/newsfirstlive-kannada/media/media_files/2025/10/21/samantha-2025-10-21-12-48-18.jpg)
ನಿರ್ದೇಶಕ ರಾಜ್ ನಿಡಿಮೋರ್ ಜೊತೆ ನಟಿ ಸಮಂತಾ!
ತೆಲುಗು ನಟಿ ಸಮಂತ್ ರುತ್ ಪ್ರಭು ತಮ್ಮ ಆಪ್ತರ ಜೊತೆ ದೀಪಾವಳಿ ಆಚರಿಸಿದ್ದಾರೆ. ಸಮಂತ್ ರುತ್ ಪ್ರಭು ಆಪ್ತರ ವಲಯದಲ್ಲಿ ಈಗ ಯಾರಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಸಿನಿಮಾ ನಿರ್ದೇಶಕ ರಾಜ್ ನಿಡಿಮೋರ್ ಜೊತೆ ದೀಪಾವಳಿ ಆಚರಿಸಿದ್ದಾರೆ. ಇಬ್ಬರೂ ಜೊತೆಯಾಗಿ ಕುಳಿತು ಸ್ಮೈಲ್ ನೊಂದಿಗೆ ಪೋಟೋಗೆ ಪೋಸ್ ನೀಡಿದ್ದಾರೆ. ಇನ್ನೂ ನಟಿ ಸಮಂತ್ ರುತ್ ಪ್ರಭು ದೀಪಾವಳಿಯ ಪಟಾಕಿಗಳನ್ನು ಹಚ್ಚಿದ್ದಾರೆ. ಸಮಂತ್ , ಹಸಿರು ಬಣ್ಣದ ಸೂಟ್ ನಲ್ಲಿ ಹಬ್ಬ ಆಚರಿಸಿದರೇ, ರಾಜ್ ನಿಡಿಮೋರ್, ಬ್ಲೂ ಕುರ್ತಾ ಧರಿಸಿದ್ದಾರೆ. ಮನೆಯ ಅಲಂಕಾರ, ಹೂ, ಹಬ್ಬದ ವೈಬ್ಸ್ ಅನ್ನು ಪೋಟೋಗಳ ಮೂಲಕ ಸಮಂತ್ ಜನರೊಂದಿಗೆ, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಪೋಟೋಗಳಿಗೆ ಕೃತಜ್ಞತೆಯಿಂದ ತುಂಬಿಹೋಗಿದ್ದೇನೆ ಎಂದು ಕ್ಯಾಪ್ಷನ್ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.