Advertisment

ನಟ ದುಷ್ಯಂತ್ -ರಚನಾ ವಿವಾಹ : ಡಿಸಿಎಂ ಡಿಕೆಶಿ ಸೇರಿದಂತೆ ಗಣ್ಯರಿಂದ ಶುಭ ಹಾರೈಕೆ

ಗತವೈಭವ ಸಿನಿಮಾದ ನಾಯಕ ನಟ ದುಷ್ಯಂತ್ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಎಸ್‌.ಪಿ.ಮುದ್ದಹನುಮೇಗೌಡರ ಮಗಳು ರಚನಾರನ್ನು ವಿವಾಹವಾಗಿದ್ದಾರೆ. ಡಿಸಿಎಂ ಡಿಕೆಶಿ ದಂಪತಿ ಸಮೇತ ಬಂದು ನವದಂಪತಿಗೆ ಶುಭ ಹಾರೈಸಿದ್ದಾರೆ.

author-image
Chandramohan
ACTOR DUSHYANTH MARRIAGE
Advertisment

ಗತವೈಭವ ಚಿತ್ರದ ನಾಯಕ ನಟ ದುಷ್ಯಂತ್ -  ರಚನಾ ವಿವಾಹ ಇಂದು ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ನೆರವೇರಿದೆ. ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್ ಪುತ್ರರಾಗಿರುವ ದುಷ್ಯಂತ್‌ ಕನ್ನಡ ಸಿನಿಮಾ ರಂಗದಲ್ಲಿ ಹೀರೋ ಆಗಿ ಹೆಸರು ಗಳಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಎಸ್‌.ಪಿ. ಮುದ್ದಹನುಮೇಗೌಡರ ಮಗಳು ರಚನಾ ಅವರನ್ನು ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಂಡು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದೊಂದು ಆರೇಂಜ್ಡ್ ಮ್ಯಾರೇಜ್‌. ಕಳೆದ ತಿಂಗಳು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೇಲ್ ನಲ್ಲಿ ವಿವಾಹ ನಿಶ್ಚಿತಾರ್ಥ ನೆರವೇರಿತ್ತು. ಇಂದು ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ವಿವಾಹ ನೆರವೇರಿದೆ.  ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪತ್ನಿ ಉಷಾ , ಸಚಿವರಾದ ಕೃಷ್ಣ ಭೈರೇಗೌಡ,  ಅನೇಕ ಸಚಿವರು, ಶಾಸಕರು ವಿವಾಹಕ್ಕೆ ಆಗಮಿಸಿ ನವ ದಂಪತಿಗೆ ಶುಭ ಹಾರೈಸಿದ್ದಾರೆ. ಕುಣಿಗಲ್, ಗುಬ್ಬಿ, ತುಮಕೂರು ನಗರ, ಗ್ರಾಮಾಂತರ ಕ್ಷೇತ್ರದ ಜನರು ಹಾಗೂ ವಿವಿಧ ಭಾಗಗಳ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು. ದುಷ್ಯಂತ್ ರಾಜಕೀಯವಾಗಿಯೂ ಗುಬ್ಬಿ ಹಾಗೂ ತುಮಕೂರು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದಾರೆ. 
ಕನ್ನಡ ಸಿನಿಮಾ ರಂಗದಲ್ಲಿ ನಟಿ ಆಶಿಕಾ ರಂಗನಾಥ್, ನಟ ಡಾಲಿ ಧನಂಜಯ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. 

Advertisment

ACTOR DUSHYANTH MARRIAGE (1)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ACTOR DUSHYANTH MARRIAGE
Advertisment
Advertisment
Advertisment