/newsfirstlive-kannada/media/media_files/2025/11/18/meera-vasudevan-divorece-2025-11-18-17-50-03.jpg)
3ನೇ ಭಾರಿಗೆ ವಿವಾಹ ವಿಚ್ಛೇದನ ಪಡೆದ ನಟಿ ಮೀರಾ ವಾಸುದೇವನ್
ಮಲಯಾಳಂ ನಟಿ ಮೀರಾ ವಾಸುದೇವನ್ ಅವರು ಛಾಯಾಗ್ರಾಹಕ ವಿಪಿನ್ ಪುತಿಯಂಕಂ ಅವರಿಂದ ವಿಚ್ಛೇದನ ಪಡೆದು ಜೀವನದಲ್ಲಿ ಮತ್ತೊಮ್ಮೆ ಒಂಟಿಯಾಗಿದ್ದಾರೆ.
ಮೀರಾ ಅವರದು ಇದು ಮೂರನೇ ಮದುವೆ. ಮೀರಾ ಅವರು ಏಪ್ರಿಲ್ 2024 ರಿಂದ ಆಗಸ್ಟ್ 2025 ರವರೆಗೆ ವಿಪಿನ್ ಅವರ ಜೊತೆ ಸಂಸಾರ ನಡೆಸಿದ್ದಾರೆ. ಜೀವನದಲ್ಲಿ ಮೂರನೇ ಭಾರಿಗೆ ವಿವಾಹ ವಿಚ್ಛೇದನ ಪಡೆದಿದ್ದಾರೆ.
‘ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಮೀರಾ ಬರೆದಿದ್ದಾರೆ, "ನಾನು, ನಟಿ ಮೀರಾ ವಾಸುದೇವನ್, ಅಕಾ ಮೀರಾ ವಾಸುದೇವನ್, ಆಗಸ್ಟ್ 2025 ರಿಂದ ನಾನು ಈಗ ಒಂಟಿಯಾಗಿದ್ದೇನೆ ಎಂದು ಅಧಿಕೃತವಾಗಿ ಘೋಷಿಸುತ್ತೇನೆ. ನಾನು ನನ್ನ ಜೀವನದ ಅತ್ಯಂತ ಅದ್ಭುತ ಮತ್ತು ಶಾಂತಿಯುತ ಹಂತದಲ್ಲಿದ್ದೇನೆ..." ಎಂದು ಬರೆದುಕೊಂಡಿದ್ದಾರೆ.
ಮೀರಾ ಮತ್ತು ವಿಪಿನ್ ಮೊದಲು ಭೇಟಿಯಾದದ್ದು ಅವರ ಮಲಯಾಳಂ ಟಿವಿ ಕಾರ್ಯಕ್ರಮ ಕುಡುಂಬವಿಳಕ್ಕು ಸೆಟ್ ನಲ್ಲಿ . ವಿವಾಹ ಸಮಾರಂಭ ಕೊಯಮತ್ತೂರಿನಲ್ಲಿ ನಡೆಯಿತು.
ಮೀರಾ ಅವರ ಸಾರ್ವಜನಿಕ ವಿಚ್ಛೇದನ ಘೋಷಣೆಯು ಗಮನ ಸೆಳೆದಿದ್ದು, ಅವರ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕಿದೆ.
/filters:format(webp)/newsfirstlive-kannada/media/media_files/2025/11/18/meera-vasudevan-divorece02-2025-11-18-17-52-15.jpg)
ಮೀರಾ ವಾಸುದೇವನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ.
ಮೀರಾ ವಾಸುದೇವನ್ ಎರಡು ದಶಕಗಳಿಗೂ ಹೆಚ್ಚು ಕಾಲ ಮನರಂಜನಾ ಉದ್ಯಮದಲ್ಲಿದ್ದಾರೆ. ಜನವರಿ 29, 1982 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದ ಅವರು, ನಟನೆಗೆ ಎಂಟ್ರಿ ನೀಡುವ ಮೊದಲು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ವಿಪಿನ್ ಪುತಿಯಾಂಕಂ ಅವರ ವಿವಾಹಕ್ಕೂ ಮುನ್ನ, ಮೀರಾ ವಾಸುದೇವನ್ ಅವರು ನಟ ಜಾನ್ ಕೊಕ್ಕೆನ್ ಅವರನ್ನು 2012 ರಿಂದ 2016 ರವರೆಗೆ ವಿವಾಹವಾಗಿದ್ದರು. ಈ ದಾಂಪತ್ಯ ಜೀವನದಿಂದ ಅರಿಹಾ ಜಾನ್ ಎಂಬ ಮಗನಿದ್ದಾನೆ.
ಇದಕ್ಕೂ ಮೊದಲು, ನಟ ವಿಶಾಲ್ ಅಗರ್ವಾಲ್ ಅವರನ್ನು ವಿವಾಹವಾಗಿದ್ದರು. ಇಬ್ಬರೂ ಐದು ವರ್ಷಗಳ ನಂತರ ವಿವಾಹ ವಿಚ್ಛೇದನ ಪಡೆಯಲು ನಿರ್ಧರಿಸಿದರು. ವಿಪಿನ್ ಪುತಿಯಂಕಂ ಅವರೊಂದಿಗಿನ ಮೀರಾ ಅವರ ಮೂರನೇ ವಿವಾಹವು ಅಲ್ಪಾವಧಿಯದ್ದಾಗಿದ್ದು, ಒಂದು ವರ್ಷಕ್ಕೂ ಹೆಚ್ಚು ಕಾಲ ದಂಪತಿಗಳಾಗಿದ್ದರು.
‘I am now single…’: Actress Meera Vasudevan confirms divorce after one year of marriage
— Mathrubhumi English (@mathrubhumieng) November 17, 2025
Read more at: https://t.co/kV5uyaQl5y#Movies#Mollywood#Divorce
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us