/newsfirstlive-kannada/media/media_files/2025/08/16/ajai-rao1-2025-08-16-15-04-09.jpg)
ಸ್ಯಾಂಡಲ್ವುಡ್ ಸ್ಟಾರ್ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಪರಸ್ಪರ ವಿಚ್ಛೇದನ ಕೋರಿ ಅಜಯ್ ರಾವ್ ಪತ್ನಿ ಸ್ವಪ್ನ ರಾವ್ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಮಧ್ಯೆ ಅಜಯ್ ರಾವ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ವಿಚ್ಛೇದನ ಬಗ್ಗೆ ಮಾತಾಡಿರೋ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ.. ತ್ರಿದೇವಿ ಪೊನ್ನಕ್ಕ ಕ್ಯೂಟ್ ವಿಡಿಯೋ!
ತಪ್ಪು ಮುಹೂರ್ತದಲ್ಲಿ ಮದುವೆಯಾದೆ!
‘ಎಕ್ಸ್‌ಕ್ಯೂಸ್ ಮಿ’ ಸಿನಿಮಾ ನಂತರ ಹಲವು ಫೈಲ್ಯೂರ್ ಬಳಿಕ ತಾಜ್ ಮಹಲ್ ದೊಡ್ಡ ಹಿಟ್ ಕೊಟ್ಟಿತ್ತು. ಅಂದಿನಿಂದ ಇಲ್ಲಿಯವರೆಗೂ ನನಗೆ ಯಾವ ಫೈಲ್ಯೂರ್ ಮತ್ತು ಸಕ್ಸಸ್ ಕೂಡ ಮ್ಯಾಟರ್ ಆಗಲಿಲ್ಲ. ನಾನು ಪರ್ಸ್‌ನಲ್ ಆಗಲಿ ಅಥವಾ ಪ್ರೊಫೆಶನಲ್ ಆಗಲಿ, ಟೈಂ ಮತ್ತು ಮುಹೂರ್ತ ನೋಡುವುದಕ್ಕೆ ಹೋಗೋದಿಲ್ಲ. ನಾನು ಶಾಸ್ತ್ರಗಳನ್ನು ನಂಬುತ್ತೇನೆ. ಆದರೆ, ಫಾಲೋ ಮಾಡಲ್ಲ.
ಇದು ಕೆಟ್ಟ ಮುಹೂರ್ತ ಹೋಗಬೇಡ ಎಂದು ಹೇಳಿದರೆ ನಾನು ಹೋಗಲ್ಲ. ಯಾರ ಮುಖಾಂತರವಾದರೂ ಗೊತ್ತಾದರೆ ನಾನು ಪಾಲಿಸುತ್ತೇನೆ. ನಾನಾಗಿಯೇ ಹುಡುಕಿಕೊಂಡು ಹೋಗಿ ಮಾಡುವವನಲ್ಲ. ನಾನು ಮದುವೆ ಆಗಿದ್ದು, ನನ್ನ ಪ್ರೊಡಕ್ಷನ್ ಮೂಲಕ ಬಂದ ಕೃಷ್ಣಲೀಲಾ ಮಾಡಿದ್ದು ತಪ್ಪಾದ ಮುಹೂರ್ತದಲ್ಲಿ. ನನ್ನ ಯುದ್ಧಕಾಂಡ ಸಿನಿಮಾ ಮಾಡಿದ್ದು ಯಾವ ಮುಹೂರ್ತ ಅನ್ನೋದು ಗೊತ್ತಿಲ್ಲ. ಸಿನಿಮಾ ಡಿಸಾಸ್ಟರ್ ಕಣೋ ಅಂದಿದ್ರು. ತಪ್ಪಾದ ಮುಹೂರ್ತದಲ್ಲಿ ವಿವಾಹ ಆಗಿದ್ದೀಯಾ ಹೀಗಾಗಿ, ನಿನ್ನ ಮದುವೆ ಒಂದು ವರ್ಷವೂ ಇರಲ್ಲ, ಡಿವೋರ್ಸ್ ಆಗುತ್ತದೆ ಎಂದಿದ್ದರು. ನಾನು ಯಾವ ಮುಹೂರ್ತವನ್ನೂ ನೋಡಿಲ್ಲ. ನನಗೆ ಆಸ್ಟ್ರಾಲಜಿ ಬರುತ್ತದೆ. ಕೆಲಸ ಮಾಡಿದ ಬಳಿಕ ನೋಡಿದಾಗ ಅದು ತಪ್ಪಾದ ಮುಹೂರ್ತ ಅಂತ ಗೊತ್ತಾಯ್ತು. ಕೃಷ್ಣಾರ್ಪಣಮಸ್ತು ಅಂದೆ ಅಷ್ಟೇ. ಅವನೇ ಮಾಡಿಸ್ತಾ ಇದ್ದಾನೆ ಎಂದಿದ್ದಾರೆ.
ಅಜಯ್ ರಾವ್ ಮತ್ತು ಸ್ವಪ್ನ ರಾವ್ 2014 ಡಿಸೆಂಬರ್ 18ರಲ್ಲಿ ಇಬ್ಬರು ಪ್ರೀತಿಸಿ ಮದುವೆ ಆಗಿದ್ದರು. 11 ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಡಿವೋರ್ಸ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇತ್ತೀಚೆಗೆ ಈ ಜೋಡಿ ಹೊಸ ಮನೆ ಗೃಹ ಪ್ರವೇಶ ಮಾಡಿತ್ತು. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ