Advertisment

ಕರ್ಲಿ ಹೇರ್​​ ಸ್ಟೈಲ್​​ನಲ್ಲಿ ಚಾರ್ಲಿ ಹುಡುಗಿ ಲಕಲಕ.. ಅಭಿಮಾನಿಗಳು ಏನಂದ್ರು?

ಚಾರ್ಲಿ ಬೆಡಗಿ ನಟಿ ಸಂಗೀತಾ ಶೃಂಗೇರಿ ಬಿಗ್ ಬಾಸ್‌ ಕನ್ನಡದಲ್ಲಿ ಫಯರ್​ ವುಮನ್​​ ಅಂತಲೇ ಫೇಮಸ್​ ಆಗಿರೋದು. ‘ಬಳೆ ಹಾಕೊಂಡಿದ್ದೀನಿ ಬಳೆ’ ಅನ್ನೋ ಡೈಲಾಗ್​ನಿಂದಾಗಿ ನಟಿ ಸಂಗೀತಾ ಶೃಂಗೇರಿ ಬಿಗ್​ಬಾಸ್​ನಲ್ಲಿ ಸಖತ್​ ಸದ್ದು ಮಾಡಿದ್ದರು. ಇದೀಗ ಹೊಸ ಫೋಟೋಶೂಟ್​ಗಳ ಮೂಲಕ ನಟಿ ಸಂಗೀತಾ ಸದ್ದು ಮಾಡ್ತಿದ್ದಾರೆ.

author-image
Ganesh Kerekuli
sangeetha
Advertisment

ಬಿಗ್​ ಬಾಸ್​ ಶೋನ ಫಯರ್​ ವುಮನ್​ ಅಂತಲೇ ಬ್ಯೂಟಿ ಸಂಗೀತಾ ಶೃಂಗೇರಿ ಫೇಮಸ್​ ಆಗಿರೋದು. ಬಿಗ್​ ಬಾಸ್​ ಶೋ ಮುಗಿದು ವರ್ಷ ಉರಳಿದ್ರು, ಸಂಗೀತಾ ನಟನೆಯ ಝಲಕ್​ ಇನ್ನು ಅಭಿಮಾನಿಗಳಿಗೆ ನೋಡೋದಕ್ಕೆ ಸಿಕ್ಕಿಲ್ಲ.

Advertisment

ನೆಚ್ಚಿನ ನಟಿ ಯಾವಾಗ ತೆರೆಗೆ ಮರಳ್ತಾರೋ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಸದ್ಯ ಸಂಗೀತಾ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದು, ಒಂದೊಂದಾಗಿಯೇ ತೆರೆಗೆ ಬರಲಿವೆ. ಈ ನಡುವೆ ಹೊಸ ಫೋಟೋಶೂಟ್​ಗಳ ಮೂಲಕ ಸದ್ದು ಮಾಡ್ತಿದ್ದಾರೆ ನಟಿ ಸಂಗೀತಾ ಶೃಂಗೇರಿ.

sangeetha1

ಹೊಸ ಹೇರ್​ ಸ್ಟೈಲ್ ಮಾಡಿಸಿರುವ ಸಿಂಹಿಣಿ ಎಲ್ಲರ ಗಮನ ಸೆಳೆದಿದ್ದಾರೆ. ​ನೀಳ ಕೇಶವನ್ನ ಕರ್ಲಿ ಮಾಡಿಸಿರೋ ನಟಿ ಸಂಗೀತಾ ಕ್ಯಾಮರಾಗೆ ಸಖತ್​ ಆಗಿ ಪೋಸ್​ ಕೊಟ್ಟಿದ್ದಾರೆ. ಫೋಟೋ ಶೂಟ್​​ ನೋಡಿರುವ ಅಭಿಮಾನಿಗಳು, ಸ್ಟೈಲ್​​ಗೂ ಸೈ ಕ್ಲಾಸ್​ಗೂ ಸೈ ಮಾಸ್​ಗೂ ಸೈ ನಮ್ಮ ಸಿಂಹಿಣಿ ಸಂಗೀತಾ ಶೃಂಗೇರಿ ಎಂದು ನಟಿ ಲುಕ್​ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Colors kannada photo shoot bigg boss kannada 10 Sangeeta Sringeri, Bigg Boss fame
Advertisment
Advertisment
Advertisment