ಡಾ.ವಿಷ್ಣುವರ್ಧನ್ ಅವರ ಅಸ್ಥಿ ಒಂದೇ ಕಡೆ ಇರೋದು. ಅದು ಇರೋದು ಮೈಸೂರಿನಲ್ಲಿ ಮಾತ್ರ. ಉಳಿದಿರೋದೆಲ್ಲ ವಿಸರ್ಜನೆ ಮಾಡಲಾಗಿದೆ. ಪುತ್ಥಳಿ ಕೆಳಗಡೆ ಆ ಅಸ್ಥಿ ಇದೆ. ಆದರೆ ಅಭಿಮಾನ್ ಸ್ಟುಡಿಯೋದಲ್ಲಿ ಸಂಸ್ಕಾರ ಆಗಿರೋದರಿಂದ ಅದಕ್ಕೆ ಆದ್ಯತೆ ಇದೆ. ಬೆಂಗಳೂರಿನಲ್ಲಿ ಇರುವ ಸ್ಥಳವನ್ನು ಯಾರಾದರೂ ಕೊಂಡುಕೊಂಡರೆ, ವಿಷ್ಣುವರ್ಧನ್ ಅವರಿಗೆ ಮಾತ್ರ ನಮನ ಸಲ್ಲಿಸೋ ರೀತಿ ಇರಬೇಕು ಎಂದು ಅವರ ಅಳಿಯ ಅನಿರುದ್ಧ ಜಟ್ಕರ್ ಅವರು ಹೇಳಿದ್ದಾರೆ.
ಅಭಿಮಾನಿಗಳು ಎಂದು ಮುಖವಾಡ ಹಾಕಿಕೊಂಡು, ವೇಷ ಧರಿಸಿಕೊಂಡು ನಮ್ಮ ಜೊತೆ ಇರುವವರು ಕೆಲವರು ವಿರೋಧಿಗಳು, ಸ್ವಾರ್ಥಿಗಳು ಇರುತ್ತಾರೆ. ಬ್ಯಾನರ್ನಲ್ಲಿ ವಿಷ್ಣುವರ್ಧನ್ ಅವರ ಫೋಟೋಗಿಂತ ಅವರ ಫೋಟೋನೇ ದೊಡ್ಡದಿರುತ್ತದೆ. ಅದೇ ರೀತಿ ಸ್ಮಾರಕದ್ದು ಆಗಬಾರದು. ಸ್ಮಾರಕ ಯಾರು ನಿರ್ಮಿಸುತ್ತಾರೋ ಅದು ಸೇವೆ. ಸೇವೆ ಮಾಡಿದರೆ ಅದನ್ನು ನಾನು ಮಾಡಿದೇ, ನಾನು ಮಾಡಿದೇ ಎಂಬುದು ಇರಬಾರದು. ಈ ರೀತಿಯಲ್ಲಿ ಇದ್ರೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಅನಿರುದ್ಧ ಜಟ್ಕರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ