/newsfirstlive-kannada/media/media_files/2025/10/21/vijay-devarkonda-rashmika-2025-10-21-12-27-19.jpg)
ನಟ ವಿಜಯ ದೇವರಕೊಂಡ, ನಟಿ ರಶ್ಮಿಕಾ ಮಂದಣ್ಣ
ತೆಲುಗು ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಇನ್ ಸ್ಟಾಗ್ರಾಮ್ ನಲ್ಲಿ ಪ್ರತೇಕವಾಗಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೇ, ಇಬ್ಬರು ಜೊತೆಯಲ್ಲಿ ಇರುವ ಪೋಟೋವನ್ನು ಹಂಚಿಕೊಂಡಿಲ್ಲ. ಆದರೇ, ಇಬ್ಬರು ಜೊತೆಯಲ್ಲೇ ಇಟಲಿಯ ರೋಮ್‌ಗೆ ಹೋಗಿದ್ದಾರೆ ಎಂಬುದು ಇಬ್ಬರ ಪೋಟೋ ನೋಡಿದ ಯಾರಿಗಾದರೂ ಗೊತ್ತಾಗುತ್ತೆ. ಇಟಲಿಯ ರೋಮ್ ನಲ್ಲಿ ನಟ ವಿಜಯ ದೇವರಕೊಂಡ ಸ್ನೇಹಿತರ ಜೊತೆ ಸುತ್ತಾಡುತ್ತಿರುವ ಪೋಟೋಗಳನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಜಯ ದೇವರಕೊಂಡ ಪೋಸ್ಟ್ ಮಾಡಿದ ಪೋಟೋಗಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿಲ್ಲ. ಇನ್ನೂ ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿರುವ ಪೋಟೋಗಳಲ್ಲೂ ನಟ ವಿಜಯ ದೇವರಕೊಂಡ ಕಾಣಿಸಿಕೊಂಡಿಲ್ಲ.
ಇನ್ನೂ ನಟ ವಿಜಯ ದೇವರಕೊಂಡ ರೋಮ್ ನ ಮ್ಯೂಸಿಯಂ ಒಂದರ ಮುಂದೆ ನಿಂತು ಪೋಟೋಗೆ ಪೋಸ್ ನೀಡಿದ್ದಾರೆ. ಇನ್ನೊಂದು ಪೋಟೋದಲ್ಲಿ ಓರ್ವ ಯುವತಿ ವಿಜಯ ದೇವರಕೊಂಡ ಭುಜದ ಮೇಲೆ ತಲೆ ಹಾಕಿದ್ದಾರೆ. ಆದರೇ, ಯುವತಿ ಮುಖ ಪೋಟೋದಲ್ಲಿ ಕಾಣುತ್ತಿಲ್ಲ. ಅದು ರಶ್ಮಿಕಾ ಮಂದಣ್ಣ ಅಂತ ಫ್ಯಾನ್ಸ್ ಊಹಿಸಿದ್ದಾರೆ.
ಇನ್ನೂ ನಟ ವಿಜಯ ದೇವರಕೊಂಡ ಹ್ಯಾಪಿ ನ್ಯೂ ಹಿಯರ್ , ಮೈ ಡಿಯರ್ ಲವ್ವರ್ಸ್ ಎಂದು ಇನ್ಸಾ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ನಟಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಪ್ರವಾಸದ ಪೋಟೋಗಳನ್ನು ಇನ್ಸಾಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸ್ನೇಹಿತೆಯರ ಜೊತೆ ರಶ್ಮಿಕಾ ಮಂದಣ್ಣ ಇಟಲಿಯ ಪ್ರವಾಸ ಮಾಡಿದ್ದಾರೆ.
ಈಗಾಗಲೇ ಕಳೆದ ವರ್ಷದ ಆಕ್ಟೋಬರ್ ನಲ್ಲಿ ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಇಬ್ಬರು ಮದುವೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಈ ವರ್ಷದ ಫೆಬ್ರವರಿ 26 ರಂದು ಇಬ್ಬರು ರಾಜಸ್ಥಾನದ ಉದಯಪುರದ ಪ್ಯಾಲೇಸ್ ನಲ್ಲಿ ವಿವಾಹವಾಗಲಿದ್ದಾರೆ. ಮದುವೆಗೆ ಸೆಲೆಬ್ರೇಟಿ ಗಳನ್ನು ಆಹ್ವಾನಿಸಲಾಗುತ್ತಿದೆ. ಇಬ್ಬರ ವಿವಾಹವೂ ಖಾಸಗಿಯಾಗಿ ನಡೆಯಲಿದೆ. ಆತ್ಮೀಯರು, ಸ್ನೇಹಿತರ ಸಮ್ಮುಖದಲ್ಲಿ ಇಬ್ಬರು ಹಸೆಮಣೆ ಏರಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us