/newsfirstlive-kannada/media/media_files/2025/08/17/anaya-bangar-2-2025-08-17-10-14-55.jpg)
ಅನಯಾ ಬಂಗಾರ್ Photograph: (Instagram)
/newsfirstlive-kannada/media/media_files/2025/08/17/anaya-bangar-9-2025-08-17-10-15-47.jpg)
ಅನಯಾ ಬಂಗಾರ್.. ಟೀಮ್ ಇಂಡಿಯಾ, ಆರ್ಸಿಬಿ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮಗಳು. ಹುಡುಗನಾಗಿದ್ದ ಅನಯಾ ಹುಡುಗಿಯಾಗಿ ರೂಪಾಂತರಗೊಂಡ ಬಳಿಕ ಅತಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಟ್ರಾನ್ಸ್ಜೆಂಡರ್ ಆಗಿ ಬದಲಾದ ಬಳಿಕ ಕ್ರಿಕೆಟ್ನಿಂದ ದೂರಾಗಿರೋ ಅನಯಾ ಇದೀಗ ಹೊಸ ಕ್ಷೇತ್ರದ ಕಡೆಗೆ ಮುಖ ಮಾಡಿದ್ದಾರೆ.
/newsfirstlive-kannada/media/media_files/2025/08/17/anaya-bangar-1-2025-08-17-10-16-56.jpg)
ಅನಯಾ ಬಂಗಾರ್ ಕ್ರಿಕೆಟ್ ಫೀಲ್ಡ್ ಬಿಟ್ಟು ಹೊಸ ಫೀಲ್ಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಮಾಡೆಲಿಂಗ್ ಕ್ಷೇತ್ರದ ಕಡೆಗೆ ಅನಯಾ ಮುಖ ಮಾಡಿದ್ದು, ಫೋಟೋಶೂಟ್ಗಳಲ್ಲಿ ಮಿಂಚಿದ್ದಾರೆ. ಈ ವೇಳೆ ಸೀರೆಯುಟ್ಟು ಸಂಭ್ರಮಿಸಿದ್ದು, ಇದ್ರ ಫೋಟೋ ವಿಡಿಯೋಗಳನ್ನ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಅನಯಾ ಬಂಗಾರ್ ಹಂಚಿಕೊಂಡಿದ್ದಾರೆ.
/newsfirstlive-kannada/media/media_files/2025/08/17/anaya-bangar-2025-08-17-10-17-54.jpg)
ಮಾಡೆಲಿಂಗ್ ಕ್ಷೇತ್ರಕ್ಕೆ ಅನಯಾ ಬಂಗಾರ್ ಎಂಟ್ರಿ ಕೊಟ್ಟ ಬೆನ್ನಲ್ಲೇ ಬಿಟೌನ್ನಲ್ಲಿ ಹೊಸ ಸುದ್ದಿ ಹರಿದಾಡ್ತಿದೆ. 19ನೇ ಆವೃತ್ತಿಯ ಬಿಗ್ಬಾಸ್ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಬಿಗ್ಬಾಸ್ಗೆ ಕಂಟೆಸ್ಟಂಟ್ಗಳ ಸೆಲೆಕ್ಷೆನ್ ಪ್ರಕ್ರಿಯೆ ಶುರುವಾಗಿದ್ದು ಅನಯಾ ಬಂಗಾರ್ ಕೂಡ ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
/newsfirstlive-kannada/media/media_files/2025/08/17/anaya-bangar-5-2025-08-17-10-18-52.jpg)
ಈಗಾಗಲೇ ಅನಯಾ ಬಂಗಾರ್ನ ಬಿಗ್ಬಾಸ್ ಟೀಮ್ ಸಂಪರ್ಕಿಸಿದೆ ಎನ್ನಲಾಗ್ತಿದೆ. ಗರ್ವಾಲೋನ್ ಕಿ ಸರ್ಕಾರ್ ಅನ್ನೋ ಪೊಲಿಟಿಕಲ್ ಫಾರ್ಮೆಟ್ನಲ್ಲಿ ಈ ಬಾರಿ ಬಿಗ್ಬಾಸ್ ನಡೆಯಲಿದೆ. ಈ ಕಾನ್ಸೆಪ್ಟ್ ಬಗ್ಗೆ ಅನಯಾ ಜೊತೆಗೆ ಬಿಗ್ಬಾಸ್ ಟೀಮ್ ಈ ಬಗ್ಗೆ ಚರ್ಚೆ ನಡೆಸಿದೆ. ಫೈನಲ್ ನಿರ್ಧಾರ ಏನು ಅನ್ನೋದು ಇನ್ನಷ್ಟೇ ಹೊರಬರಬೇಕಿದೆ.
/newsfirstlive-kannada/media/media_files/2025/08/17/anaya-bangar-6-2025-08-17-10-19-22.jpg)
ಟ್ರಾನ್ಸ್ಜೆಂಡರ್ ಅಗಿ ಬದಲಾದ ಮೇಲೆ ಅನಯಾ ಬಂಗಾರ್ಗೆ ನಿಯಮದಂತೆ ಕ್ರಿಕೆಟ್ ಆಡೋಕೆ ಅವಕಾಶವಿಲ್ಲ. ಅನಯಾ ಬಂಗಾರ್ಗೆ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಟ್ರಾನ್ಸ್ಜೆಂಡರ್ಗೂ ಕ್ರಿಕೆಟ್ ಆಡೋಕೆ ಅವಕಾಶ ಕಲ್ಪಿಸಬೇಕು ಎಂದು ಐಸಿಸಿಯನ್ನ ಒತ್ತಾಯಿಸ್ತಿದ್ದಾರೆ. ಕ್ರಿಕೆಟ್ನಿಂದ ದೂರಾದ್ರೂ ಕ್ರಿಕೆಟ್ ಬ್ಯಾಟ್ ಬಿಡದ ಅನಯಾ ಈಗಲೂ ಅಭ್ಯಾಸ ನಡೆಸ್ತಾರೆ.
/newsfirstlive-kannada/media/media_files/2025/08/17/anaya-bangar-7-2025-08-17-10-19-55.jpg)
ಫಿಟ್ನೆಸ್ ವಿಚಾರದಲ್ಲೂ ಅನಯಾ ಕಾಂಪ್ರಮೈಸ್ ಆಗಲ್ಲ. ಕಠಿಣ ಡಯಟ್ ಫಾಲೋ ಮಾಡೋ ಅನಯಾ ವರ್ಕ್ಔಟ್ ಮಾಡೋದನ್ನ ಮಿಸ್ಸೇ ಮಾಡಲ್ಲ. ಆರ್ಯನ್ ಬಂಗಾರ್ನಿಂದ ಅನಯಾ ಬಂಗಾರ್ ಆಗಿ ಬದಲಾದ ಬಳಿಕ ದೇಹ ಮಾತ್ರವಲ್ಲ.. ಅನಯಾ ಜೀವನವೇ ಬದಲಾಗಿದೆ.
/newsfirstlive-kannada/media/media_files/2025/08/17/anaya-bangar-8-2025-08-17-10-20-39.jpg)
ಕ್ರಿಕೆಟ್ ಮೇಲಿನ ಪ್ರೀತಿ ಹಾಗೇ ಇದ್ರೂ ಮಾಡೆಲಿಂಗ್ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಗ್ಬಾಸ್ಗೇನಾದ್ರೂ ಅನಯಾ ಬದುಕಿಗೆ ಮತ್ತೊಂದು ತಿರುವು ಸಿಗೋದ್ರಲ್ಲಿ ಅನುಮಾನವಿಲ್ಲ.