Advertisment

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟಿ ಪವಿತ್ರಾಗೌಡಗೆ ಸಿಗದ ಜಾಮೀನು : ಸುಪ್ರೀಂಕೋರ್ಟ್ ನಲ್ಲಿ ಪುನರ್ ಪರಿಶೀಲನಾ ಅರ್ಜಿ ವಜಾ

ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತಮ್ಮ ವಿರುದ್ಧ ದೋಷಾರೋಪಣೆ ಹೊರಿಸಿದ ಬಳಿಕ ನಟಿ ಪವಿತ್ರಾಗೌಡ ಜಾಮೀನು ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 14, 2025ರ ಆದೇಶದ ಪುನರ್ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಲಾಗಿದೆ.

author-image
Chandramohan
ಪವಿತ್ರಾಗೌಡ ಕೈ ಹಿಡಿದುಕೊಂಡು ಹೊರಗೆ ಬಂದ ದರ್ಶನ್‌.. ಕೋರ್ಟ್‌ನಲ್ಲಿ ಅಸಲಿಗೆ ಆಗಿದ್ದೇನು?

ಸುಪ್ರೀಂಕೋರ್ಟ್ ಗೆ ಪವಿತ್ರಾಗೌಡ ಸಲ್ಲಿಸಿದ್ದ ಅರ್ಜಿ ವಜಾ

Advertisment
  • ಸುಪ್ರೀಂಕೋರ್ಟ್ ಗೆ ಪವಿತ್ರಾಗೌಡ ಸಲ್ಲಿಸಿದ್ದ ಅರ್ಜಿ ವಜಾ
  • ಆಗಸ್ಟ್ 14ರ ಆದೇಶದ ಪುನರ್ ಪರಿಶೀಲನೆ ಕೋರಿದ್ದ ಅರ್ಜಿ ವಜಾ
  • ಜಾಮೀನು ನೀಡಲು ಕೋರಿ ಪವಿತ್ರಾಗೌಡ ಸಲ್ಲಿಸಿದ್ದ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಜಾ


ಚಿತ್ರದುರ್ಗದ  ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜಾಮೀನು ರದ್ದಾಗಿ ಜೈಲು ಪಾಲಾಗಿರುವ ನಟಿ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಸುಪ್ರೀಂಕೋರ್ಟ್ ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ನೇತೃತ್ವದ ಪೀಠವು ತಮ್ಮ ಚೇಂಬರ್ ನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸಿ ವಜಾಗೊಳಿಸಿದೆ.   ಹೀಗಾಗಿ ಪವಿತ್ರಾಗೌಡಗೆ ಜಾಮೀನು ಸಿಕ್ಕಿಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಮುಂದುವರಿಯಲಿದೆ. ತಮಗೆ ಎಸ್ಎಸ್ಎಲ್ ಸಿ ಓದುತ್ತಿರುವ ಮಗಳಿದ್ದು, ಮಗಳ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕಾಗಿದೆ. ಮಗಳಿಗೆ ತಾಯಿಯ ಅಗತ್ಯ ಇದೆ.  ತನಗೆ ವಯಸ್ಸಾದ ತಂದೆ, ತಾಯಿ ಇದ್ದು  ಅವರ ಪಾಲನೆ ಪೋಷಣೆ ಮಾಡಬೇಕಾಗಿದೆ. ತಾನು ಮಹಿಳೆಯಾಗಿದ್ದು, ತನಗೆ ಜಾಮೀನು ನೀಡಬೇಕೆಂದು ಕೋರಿದ್ದರು.  
 ಇನ್ನೂ ವಿಚಾರಣಾ ನ್ಯಾಯಾಲಯಕ್ಕೆ  ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್ ಷೀಟ್ ಸಲ್ಲಿಸಿದ್ದಾರೆ. ಅದರ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ದೋಷಾರಣೆ ಕೂಡ ಹೊರಿಸಿದೆ. ಹೀಗಾಗಿ  ಜಾಮೀನು ಮಂಜೂರು ಮಾಡಬೇಕೆಂದು ಕೋರಿ ಕೊಲೆ ಕೇಸ್ ನ ಎ1  ಆರೋಪಿಯಾಗಿರುವ ಪವಿತ್ರಾಗೌಡ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 14 ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಪುನರ್ ಪರಿಶೀಲನೆ ಮಾಡಬೇಕೆಂದು ಕೋರಿ ಪವಿತ್ರಾಗೌಡ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ತನ್ನ ಆದೇಶದ ಪುನರ್ ಪರಿಶೀಲನೆ ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

Advertisment

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ಲಾನ್ ಮಾಡಿದ್ದ ದರ್ಶನ್‌ ಗ್ಯಾಂಗ್.. ಡೂಪ್ಲಿಕೇಟ್ ಸ್ಟೋರಿ ಕೇಳಿದ್ರೆ ಶಾಕ್ ಆಗ್ತೀರಾ!



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bail denied to Pavithra Gowda
Advertisment
Advertisment
Advertisment