೀಡಿಲ್ಲ.
ತಿಂಗಳಿಗೊಮ್ಮೆ ಚಾದರ್ , ಬಟ್ಟೆ ಒದಗಿಸಲು ಕೋರ್ಟ್ ಸೂಚನೆ ನೀಡಿದೆ. ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವ ಆಯ್ಕೆ ಜೈಲು ಅಧಿಕಾರಿಗಳಿಗೆ
ನೀಡಿದೆ. ಸಾಧ್ಯವಾದರೆ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡಲು ಸೂಚನೆ ನೀಡಿದೆ.
ಇನ್ನೂ ಅಕ್ಟೋಬರ್ 31 ರಂದು ದೋಷಾರೋಪ ನಿಗದಿಪಡಿಸಲು ಕೋರ್ಟ್ ನಿರ್ಧಾರ ತೆಗೆದುಕೊಂಡಿದೆ .
ಅಕ್ಟೋಬರ್ 31 ರಂದು ನಟ ದರ್ಶನ್, ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳ ವಿರುದ್ಧ ಯಾವ್ಯಾವ ಸೆಕ್ಷನ್ ಗಳಡಿ ಆರೋಪ ಹೊರಿಸಲಾಗುತ್ತೆ ಎನ್ನುವುದನ್ನು ಕೋರ್ಟ್ ತಿಳಿಸಲಿದೆ. ಅದರ ಆಧಾರದ ಮೇಲೆ ಮುಂದೆ ಕೋರ್ಟ್ ನಲ್ಲಿ ವಾದ- ಪ್ರತಿವಾದ ನಡೆಯಲಿದೆ. ನಟ ದರ್ಶನ್ ವಿರುದ್ಧ ಕೊಲೆ, ಹಲ್ಲೆ, ಕಿಡ್ನ್ಯಾಪ್, ಸಾಕ್ಷ್ಯನಾಶ ಸೇರಿದಂತೆ ವಿವಿಧ ಆರೋಪಗಳನ್ನು ವಿವಿಧ ಸೆಕ್ಷನ್ ಗಳಡಿ ಹೊರಿಸುವ ಸಾಧ್ಯತೆ ಇದೆ.
/filters:format(webp)/newsfirstlive-kannada/media/media_files/2025/08/16/actor-darshan-pavithra-photos-2025-08-16-18-09-36.jpg)
ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಎ 5 ನಂದೀಶ್ ಅರ್ಜಯನ್ನು ಕೋರ್ಟ್ ವಜಾಗೊಳಿಸಿದೆ. ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿದೆ. ಸಾಕ್ಷ್ಯ ವಿಚಾರಣೆಗೆ ಎರಡೂ ಕಡೆಯವರು ಸಹಕರಿಸಲು ಕೋರ್ಟ್ ಸೂಚನೆ ನೀಡಿದೆ. ಸೆಕ್ಷನ್ 91 ರ ಅಡಿ ಜೈಲಿನ ರಿಜಿಸ್ಟರ್ ಹಾಜರಿ ಕೋರಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಕೋರ್ಟ್ ನಲ್ಲಿ ನಟ ದರ್ಶನ್‌ಗೆ ಹಿನ್ನಡೆಯಾಗಿದೆ. ನನಗೆ ಸ್ಪಲ್ಪ ವಿಷ ಕೊಟ್ಟು ಬಿಡಿ ಎಂದು ಈ ಹಿಂದೆ ನಟ ದರ್ಶನ್ ಕೋರ್ಟ್ ಜಡ್ಜ್ ಗೆ ಕೇಳಿದ್ದರು. ಜೈಲಿನಲ್ಲಿ ಸರಿಯಾಗಿ ಕನಿಷ್ಠ ಮೂಲಸೌಕರ್ಯ ನೀಡುತ್ತಿಲ್ಲ ಎಂಬ ಅಸಮಾಧಾನದಿಂದ ಈ ಮಾತು ಹೇಳಿದ್ದರು. ಆದರೇ, ಈಗ ಕೋರ್ಟ್, ವಾದ- ಪ್ರತಿವಾದ ಆಲಿಸಿದ ಬಳಿಕ ತಿಂಗಳಿಗೊಮ್ಮೆ ಬಟ್ಟೆ, ಚಾದರ ಮಾತ್ರ ನೀಡಲು ಆದೇಶಿಸಿದೆ. ನಟ ದರ್ಶನ್ ರನ್ನು ಸಾಧ್ಯವಾದರೇ, ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಕೋರ್ಟ್ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಅಂತಿಮ ಅಧಿಕಾರ ಜೈಲು ಅಧಿಕಾರಿಗಳಿಗೆ ನೀಡಿದೆ.
/filters:format(webp)/newsfirstlive-kannada/media/media_files/2025/10/24/bangalore-city-civil-court-2025-10-24-15-45-48.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us