ನಿರೂಪಕಿ ಅನುಶ್ರೀ ಅಭಿಮಾನಕ್ಕೆ ಫ್ಯಾನ್ಸ್​ ಭಾವುಕ.. ಅದ್ಧೂರಿ ಮದುವೆ ಮಂಟಪದಲ್ಲಿ ಅಪ್ಪು ಫೋಟೋ

ಅನುಶ್ರೀ ಅವರು ಏನೇ ಶುಭ ಕಾರ್ಯ ಮಾಡಿದರೂ ಅಪ್ಪು ಅವರನ್ನು ನೆನೆಯುತ್ತಾ ಇರುತ್ತಾರೆ.ಇದೀಗ ಮದುವೆ ಸಮಾರಂಭದಲ್ಲೂ ಪುನೀತ್ ರಾಜ್​ಕುಮಾರ್ ಅವರ ಫೋಟೋವನ್ನು ಮಂಟಪದಲ್ಲಿ ಹಾಕಿಸಿದ್ದಾರೆ ನಟಿ ಅನುಶ್ರೀ.

author-image
Veenashree Gangani
anushree(14)
Advertisment

ಕೊನೆಗೂ ನಿರೂಪಕಿ ಅನುಶ್ರೀ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆಗೆ ಅನುಶ್ರೀ ಅದ್ಧೂರಿಯಾಗಿ ವಿವಾಹ ಆಗಿದ್ದಾರೆ.

ಇದನ್ನೂ ಓದಿ: ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್​ ನಿರೂಪಕಿ ಅನುಶ್ರಿ-ರೋಷನ್; PHOTOS

anushree(15)

ಎಲ್ಲರಿಗೂ ಗೊತ್ತಿದೆ ಅನುಶ್ರೀ ಅವರು ನಟ ಪುನೀತ್ ರಾಜ್​​ಕುಮಾರ್ ಅವರ ದೊಡ್ಡ ಅಭಿಮಾನಿ ಅಂತ. ಅನುಶ್ರೀ ಅವರು ಏನೇ ಶುಭ ಕಾರ್ಯ ಮಾಡಿದರೂ ಅಪ್ಪು ಅವರನ್ನು ನೆನೆಯುತ್ತಾ ಇರುತ್ತಾರೆ.ಇದೀಗ ಮದುವೆ ಸಮಾರಂಭದಲ್ಲೂ ಪುನೀತ್ ರಾಜ್​ಕುಮಾರ್ ಅವರ ಫೋಟೋವನ್ನು ಮಂಟಪದಲ್ಲಿ ಹಾಕಿಸಿದ್ದಾರೆ ನಟಿ ಅನುಶ್ರೀ.

anushree(17)

ಹೌದು, ಅನುಶ್ರೀ ಹಾಗೂ ರೋಷನ್ ವಿವಾಹವಾಗುತ್ತಿರುವ ಮಂಟಪದಲ್ಲಿ ಪುನೀತ್ ರಾಜ್​ಕುಮಾರ್ ಅವರ ಚಿತ್ರವನ್ನು ಇರಿಸಿ ಆ ಚಿತ್ರವನ್ನು ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿದೆ. ಇದೇ ಫೋಟೋ ನೋಡಿದ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ. ಜೊತೆಗೆ ನಿರೂಪಕಿ ಅನುಶ್ರಿ ಅವರ ಅಭಿಮಾನಕ್ಕೆ ಫಿದಾ ಆಗುತ್ತಿದ್ದಾರೆ.

anushree(10)

ಇನ್ನೂ, ನಿರೂಪಕಿ ಅನುಶ್ರೀ ಹಾಗೂ ರೋಷನ್​ ಅದ್ಧೂರಿ ಮದುವೆಗೆ ರಾಜ್​ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ತರುಣ್​ ಸುಧೀರ್, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್​ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Anushree
Advertisment