/newsfirstlive-kannada/media/media_files/2025/10/05/shah_rukh_khan-2025-10-05-19-51-11.jpg)
ಸಂಪತ್ತು ಗಳಿಕೆಯಲ್ಲಿ ಬಾಲಿವುಡ್​ ಸೂಪರ್ ಸ್ಟಾರ್​ ಶಾರುಖ್​ ಖಾನ್​ ಅವರನ್ನೇ ಎಡ್‌ಟೆಕ್ ಯುನಿಕಾರ್ನ್ ಫಿಸಿಕ್ಸ್‌ವಲ್ಲಾ ಸಂಸ್ಥಾಪಕ ಅಲಖ್ ಪಾಂಡೆ ಓವರ್​ಟೇಕ್ ಮಾಡಿದ್ದಾರೆ. 50, 100 ಅಲ್ಲ, ಬರೋಬ್ಬರಿ ಶೇಕಡಾ 223 ರಷ್ಟು ಸಂಪತ್ತು ಏರಿಕೆಯಾಗಿ ಅಲಖ್ ಪಾಂಡೆ, ಶಾರುಖ್​​ ಖಾನ್​ಗಿಂತ ಶ್ರೀಮಂತ ಎನಿಸಿದ್ದಾರೆ.
ಬಾಲಿವುಡ್​ ಸ್ಟಾರ್​ ಶಾರುಖ್​ ಖಾನ್​ ಒಟ್ಟು 12,490 ಕೋಟಿ ರೂಪಾಯಿಗಳ ಸಂಪತ್ತು ಹೊಂದಿದ್ದಾರೆ. ಆದರೆ ಅದೇ ಎಡ್‌ಟೆಕ್ ಯುನಿಕಾರ್ನ್ ಫಿಸಿಕ್ಸ್‌ವಲ್ಲಾ ಸಂಸ್ಥಾಪಕ ಅಲಖ್ ಪಾಂಡೆ ಅವರು 14,510 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ. ಒಂದೇ ವರ್ಷದಲ್ಲಿ ಶಾರುಖ್​​ ಖಾನ್​ಗಿಂತ ಶೇಕಡಾ 223 ರಷ್ಟು ಅಸ್ತಿ ಹೆಚ್ಚಳವಾಗಿದೆ. 2025ರ ಹುರುನ್​ ಇಂಡಿಯಾ ರಿಚ್​ ಲಿಸ್ಟ್​ನಲ್ಲಿ ಅಲಖ್ ಪಾಂಡೆ ಹೆಸರು ಪ್ರಕಟವಾಗುತ್ತಿದ್ದಂತೆ ಈ ಮಾಹಿತಿ ಬಹಿರಂಗಗೊಂಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಬೃಹತ್​ ಕಲೆಕ್ಷನ್​ ಅತ್ತ.. ಹೊಂಬಾಳೆ ಫಿಲಂ ಅಧಿಕೃತ ಮಾಹಿತಿ
ಎಡ್‌ಟೆಕ್ ಯುನಿಕಾರ್ನ್ ಫಿಸಿಕ್ಸ್‌ವಲ್ಲಾ ಕಂಪನಿಯೂ ತ್ವರಿತ ವಿಸ್ತರಣೆಯೊಂದಿಗೆ ಗಮನಾರ್ಹವಾದ ಲಾಭಗಳನ್ನು ಗಳಿಸಿತು. 2025ರ ವರ್ಷದಲ್ಲಿ ಈ ಕಂಪನಿಯು ತನ್ನ ನಷ್ಟವನ್ನು 1,131 ಕೋಟಿಯಿಂದ ರೂಪಾಯಿಯಿಂದ 243 ಕೋಟಿಗೆ ಇಳಿಸಿದ್ದು ಆರ್ಥಿಕ ಸುಧಾರಣೆಗೆ ಹೆಚ್ಚಾಗಲು ಸಹಾಯಕವಾಯಿತು. ಇದರಿಂದ ಕಂಪನಿಯ ಲಾಭವೂ 1,940 ಕೋಟಿ ರೂಪಾಯಿಯಿಂದ 2,886 ಕೋಟಿ ರೂಪಾಯಿಗೆ ಏರಿಕೆ ಆಯಿತು. ಇದೇ ಕಂಪನಿಯ ಮಾರುಕಟ್ಟೆಯ ಬಲವಾದ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಶಾರುಖ್ ಖಾನ್ ಅವರು 2024ರಲ್ಲಿ ತಮ್ಮ ಸಂಪತ್ತಿನಲ್ಲಿ ಶೇ.71 ರಷ್ಟು ಗಣನೀಯ ಏರಿಕೆ ಕಂಡಿದ್ದಾರೆ. ಇದರಿಂದ ಇದೇ ಮೊದಲ ಬಾರಿಗೆ ಬಿಲಿಯನರ್​ ಕ್ಲಬ್​ಗೆ ಸೇರಿಕೊಂಡರು. ಪತ್ನಿ ಗೌರಿ ಖಾನ್ ಸಹ ಸಂಸ್ಥಾಪಕತ್ವದ ರೆಡ್​ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್​ 2023ರಲ್ಲಿ ನಿವ್ವಳ ಲಾಭ 85 ಕೋಟಿ ರೂಪಾಯಿ ಆಗಿದೆ. ಇದರ ಜೊತೆಗೆ ಶಾರುಖ್​ ಖಾನ್ ಅವರ ಜವಾನ್ ಮೂವಿ ಭಾರತದಲ್ಲಿ 640.25 ಕೋಟಿ ರೂಪಾಯಿ ಗಳಿಸಿದರೆ, ವಿಶ್ವವ್ಯಾಪಿ 1,160 ಕೋಟಿ ರೂಪಾಯಿಗಳನ್ನ ಗಳಿಸಿ ದಾಖಲೆ ಬರೆಯಿತು. ಇದೆಲ್ಲಾ ಶಾರುಖ್​ ಖಾನ್ ಸಂಪತ್ತು ಹೆಚ್ಚಾಗಲು ಮುಖ್ಯ ಕಾರಣ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ