Advertisment

ತಮ್ಮ ವಿರುದ್ಧ ಕಾಮೆಂಟ್ ಮಾಡಿ ಜೈಲು ಪಾಲಾಗಿದ್ದವರನ್ನು ಕ್ಷಮಿಸಿದ ನಟಿ ರಮ್ಯಾ! : ಈ ಬಗ್ಗೆ ರಮ್ಯಾ ಕೊಟ್ಟ ಸಮರ್ಥನೆ ಏನು?

ತಮ್ಮ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕೊಲೆ ಬೆದರಿಕೆ, ರೇಪ್ ಬೆದರಿಕೆ ಹಾಕಿದ್ದವರ ವಿರುದ್ಧ ನಟಿ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು. ಆದರೇ, ಆರೋಪಿಗಳು ಈಗ ಬುದ್ದಿ ಕಲಿತಿದ್ದಾರೆ. ಆರೋಪಿಗಳ ಕುಟುಂಬಸ್ಥರು ರಮ್ಯಾರನ್ನು ಭೇಟಿಯಾಗಿ ಕ್ಷಮೆ ಕೋರಿದ್ದಾರೆ. ಇದರಿಂದ ನಟಿ ರಮ್ಯಾ, ಆರೋಪಿಗಳನ್ನು ಕ್ಷಮಿಸಿದ್ದಾರೆ.

author-image
Chandramohan
ಕಂಗನಾ ರಣಾವತ್ ‘ಎಮರ್ಜೆನ್ಸಿ’ ಬ್ಯಾಡ್ ಸಿನಿಮಾ.. ಸ್ಯಾಂಡಲ್​ವುಡ್​ ನಟಿ ರಮ್ಯಾ ಗರಂ!

ಆರೋಪಿಗಳನ್ನು ಕ್ಷಮಿಸಿದ ನಟಿ ರಮ್ಯಾ!

Advertisment
  • ಆರೋಪಿಗಳನ್ನು ಕ್ಷಮಿಸಿದ ನಟಿ ರಮ್ಯಾ!
  • ಅಶ್ಲೀಲ, ಬೆದರಿಕೆ ಹಾಕಿದ್ದ ಕೇಸ್ ಆರೋಪಿಗಳಿಗೆ ರಮ್ಯಾ ಕ್ಷಮಾದಾನ!

ತಮ್ಮ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ಮಾಡಿ ಜೈಲು ಪಾಲಾದ ಕುಟುಂಟ ಕ್ಷಮೆ ಕೋರಿದ್ದರಿಂದ ನಟಿ ರಮ್ಯಾ ಆ ಕುಟುಂಬ ಹಾಗೂ ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಕ್ಷಮಿಸಿದ್ದಾರೆ. ಈ ವಿಷಯವನ್ನು ಇಂದು ಖುದ್ದು  ಮೋಹಕತಾರೆ,  ನಟಿ ರಮ್ಯಾ ಅವರೇ ತಿಳಿಸಿದ್ದಾರೆ. ಒಂದೆರೆಡು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾಗಳಲ್ಲಿ ನಟ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ನಟಿ ರಮ್ಯಾ ಅವರಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡಲಾಗಿತ್ತು. ಕೊಲೆ ಬೆದರಿಕೆ, ರೇಪ್ ಬೆದರಿಕೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಾಕಿದ್ದರು. 
ಇದರ ವಿರುದ್ಧ ನಟಿ ರಮ್ಯಾ ಸಿಡಿದೆದಿದ್ದರು. ಬೆಂಗಳೂರು ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ಸೋಷಿಯಲ್ ಮೀಡಿಯಾ ಖಾತೆಗಳ ವಿವರದ ಸಹಿತ ಲಿಖಿತ ದೂರು ನೀಡಿದ್ದರು. ಈ ದೂರು ಅನ್ನು ದಾಖಲಿಸಿಕೊಂಡಿದ್ದ ಪೊಲೀಸರು ಸೋಷಿಯಲ್ ಮೀಡಿಯಾ ಖಾತೆಗಳ ಬಗ್ಗೆ ತನಿಖೆ ನಡೆಸಿ  ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಜೈಲಿಗೆ ಕಳಿಸಿದ್ದರು.  ಆರೋಪಿಗಳಿಗೆ ಕೆಲ ತಿಂಗಳವರೆಗೂ ಬೇಲ್ ಕೂಡ ಸಿಕ್ಕಿರಲಿಲ್ಲ. ಈಗ ಕೆಲವರಿಗೆ ಬೇಲ್ ಸಿಕ್ಕಿದೆ. 
ಇನ್ನೂ ದೂರು ನೀಡಿದ್ದ ನಟಿ ರಮ್ಯಾ ಅವರನ್ನು ಭೇಟಿಯಾಗಿ  ಆರೋಪಿಗಳ ಕುಟುಂಬಸ್ಥರು ತಮ್ಮ ಮನೆಯ ಮಗ ಮಾಡಿದ ತಪ್ಪು ಅನ್ನು ಕ್ಷಮಿಸಬೇಕೆಂದು ಕಣ್ಣೀರು ಹಾಕಿ ಮನವಿ ಮಾಡಿಕೊಂಡಿದ್ದರು. ಅವರ ಜೀವನ ಹಾಳಾಗುತ್ತೆ. ಗೊತ್ತಿಲ್ಲದೇ ತಪ್ಪು ಮಾಡಿ ಈಗ ಜೈಲು ಪಾಲಾಗಿದ್ದಾರೆ. ಇಡೀ ಕುಟುಂಬ ಸಂಕಷ್ಟದಲ್ಲಿದೆ.  ಹೀಗಾಗಿ ಮಾನವೀಯತೆಯಿಂದ ಕ್ಷಮಿಸಬೇಕೆಂದು ನಟಿ ರಮ್ಯಾಗೆ ಮನವಿ  ಮಾಡಿದ್ದರು. 
ಇದರಿಂದ ಆ ಕುಟುಂಬಗಳ ಸಂಕಷ್ಟ, ನೋವಿಗೆ ಮಿಡಿದ ನಟಿ ರಮ್ಯಾ,  ತಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದವರನ್ನು ಕ್ಷಮಿಸುವ ದೊಡ್ಡ ಗುಣ ತೋರಿದ್ದಾರೆ. ಇದರಿಂದ ಆರೋಪಿಗಳಿಗೆ ಈಗ ಜಾಮೀನು ಸಿಕ್ಕಿದೆ.  

Advertisment

ಈ ಬಗ್ಗೆ ಈಗ ಮಾಧ್ಯಮಗಳಿಗೆ ಮೋಹಕ ತಾರೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳನ್ನು ನಾನು ಯಾವಾಗಲೋ ಕ್ಷಮಿಸಿದ್ದೇನೆ.  ಆದರೆ ಈ ರೀತಿ ಯಾರಿಗೂ ಮಾಡಬಾರದು ಅನ್ನೋದು ನನ್ನ ಉದ್ದೇಶ. ಇದು ಮತ್ತೆ ರಿಪೀಟ್ ಆಗಲ್ಲ ಅಂತ ಭಾವಿಸುತ್ತೇನೆ. ಅವರಿಗೆ ಶಿಕ್ಷೆ ಕೊಡಬೇಕು ಅನ್ನೋ ಉದ್ದೇಶ ಇರಲಿಲ್ಲ.    ಹೆಣ್ಣು ಮಕ್ಕಳ ವಿಚಾರದಲ್ಲಿ   ಸಮಾಜಕ್ಕೆ ಒಳ್ಳೆ ಸಂದೇಶ ಕೊಡಬೇಕಿತ್ತು  . ಸದ್ಯ ನ್ಯಾಯಾಲಯದ ಮೂಲಕ ಬುದ್ದಿ ಹೇಳಬೇಕಿತ್ತು.  ಈಗ ಎಲ್ಲರೂ ಬೇಲ್ ನಲ್ಲಿ ಆಚೆ ಇದ್ದಾರೆ. ಅವರಿಗೆ ಪಾಠ ಕಲಿಸುವ ಉದ್ದೇಶ ಅಷ್ಟೇ ಇದ್ದದ್ದು.  ತಪ್ಪು ಮಾಡಿದವರ ಕುಟುಂಬ ನನ್ನ ಕ್ಷಮೆ ಕೇಳೋದು ಬೇಡ. ನನಗೆ ಕ್ಷಮೆ ಕೇಳುವ  ಬದಲು ನಿಮ್ಮ ಮಕ್ಕಳಿಗೆ ಬುದ್ದಿ ಹೇಳಿ.  ಬಡವರು ಅಂತೀರಾ,  ಪೋನ್ ಇದೆ, ಡೇಟಾ ಇದೆ ಅಂತ ಹೀಗೆ ಮಾಡಬಾರದು.  ನಿಮ್ಮ ಮಕ್ಕಳಿಗೆ ಬುದ್ದಿ ಹೇಳಿ ಎಂದು ನಟಿ ರಮ್ಯಾ, ಆರೋಪಿಗಳ ಕುಟುಂಬಸ್ಥರಿಗೆ ಹೇಳಿದ್ದಾರೆ. 

ಕೆರಳಿದ ರಮ್ಯಾ.. ದರ್ಶನ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್..!



ಹೆಣ್ಣು ಬೆತ್ತಲೆಯಾಗಿದ್ದರು, ಗಂಡು ಕಣ್ಣೆತ್ತಿ ನೋಡಬಾರದು ನಟಿ ನಿಶ್ವಿಕಾ ನಾಯ್ಡು ಹೇಳಿಕೆ ವಿಚಾರಕ್ಕೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.    ನಿಶ್ವಿಕಾ ಹೇಳಿದ್ದು ಸರಿ ಇದೆ.  ಗಂಡಸರಿಗೆ ಇರುವಷ್ಟೇ ಹಕ್ಕು ನಮಗೂ ಇದೆ.  ನೀವು ಇಷ್ಟ ಬಂದ ಹಾಗೇ ಬಟ್ಟೆ ಹಾಕ್ತೀರಾ. ನಾವು ಹಾಕಬಾರದಾ..?  ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯ ಇದೆ.
ನಿಮಗೆ ಇಷ್ಟ ಇಲ್ಲ ಅಂದ್ರೆ ಕಾಮೆಂಟ್ ಮಾಡೋಕೆ ಹೋಗಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಅಕೌಂಟ್ ಇದೆ. ಅಭಿಪ್ರಾಯ ಇದೆ. ಹಾಗಂತ  ಕೆಟ್ಟ, ಅಶ್ಲೀಲ, ಅಸಭ್ಯ  ಕಾಮೆಂಟ್ ಮಾಡಬಾರದು ಎಂದು ನಟಿ ರಮ್ಯಾ, ಯುವಕರಿಗೆ ಬುದ್ದಿವಾದ ಹೇಳಿದ್ದಾರೆ. 

ACTRESS RAMYA FORGIVES ACCUSSED IN COMMENTS CASE
Advertisment
Advertisment
Advertisment