ಸ್ಯಾಂಡಲ್ವುಡ್ನ ಖ್ಯಾತ ಆ್ಯಂಕರ್ ಅನುಶ್ರೀ ವಿವಾಹ ಮಹೋತ್ಸವ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇತ್ತು. ಸದ್ಯ ಇದಕ್ಕೆ ಉತ್ತರ ಸಿಕ್ಕಿದ್ದು ಆ್ಯಂಕರ್ ಅನುಶ್ರೀ ಅವರ ಮದುವೆಯ ಲಗ್ನ ಪತ್ರಿಕೆ ಎಲ್ಲೆಡೆ ವೈರಲ್ ಆಗಿದೆ. ಉದ್ಯಮಿ ರೋಷನ್ ಅವರ ಜೊತೆ ಅನುಶ್ರೀ ಅವರು ಏಳು ಹೆಜ್ಜೆ ಹಾಕಲಿದ್ದಾರೆ. ಇಬ್ಬರು ಇಷ್ಟು ದಿನ ಪ್ರೀತಿಯಲ್ಲಿದ್ದು ಈಗ ಲವ್ ಕಮ್ ಆರೇಂಜ್ಡ್ ಮಾರೇಜ್ ಆಗುತ್ತಿದ್ದಾರೆ.
ಇದೇ ಆಗಸ್ಟ್ 28 ಗುರುವಾರ, ಬೆಳಗ್ಗೆ 10:56ಕ್ಕೆ ಶುಭ ಮುಹೂರ್ತದಲ್ಲಿ ಅನುಶ್ರೀ ಹಾಗೂ ರೋಷನ್ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕನ್ನಡದ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿ ಅನುಶ್ರೀ ಯಶಸ್ವಿ ಕಂಡಿದ್ದರು. ಈ ಹಿಂದೆ ಬಿಗ್ ಬಾಸ್ನಲ್ಲಿಯೂ ಅನುಶ್ರೀ ಭಾಗವಹಿಸಿದ್ದರು. ಇನ್ನೂ, ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೊದಲು ‘ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ ಎಂದು ಬರೆದಿರುವುದು ವಿಶೇಷ ಎನಿಸುತ್ತದೆ.
ಅನುಶ್ರೀ ಅವರು ಮದುವೆ ಆಗುತ್ತಿರುವ ಸ್ಥಳ ಸಂಭ್ರಮ ಬೈ ಸ್ಟಾನ್ ಲೈನ್ಸ್ ಸ್ಟುಡಿಯೋಸ್, ತಿಟ್ಟಹಳ್ಳಿ, ಕಗ್ಗಲಿಪುರ, ಬೆಂಗಳೂರು- 82
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ