/newsfirstlive-kannada/media/media_files/2025/08/19/rashmika-2025-08-19-18-22-58.jpg)
ಫೆಬ್ರವರಿ 26 ರಂದು ರಶ್ಮಿಕಾ - ವಿಜಯ ದೇವರಕೊಂಡ ವಿವಾಹ ನಿಗದಿ
ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಮಿಂಚಿದ್ದ ರಶ್ಮಿಕಾ ಮಂದಣ್ಣ ಈಗ ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಈಗ ತೆಲುಗು ಹೀರೋ ವಿಜಯ ದೇವರಕೊಂಡ ಜೊತೆ ಸಪ್ತಪದಿ ತುಳಿಯಲು ರಶ್ಮಿಕಾ ಮಂದಣ್ಣ ಸಜ್ಜಾಗಿದ್ದಾರೆ. ಈಗಾಗಲೇ ಮನೆಯಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ ಫೆಬ್ರವರಿ 26 ರಂದು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ಥಾನದ ಐಷಾರಾಮಿ ಅರಮನೆಯೊಂದರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಇಬ್ಬರು ವಿವಾಹ ಆಗಲಿದ್ದಾರೆ. 2025ರ ಅಕ್ಟೋಬರ್ 3 ರಂದು ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಕನ್ನಡ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಸಿನಿಮಾ ರಂಗ ಪ್ರವೇಶಿಸಿದ್ದರು. ಮೊದಲಿಗೆ ರಕ್ಷಿತ್ ಶೆಟ್ಟಿ ಜೊತೆ ವಿವಾಹವಾಗಲು ಇಬ್ಬರು ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಆದರೇ, ವಿವಾಹದ ಬಳಿಕ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ನಟಿಸುವುದು ರಕ್ಷಿತ್ ಶೆಟ್ಟಿ ಕುಟುಂಬಕ್ಕೆ ಇಷ್ಟ ಇರಲಿಲ್ಲ. ಆದರೇ, ವಿವಾಹ ನಂತರವೂ ಸಿನಿಮಾಗಳಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಬಯಸಿದ್ದರು. ಈ ಭಿನ್ನಾಭಿಪ್ರಾಯದಿಂದಾಗಿ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮುರಿದು ಬಿತ್ತು.
ಬಳಿಕ ಕನ್ನಡ ಚಿತ್ರರಂಗ ಬಿಟ್ಟು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈಗ ತೆಲುಗಿನ ಹೀರೋ ವಿಜಯ ದೇವರಕೊಂಡರನ್ನು ಬಾಳ ಸಂಗಾತಿಯಾಗಿ ವರಿಸಲು ಹೆಜ್ಜೆ ಇಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/10/03/rashmika-2025-10-03-23-27-15.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us