/newsfirstlive-kannada/media/media_files/2025/09/11/aishwarya-rai-2025-09-11-17-19-55.jpg)
ಬಾಲಿವುಡ್ ನಟಿ ಐಶ್ಚರ್ಯ ರೈ ಬಚ್ಚನ್
ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ಹೆಸರು ಹಾಗೂ ಎಐ ಮೂಲಕ ಫೋಟೋ, ವಿಡಿಯೋ ಸೃಷ್ಟಿಸಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಅಂತ ಬಾಲಿವುಡ್ ನಟಿ ಐಶ್ವರ್ಯ ರೈ ದೆಹಲಿ ಹೈಕೋರ್ಟ್ಗೆ ದೂರು ನೀಡಿದ್ದರು. ವ್ಯಕ್ತಿಯ ವ್ಯಕ್ತಿತ್ವ ಹಾಗೂ ಹಕ್ಕುಗಳ ರಕ್ಷಣೆಯ ಕಾಯ್ದೆಯಡಿ ದೆಹಲಿ ಹೈಕೋರ್ಟ್ಗೆ ದೂರು ಸಲ್ಲಿಸಿದ್ದರು.
ಸದ್ಯ ದೆಹಲಿ ಹೈಕೋರ್ಟ್ನಿಂದ ನಟಿ ಐಶ್ವರ್ಯ ರೈಗೆ ಬಿಗ್ ರಿಲೀಫ್ ಸಿಕ್ಕಿದೆ. ದೆಹಲಿ ಹೈಕೋರ್ಟ್ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಪರವಾಗಿ ಆದೇಶ ನೀಡಿದೆ. ಇನ್ನು ಮುಂದೆ ಐಶ್ವರ್ಯ ರೈ ಅವರ ಹೆಸರು, ಫೋಟೋ ಅಥವಾ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಸ್ತುಗಳನ್ನು ಅವರ ಅನುಮತಿಯಿಲ್ಲದೆ ಯಾವುದೇ ರೀತಿಯಲ್ಲಿ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.