/newsfirstlive-kannada/media/media_files/2026/02/23/rashmika-mandanna-and-vijay-devarakonda-arriving-at-udaipura-2026-02-23-12-49-11.jpg)
ಹಸೆಮಣೆ ಏರಲು ಉದಯಪುರಕ್ಕೆ ಬಂದ ರಶ್ಮಿಕಾ-ವಿಜಯ ದೇವರಕೊಂಡ
ಫೆಬ್ರವರಿ 26 ರಂದು ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ವಿವಾಹ ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಫೆಬ್ರವರಿ 24 ರಿಂದಲೇ ವಿವಾಹ ಕಾರ್ಯಕ್ರಮಗಳು ಆರಂಭವಾಗಲಿವೆ. ಈ ವಿವಾಹಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಅವರ ಪೋಷಕರು, ಸಂಬಂಧಿಗಳು ಹಾಗೂ ನಟ ವಿಜಯ ದೇವರಕೊಂಡ, ಅವರ ಪೋಷಕರು, ಸಂಬಂಧಿಗಳು ಆಪ್ತರು ರಾಜಸ್ಥಾನಕ್ಕೆ ಇಂದು ಆಗಮಿಸಿದ್ದಾರೆ. ಉದಯಪುರ ಏರ್ ಪೋರ್ಟ್ ಗೆ ಆಗಮಿಸಿದ ನಟ, ನಟಿಯರ ಪೋಟೋಗಳು ಈಗ ಲಭ್ಯವಾಗಿವೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟಿ ರಶ್ಮಿಕಾ ಮಂದಣ್ಣ ಉದಯಪುರ ಏರ್ ಪೋರ್ಟ್ ಗೆ ಆಗಮಿಸಿದ ಕ್ಷಣಗಳ ಪೋಟೋಗಳು ಇಲ್ಲಿವೆ ನೋಡಿ.
/filters:format(webp)/newsfirstlive-kannada/media/media_files/2026/02/23/rashmika-mandanna-at-udaipura-airport-2026-02-23-12-52-26.jpg)
ಉದಯಪುರ ಏರ್ ಪೋರ್ಟ್ ನಿಂದ ಹೊರ ಬರುವಾಗ, ಜನರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಎರಡು ಕೈ ಜೋಡಿಸಿ ಕೈ ಮುಗಿದು ಹೊರ ಬಂದ ನಟಿ ರಶ್ಮಿಕಾ ಮಂದಣ್ಣ ಬಳಿಕ ಕಾರ್ ಹತ್ತಿ ಹೋಟೇಲ್ ನತ್ತ ಹೊರಟರು.
/filters:format(webp)/newsfirstlive-kannada/media/media_files/2026/02/23/actor-vijay-devarakonda-at-udaipura-airport-2026-02-23-12-54-14.jpg)
ಇನ್ನೂ ಮದುವೆ ಗಂಡು ಟಾಲಿವುಡ್ ಹೀರೋ ನಟ ವಿಜಯ ದೇವರಕೊಂಡ ಕೂಡ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಏರ್ ಪೋರ್ಟ್ ನಿಂದ ಹೊರ ಬಂದರು. ಏರ್ ಪೋರ್ಟ್ ಹೊರಗೆ ಸೇರಿದ್ದ ಜನರು ಮತ್ತು ಮಾಧ್ಯಮಗಳತ್ತ ಕೈ ಬೀಸಿ ವಿಶ್ ಮಾಡಿದ್ದರು. ಬಳಿಕ ಕಾರ್ ಹತ್ತಿ ಹೋಟೇಲ್ ನತ್ತ ಹೊರಟರು.
/filters:format(webp)/newsfirstlive-kannada/media/media_files/2026/02/23/actor-anand-devarakonda-at-udaipura-airport-2026-02-23-12-55-49.jpg)
ನಟ ವಿಜಯ ದೇವರಕೊಂಡ ಸೋದರ ಆನಂದ್ ದೇವರಕೊಂಡ ಕೂಡ ಉದಯಪುರ ಏರ್ ಪೋರ್ಟ್ ಗೆ ಬಂದಿದ್ದಾರೆ.
/filters:format(webp)/newsfirstlive-kannada/media/media_files/2026/02/23/actor-anand-devarakonda-father-at-udaipura-airport-2026-02-23-12-57-59.jpg)
ನಟ ವಿಜಯ ದೇವರಕೊಂಡ ಹಾಗೂ ಆನಂದ್ ದೇವರಕೊಂಡ ತಂದೆ ಒಂದೇ ಕಾರ್ ಹತ್ತಿ ಹೋಗುವ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
/filters:format(webp)/newsfirstlive-kannada/media/media_files/2026/02/23/actress-rashimka-mother-at-udaipura-airport-2026-02-23-12-59-58.jpg)
ನಟಿ ರಶ್ಮಿಕಾ ಮಂದಣ್ಣ ತಾಯಿ ಹಾಗೂ ಸೋದರಿ ಸೈಮನ್ ಕೂಡ ಉದಯಪುರ ಏರ್ ಪೋರ್ಟ್ ಹೊರಗೆ ಕಾಣಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us