Advertisment

ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ ಬಳಿ ಬರೋಬ್ಬರಿ 150 ಕೋಟಿ ರೂ.ಆಸ್ತಿಪಾಸ್ತಿ !

ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ಜೋಡಿ ಬರೋಬ್ಬರಿ 150 ಕೋಟಿ ರೂಪಾಯಿ ಆಸ್ತಿಪಾಸ್ತಿ ಹೊಂದಿದ್ದಾರೆ. ಎಲ್ಲೆಲ್ಲಿ ಮನೆ, ಆಸ್ತಿ ಹೊಂದಿದ್ದಾರೆ? ಇಬ್ಬರ ಪೈಕಿ ಯಾರು ಹೆಚ್ಚು ಆರ್ಥಿಕವಾಗಿ ಶ್ರೀಮಂತರು ಎಂಬ ಫುಲ್ ಡೀಟೈಲ್ಸ್ ಇಲ್ಲಿದೆ ಓದಿ.

author-image
Chandramohan
Rashmika mandanna property
Advertisment
  • ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ ಪೈಕಿ ಯಾರು ಶ್ರೀಮಂತರು?
  • ಯಾರ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ?
  • ಮುಂಬೈ, ಗೋವಾ, ಹೈದರಾಬಾದ್, ಬೆಂಗಳೂರು, ಕೊಡಗುನಲ್ಲಿ ಮನೆ ಮಾಲಕಿ ರಶ್ಮಿಕಾ

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್‌ ಸೂಪರ್ ಹೀರೋ  ವಿಜಯ ದೇವರಕೊಂಡ ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಾಳೆ ರಾಜಸ್ಧಾನದ ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೇಲ್ ಅಂಡ್ ರೆಸಾರ್ಟ್ ನಲ್ಲಿ ಸಪ್ತಪದಿ ಮತ್ತು ಮಾಂಗಲ್ಯ ಶಾಸ್ತ್ರ ನಡೆಯಲಿದೆ.  ಕೆಲ ಆಯ್ದ ಗಣ್ಯರಷ್ಟೇ ಮದುವೆಗೆ ಹಾಜರಾಗುತ್ತಿದ್ದಾರೆ. 
ಹಾಗಾದರೇ ವಿಜಯ ದೇವಕೊಂಡ ಹಾಗೂ ರಶ್ಮಿಕಾ ಪೈಕಿ ಯಾರ ಬಳಿ ಎಷ್ಟು ಆಸ್ತಿ ಇದೆ? ಯಾರು ಎಷ್ಟು ಶ್ರೀಮಂತರು? ಎಲ್ಲೆಲ್ಲಿ ಮನೆ ಹೊಂದಿದ್ದಾರೆ ? ಯಾವ್ಯಾವ ಕಾರ್ ಹೊಂದಿದ್ದಾರೆ ಅನ್ನೋ ಇಂಟರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ. ಓದಿ. 

Advertisment


ವಿಜಯ್‌ ದೇವರಕೊಂಡಗೆ ಈಗ 36 ವರ್ಷ. ಕೊಡಗಿನ ಬೆಡಗಿಗೆ 29 ವರ್ಷ. ಇಬ್ಬರಿಗೂ ಸುಮಾರು 7 ವರ್ಷದ ವ್ಯಾತ್ಯಾಸವಿದೆ. ಹಾಗೇ ಸಿನಿಮಾ ಕ್ಷೇತ್ರಕ್ಕೆ ಮೊದಲು ಕಾಲು ಇಟ್ಟವರು ಯಾರು ಅಂತ ನೋಡ್ತಾ ಹೋದ್ರೂ ವಿಜಯ್‌ ಸೀನಿಯರ್‌ ಆಗಿ ಕಾಣಿಸ್ತಿದ್ದಾರೆ. ಹೌದು, ಕನ್ನಡತಿ ರಶ್ಮಿಕಾ 2016 ರಲ್ಲಿ ಬಿಡುಗಡೆಯಾದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಡ್ತಾಳೆ. ಅಲ್ಲಿಂದ ಇಲ್ಲಿಯವರೆಗೂ ಆಕೆ ತಿರುಗಿ ನೋಡಿದ್ದು ಇಲ್ಲವೇ ಇಲ್ಲ. ಕನ್ನಡದಿಂದ ಟಾಲಿವುಡ್‌ಗೆ ಜಂಪ್‌ ಆಗ್ತಾಳೆ. ಅಲ್ಲಿ ಮಹೇಶ್‌ ಬಾಬು, ಅಲ್ಲು ಅರ್ಜುಲ್‌ ಸೇರಿದಂತೆ ಟಾಪ್‌ ಹೀರೋಗಳ ಜೊತೆ ಅಭಿನಯಿಸುವ ಅವಕಾಶ ಸಿಗುತ್ತೆ. ಹಾಗೇ ತಮಿಳು, ಹಿಂದಿಯಲ್ಲೂ ಟಾಪ್‌ ಹೀರೋಗಳ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ತಾರೆ ರಶ್ಮಿಕಾ. ಹೀಗಾಗಿ ಇವತ್ತಿಗೂ ಭಾರತದ ಟಾಪ್‌ ಹೀರೋಯಿನ್‌ಗಳ ಲಿಸ್ಟ್‌ ಓಪನ್‌ ಮಾಡಿದ್ರೆ ಮೊದಲು ಕಾಣಿಸೋದು ರಶ್ಮಿಕಾ ಹೆಸ್ರು. ಇನ್ನು ವಿಜಯ್‌ ದೇವರಕೊಂಡ 2011 ರಲ್ಲಿ ತೆಲುಗು ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ರೂ? ದೊಡ್ಡ ಮಟ್ಟದ ಗೆಲುವು ಸಿಕ್ಕಿದ್ದು 2017 ರಲ್ಲಿ ತೆರೆಕಂಡ ಅರ್ಜುನ್‌ ರೆಡಿ ಸಿನಿಮಾದ ಮೂಲಕ. ಆಮೇಲೆ ಅಲ್ಲೊಂದ್‌ ಇಲ್ಲೊಂದ್‌ ಸಿನಿಮಾಗಳು ಹಿಟ್‌ ಆಗಿವೆ. ಆದ್ರೆ, ಭಾರೀ ದೊಡ್ಡ ಪ್ರಮಾಣದಲ್ಲಿ ಹಿಟ್‌ ಸಿಕ್ಕಿಲ್ಲ. ಹೀಗಾಗಿ ಯಾವುದೇ ದೃಷ್ಟಿಕೋನದಲ್ಲಿ ಅಳೆದುತೂಗಿ ನೋಡಿದ್ರೂ ಕೊಡಗಿನ ಬೆಡಗಿಯೇ ಸಿರಿವಂತೆ.
ಇತ್ತೀಚಿನ ವರ್ಷಗಳಲ್ಲಿ ವಿಜಯ್‌ ದೇವರಕೊಂಡ ಪ್ರತಿಯೊಂದು ಸಿನಿಮಾಗೂ 12 ಕೋಟಿಗೂ ಅಧಿಕ ಸಂಭಾವನೆ ಪಡೀತಿದ್ದಾರೆ. ಹಾಗೇ ರಶ್ಮಿಕಾ ಮಂದಣ್ಣ ಇತ್ತೀಚಿನ ವರ್ಷಗಳಲ್ಲಿ ಸಿನಿಮಾವೊಂದಕ್ಕೆ ಕನಿಷ್ಠ 10 ಕೋಟಿ ಸಂಭಾವನೆಯನ್ನ ಪಡೀತಿದ್ದಾರೆ. ಇನ್ನು ಆಸ್ತಿಯ ವಿಚಾರಕ್ಕೆ ಬರೋದಾದ್ರೆ ರಶ್ಮಿಕಾ ಮಂದಣ್ಣ ಆಸ್ತಿ ಅಂದಾಜು 65 ಕೋಟಿಯಿಂದ 80 ಕೋಟಿ ಅಂತ ಹೇಳಲಾಗ್ತಿದೆ. ಹಾಗೇ ವಿಜಯ್‌ ದೇವರಕೊಂಡ ಆಸ್ತಿ ಅಂದಾಜು 55 ಕೋಟಿಯಿಂದ 70 ಕೋಟಿ ರೂಪಾಯಿ ಅಂತ ಹೇಳಲಾಗ್ತಿದೆ. ಅರೇ ಸಂಭಾವನೆ ಜಾಸ್ತಿ ಪಡೆಯೋದು ವಿಜಯ್‌ ಆದ್ರೆ ಆಸ್ತಿ ಮಾತ್ರ ರಶ್ಮಿಕಾದು ಜಾಸ್ತಿ ಯಾಕೆ ಅನ್ನೋ ಪ್ರಶ್ನೆ ನಿಮ್ಗೆ ಬಂದಿರ್ಬಹುದು. ವಿಷ್ಯ ಏನು ಅಂದ್ರೆ ವಿಜಯ್‌ ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡ್ತಾರೆ ಅಷ್ಟೆ. ಆದ್ರೆ, ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾಗಳು ವರ್ಷಕ್ಕೆ ಐದಾರು ರಿಲೀಸ್‌ ಆಗ್ತಾವೆ. ಹೀಗಾಗಿ ಯಾವುದೇ ದೃಷ್ಟಿಕೋನದಲ್ಲಿ ನೋಡ್ತಾ ಹೋದ್ರೂ ಕೊಡಗಿನ ಬೆಡಗಿಯೇ ಸಿರಿವಂತೆ. 
ಇನ್ನೂ ವಿಜಯ ದೇವರಕೊಂಡ ಬಳಿ ಪ್ರೈವೇಟ್ ಜೆಟ್ ಕೂಡ ಇದೆ. ಪ್ರೈವೇಟ್ ಜೆಟ್ ಬೆಲೆಯೇ 30 ಕೋಟಿ ರೂಪಾಯಿ.  ವಿಜಯ ದೇವರಕೊಂಡ ಹೈದರಾಬಾದ್‌ನ ಜ್ಯೂಬಿಲಿ ಹಿಲ್ಸ್ ನಲ್ಲಿ ಭವ್ಯವಾದ ಬಂಗಲೆಯನ್ನು ಹೊಂದಿದ್ದಾರೆ.
ಇನ್ನೂ ನಟಿ ರಶ್ಮಿಕಾ ದೇಶದ ಪ್ರಮುಖ ನಗರಗಳಲ್ಲಿ ಮನೆ ಮಾಲಕಿಯಾಗಿರುವುದು ವಿಶೇಷ. ಮುಂಬೈ, ಗೋವಾ, ಹೈದರಾಬಾದ್, ಬೆಂಗಳೂರು ಹಾಗೂ ಸ್ವಂತ ಊರಾದ ಕೊಡಗು ಜಿಲ್ಲೆಯಲ್ಲಿ ರಶ್ಮಿಕಾ ಮಂದಣ್ಣ ಮನೆಗಳನ್ನು ಹೊಂದಿದ್ದಾರೆ. 

Rashmika mandanna property (2)




ವಿಜಯ್‌ ದೇವರಕೊಂಡ ಸಿನಿಮಾ ಇಂಡಸ್ಟ್ರಿಗೆ ಸೀನಿಯರ್‌ ಆಗಿರ್ಬಹುದು. ಆದ್ರೆ, ದೊಡ್ಡ ದೊಡ್ಡ ಸೂಪರ್‌ ಸ್ಟಾರ್‌ಗಳ ಜೊತೆ ಸಿನಿಮಾ ಮಾಡ್ತಾ ಇರೋದು ರಶ್ಮಿಕಾ ಮಂದಣ್ಣ. ಆಕೆಗೆ ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಭಾರೀ ಬೇಡಿಕೆ ಇದೆ. ಹೀಗಾಗಿ ಸಂಪಾದನೆಯಲ್ಲಿ ರಶ್ಮಿಕಾನೆ ವಿಜಯ್‌ಗಿಂತ ಹತ್ತು ಹೆಜ್ಜೆ ಮುಂದಿದ್ದಾಳೆ. ಒಟ್ನಲ್ಲಿ ಸಿರಿತನ ಮುಖ್ಯ ಅಲ್ಲ ಸಂಬಂಧ ಮುಖ್ಯ. ಸೋ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡಾಗೂ ನಮ್ಮ ಕಡೆಯಿಂದ ಬೆಸ್ಟ್​ ವಿಷಸ್​. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actress rashmika mandanna property
Advertisment
Advertisment
Advertisment