/newsfirstlive-kannada/media/media_files/2025/10/04/darshan-1-2025-10-04-12-11-43.jpg)
ಜೈಲಿನಲ್ಲಿ ನಟ ದರ್ಶನ್ ಹಾಗೂ ಭೇಟಿಗೆ ಪತ್ನಿಗೆ ಪರದಾಟ
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಈಗ ಸಾಮಾನ್ಯ ಖೈದಿಯಾಗಿದ್ದಾರೆ. ಎಲ್ಲಾ ಖೈದಿಯಂತೆಯೇ ದರ್ಶನ್ ಗೂ ವ್ಯವಸ್ಥೆ ಮಾಡಲಾಗಿದೆ. ನಟ ದರ್ಶನ್‌ಗೆ ಬೆಂಗಳೂರಿನ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ, ಟ್ರೀಟ್ ಮೆಂಟ್ ಸಿಗುತ್ತಿಲ್ಲ. ಈ ಹಿಂದೆ ನೀಡಿದ್ದ ಬಹುದೊಡ್ಡ ವಿಐಪಿ ಟ್ರೀಟ್ ಮೆಂಟ್ ಗಳನ್ನು ಜೈಲು ಅಧಿಕಾರಿಗಳು ಕಟ್ ಮಾಡಿದ್ದಾರೆ.
ಈ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಜೈಲಿಗೆ ದರ್ಶನ್ ಭೇಟಿಗೆ ಬಂದ್ರೆ ನೇರವಾಗಿ ಒಳಗೆ ಕೂರಿಸಿ ಭೇಟಿ ಮಾಡಿಸುತ್ತಿದ್ದರು. ಜೈಲು ಅಧಿಕಾರಿಯೋರ್ವರ ಸಮ್ಮುಖದಲ್ಲಿ ಕೂರಿಸಿ ಭೇಟಿ ಮಾಡಿಸುತ್ತಿದ್ರು. ಆದ್ರೆ ಈ ಬಾರಿ ಬಾಕಿ ಖೈದಿಗಳಂತೆಯೇ ದರ್ಶನ್ ಭೇಟಿ ಮಾಡಬೇಕು. ನಟ ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮಿ ಬರೋಬ್ಬರಿ ಎರಡೂವರೆ ಗಂಟೆ ಕಾದು ಭೇಟಿಯಾಗಿದ್ದಾರೆ. ಎಲ್ಲರಂತೆ ಟೋಕನ್ ತೆಗೆದುಕೊಂಡು ಕ್ಯೂ ನಲ್ಲಿ ನಿಂತು, ನಂತರ ಗ್ಯಾಲರಿಯಲ್ಲಿ ಭೇಟಿ ಮಾಡಿದ್ದಾರೆ. ಹೀಗೆ ಜೈಲಿನಲ್ಲಿ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದೆ. ಸಾಮಾನ್ಯ ಖೈದಿಗಳಂತೆ ನಟ ದರ್ಶನ್‌ಗೂ ವ್ಯವಸ್ಥೆ ಮಾಡಲಾಗಿದೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಈಗ ಜೈಲಿನಲ್ಲಿ ದರ್ಶನ್ ಭೇಟಿ ಮಾಡಲು ಹೋದಾಗ ಯಾವುದೇ ವಿಶೇಷ ಸೌಲಭ್ಯ ಸಿಗುತ್ತಿಲ್ಲ. ಬೇರೆ ಖೈದಿಗಳ ಸಂಬಂಧಿಕರು ಖೈದಿಗಳನ್ನು ಭೇಟಿಯಾಗಲು ಕಾಯುವಂತೆ ವಿಜಯಲಕ್ಷ್ಮಿ ಕೂಡ ಟೋಕನ್ ತೆಗೆದುಕೊಂಡು ಕಾಯುವ ಪರಿಸ್ಥಿತಿ ಬಂದಿದೆ.
ಇದೆಲ್ಲವೂ ಸುಪ್ರೀಂಕೋರ್ಟ್ ಕೊಟ್ಟಿರುವ ಆದೇಶದ ಪರಿಣಾಮ. ನಟ ದರ್ಶನ್‌ಗೆ ಕೊಟ್ಟಿದ್ದ ಜಾಮೀನು ರದ್ದುಪಡಿಸುವ ಆದೇಶದಲ್ಲಿ ಸುಪ್ರೀಂಕೋರ್ಟ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ವಿರುದ್ಧ ಕೂಡ ಚಾಟಿ ಬೀಸಿತ್ತು. ನಟ ದರ್ಶನ್‌ಗೆ ಜೈಲಿನಲ್ಲಿ ವಿವಿಐಪಿ ಟ್ರೀಟ್ ಮೆಂಟ್ ಕೊಟ್ಟ ಪೋಟೋ, ವಿಡಿಯೋ ಬೆಳಕಿಗೆ ಬಂದಾಗಲೇ ಜೈಲಿನ ಸೂಪರಿಂಟೆಂಡೆಂಟ್ ರನ್ನು ಸಸ್ಪೆಂಡ್ ಮಾಡಬೇಕಾಗಿತ್ತು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಹೀಗಾಗಿ ಜೈಲು ಅಧಿಕಾರಿಗಳು ಈಗ ನಟ ದರ್ಶನ್‌ಗೆ ವಿಐಪಿ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಜೈಲು ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಅವರ ಭಯವೂ ಜೈಲು ಅಧಿಕಾರಿಗಳಿಗೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.