ಜನರು ಅಂದುಕೊಂಡಷ್ಟು ನಟ ದರ್ಶನ್ ಅವರು ಕೆಟ್ಟ ವ್ಯಕ್ತಿ ಅಲ್ಲವೇ ಅಲ್ಲ. ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಆದಷ್ಟು ಬೇಗ ಅವರು ಹೊರಗೆ ಬರಲಿ. ಅವರು ಕೆಟ್ಟ ನಿರ್ಧಾರಗಳು, ಕೆಟ್ಟ ಮಾತುಗಳನ್ನು ಆಡಬಾರದು. ಎಲ್ಲರಿಗೂ ಒಂದು ಕೆಟ್ಟಗಾಲ ಒಂದು ಇರುತ್ತಲ್ಲ, ಅದು ಸದ್ಯಕ್ಕೆ ದರ್ಶನ್ಗೆ ಬಂದಿದೆ. ನಾನು ನೋಡುತ್ತಿದ್ದ, ಸೆಲೆಬ್ರೆಷನ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ಫೀಸ್ ಬೇರೆ ಎಂದು ನಟ ರಾಜವರ್ಧನ್ ಅವರು ಹೇಳಿದ್ದಾರೆ.
ನ್ಯೂಸ್ಫಸ್ಟ್ ಜೊತೆ ಮಾತನಾಡಿದ ರಾಜವರ್ಧನ್ ಅವರು, ವೈಯಕ್ತಿಕವಾಗಿ ಜೈಲು ಎಂದು ಬಂದಾಗ ಯಾರೇ ಆಗಲಿ ವೀಕ್ ಆಗುತ್ತಾರೆ. ಜನರು ಮರೆಸಿದಂತವರು, ಸಡನ್ ಆಗಿ ಇಲ್ಲಿಗೆ ಬಂದು ಬಿಟ್ಟೆನಲ್ಲ ಅನಿಸುತ್ತದೆ. ಎಲ್ಲರ ಪ್ರಾರ್ಥನೆಯಿಂದ ದರ್ಶನ್ ಬೇಗ ಹೊರಗಡೆ ಬರಬೇಕು. ಅವರಿಗಾಗಿ ದೊಡ್ಡ ಸಮೂಹವೇ ಹೊರಗಡೆ ಕಾಯುತ್ತಿದೆ. ಆ ಮಾತನ್ನು ಕೇಳಿದಾಗ ನಮಗೂ ಜೀರ್ಣನೇ ಆಗಲಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಈಗ ತೋರಿಸಿದೆ. ಅದೇ ಕಾನೂನು ಮೂಲಕ ಬೇಗ ಹೊರಗೆ ಬರಲಿ. ನಾವು ಚಿಕ್ಕವಯಸ್ಸಿನಿಂದ ಹೇಗೆ ಚಾಲೆಂಜಿಂಗ್ ಸ್ಟಾರ್ನ ನೋಡಿದ್ದೇವೋ ಹಾಗೇ ದರ್ಶನ್ ಇರಬೇಕು ಎಂದು ನಟ ರಾಜವರ್ಧನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ