/newsfirstlive-kannada/media/media_files/2025/08/16/actor-darshan-pavithra-photos-2025-08-16-18-09-36.jpg)
ಜೈಲಿನಲ್ಲಿ ನಟ ದರ್ಶನ್ ರಿಲ್ಯಾಕ್ಸ್.. ಪವಿತ್ರಾಗೌಡಗೆ ಟೆನ್ಷನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಿನ್ನೆ ದೋಷಾರೋಪಣೆ ನಿಗದಿ ಬೆನ್ನಲ್ಲೆ ಜಾಮೀನು ಕೋರಿ ನಟಿ ಪವಿತ್ರಾಗೌಡ ಸುಪ್ರೀಂಕೋರ್ಟ್ ಗೆ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ತಮಗೆ ಈ ಕೊಲೆ ಕೇಸ್ ನಲ್ಲಿ ಜಾಮೀನು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಆದರೇ, ಜಾಮೀನು ಕೋರಿರುವ ಪುನರ್ ಪರಿಶೀಲನಾ ಅರ್ಜಿಯಲ್ಲಿ ಯಾವುದೇ ಹೊಸ ಅಂಶಗಳನ್ನು ಉಲ್ಲೇಖ ಮಾಡಿಲ್ಲ. ಮೂಲಭೂತ ಹಕ್ಕುಗಳು ಉಲಂಘನೆ ಆಗಿದ್ದರೇ ಮಾತ್ರವೇ ಜಾಮೀನು ಕೋರಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರಕರಣದಲ್ಲಿ ಅಂಥ ಯಾವುದೇ ಉಲಂಘನೆ ಆಗಿಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ಕರ್ನಾಟಕ ಸರ್ಕಾರದ ಪರ ವಕೀಲ ಅನಿಲ್ ನಿಶಾನಿ ಹೇಳಿದ್ದಾರೆ.
ಜೊತೆಗೆ ಕೋರ್ಟ್ ನಲ್ಲಿ ಟ್ರಯಲ್ ಶುರುವಾಗುತ್ತಿದೆ. ಇಂಥ ಹೊತ್ತಲ್ಲಿ ಬೇಲ್ ಅರ್ಜಿ ಗಳ ತೀರ್ಪು ಮರುಪರಿಶೀಲನೆ ಮಾಡಿ ಹೊಸ ತೀರ್ಪು ನಿರೀಕ್ಷೆ ಕಷ್ಟ. ಅರ್ಜಿದಾರರು ಈಗ ಪುನರ್ ಪರಿಶೀಲನೆ ಅರ್ಜಿಯಲ್ಲಿ ಉಲ್ಲೇಖ ಮಾಡಿರುವ ಎಲ್ಲಾ ಅಂಶಗಳ ವಿಚಾರಣೆ ವೇಳೆಯೇ ಹೇಳಿದ್ದಾರೆ. ಹೊಸ ಅಂಶಗಳು ಏನು ಇಲ್ಲ. ಇದು ನ್ಯಾಯಮೂರ್ತಿಗಳ ಚೇಂಬರ್ ನಲ್ಲಿ ವಿಚಾರಣೆ ಆಗುತ್ತೆ. ಚೇಂಬರ್ ನಲ್ಲಿ ಸುದೀರ್ಘ ವಾದ- ಪ್ರತಿವಾದಕ್ಕೆ ಅವಕಾಶ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ಕರ್ನಾಟಕ ಸರ್ಕಾರದ ಪರ ವಕೀಲ ಅನಿಲ್ ನಿಶಾನಿ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2025/05/Darshan-pavithra-gowda-9.jpg)
ಇನ್ನೂ ಇತ್ತ ಜೈಲಿನಲ್ಲಿರುವ ಪವಿತ್ರಾಗೌಡಗೆ ಟೆನ್ಷನ್ ಶುರುವಾಗಿದೆ. ಜೈಲಿನಲ್ಲಿ ಸರಿಯಾಗಿ ಊಟ ಸಿಗುತ್ತಿಲ್ಲ, ಮಗಳನ್ನು ನೋಡಲು ಬಿಟ್ಟಿಲ್ಲ. ವಕೀಲರು ಹಾಗೂ ಮಗಳ ಬಳಿ ದುಖಃ ತೊಡಿಕೊಂಡ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ. ನಿನ್ನೆ ವಿಚಾರಣೆ ಮುಗಿದ ಮೇಲೆ ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆ. ಜಡ್ಜ್ ಅನುಮತಿ ಪಡೆದು ಮಗಳು ಹಾಗೂ ವಕೀಲರ ಭೇಟಿ ಮಾಡಿದ್ದಾರೆ. ಕೋರ್ಟ್ ಹಾಲ್ ನಲ್ಲೇ ಮಗಳನ್ನು ಕಂಡು ಪವಿತ್ರಾಗೌಡ ಕಣ್ಣೀರು ಹಾಕಿದ್ದಾರೆ. ಮಗಳು ಹಾಗೂ ತಾಯಿ ತಂದಿದ್ದ ಊಟ ತಿಂದ ಆರೋಪಿತೆ ಪವಿತ್ರಾಗೌಡ, ಜೈಲಿನಲ್ಲಿ ಹಿಂಸೆಯಾಗುತ್ತಿದೆ, ಸರಿಯಾದ ಊಟ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಗಳನ್ನು ಅಪ್ಪಿ ಮುದ್ದಾಡಿದ ಪವಿತ್ರಾಗೌಡ ಕಣ್ಣೀರು ಹಾಕಿದ್ದಾರೆ.
ಜೈಲಿನಲ್ಲಿ ಕುಟುಂಬದವರ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಹೀಗಾಗಿ ಕೋರ್ಟ್ ಬಳಿ ಪವಿತ್ರಾ ಗೌಡಗೆ ಮಗಳನ್ನ ಕರೆತಂದು ವಕೀಲರು ಭೇಟಿ ಮಾಡಿಸಿದ್ದಾರೆ.
ಇನ್ನೊಂದು ಕಡೆ ದೋಷಾರೋಪಣೆ ನಿಗದಿಯ ಬಳಿಕ ನಟ ದರ್ಶನ್ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.
ವಿಚಾರಣೆ ಆರಂಭವಾಗಿ ಸಾಕ್ಷಿಗಳ ವಿಚಾರಣೆ ಮುಗಿದಲ್ಲಿ ಜಾಮೀನಿಗೆ ಅರ್ಜಿ ಹಾಕಿಕೊಳ್ಳಲು ಅವಕಾಶ ಸಿಗಲಿದೆ. ಹೀಗಾಗಿ ನಟ ದರ್ಶನ್ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಜೈಲಿನ ಊಟ ಸೇರದೆ, ನಿದ್ರೆ ಇಲ್ಲದೆ ನಟ ದರ್ಶನ್ ಸೊರಗಿ ಹೋಗಿದ್ದಾರೆ.
ನಿನ್ನೆ ಕೋರ್ಟ್ ನಲ್ಲಿ ಡಿ-ಗ್ಯಾಂಗ್ ಗೆ ನಟ ದರ್ಶನ್ ಸ್ವಲ್ಪ ಧೈರ್ಯ ತುಂಬಿದ್ದಾರೆ, ಜಾಮೀನು ಸಿಗುತ್ತದೆ, ಅಲ್ಲಿಯವರೆಗೂ ತಾಳ್ಮೆಯಿಂದ ಇರೋಣ ಎಂದು ದಚ್ಚು ಉಳಿದ ಆರೋಪಿಗಳಿಗೆ ಹೇಳಿದ್ದಾರೆ. ಎಲ್ಲರಿಗೂ ಧೈರ್ಯದಿಂದ ಇರುವಂತೆ ನಟ ದರ್ಶನ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/03/darshan-2025-10-03-08-43-31.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us