Advertisment

ರಿಷಭ್ ಶೆಟ್ಟಿರಿಂದ ಮತ್ತೊಂದು ಪೌರಾಣಿಕ ಸಿನಿಮಾಗೆ ಫೆಬ್ರವರಿ 22 ರಂದು ಮುಹೂರ್ತ!: ಅಂಜನಾದ್ರಿಯಲ್ಲಿ ಜೈ ಹನುಮಾನ್‌ಗೆ ಚಾಲನೆ

ಕಾಂತಾರ, ಕಾಂತಾರ ಚಾಪ್ಟರ್-1 ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ, ನಿರ್ದೇಶಕ ರಿಷಭ್ ಶೆಟ್ಟಿ ಮತ್ತೊಂದು ಪೌರಾಣಿಕ ಸಿನಿಮಾಗೆ ತಯಾರಿ ನಡೆಸಿದ್ದಾರೆ. ಫೆಬ್ರವರಿ 22 ರಂದು ಜೈ ಹನುಮಾನ್ ಸಿನಿಮಾದ ಮುಹೂರ್ತ ಅಂಜನಾದ್ರಿಯಲ್ಲೇ ನಡೆಯಲಿದೆ.

author-image
Chandramohan
RISHABHA SHETTY JAI HANUMAN MOVIE
Advertisment

ಶಿವನ ಹೂ ತೋಟದಿಂದ ಉಳ್ಳಾಯ.. ಇವತ್ತು ಮಹಾಬಲ ಆಂಜನೇಯ ಜನ್ಮ ಸ್ಥಳಕ್ಕೆ ಬಂದಿದ್ರು.. ಅದೇ ಅಂಜನಾದ್ರಿಗೆ ಬಂದಿದ್ರು. ಕಾಂತಾರದ ಶಿವನಾಗಿ ಅಬ್ಬರಿಸಿದ್ದ ರಿಷಬ್ ವಾಯುಪುತ್ರ ಹನುಮಂತ ಪಾತ್ರದಲ್ಲಿ ಮುಂಚಲಿದ್ದಾರೆ. ಈ ಚಿತ್ರದ ಮುಹೂರ್ತ ಯಾವಾಗ.. ಯಾವ ಯಾವ ಸಿದ್ಧತೆ ನಡೆದಿದೆ ಅನ್ನೋ ಡೀಟೇಲ್ಸ್​ ಇಲ್ಲಿದೆ.
ಕಾಂತಾರದಂಥಹಾ ಡಿವೈನ್​ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಡಿವೈನ್ ಕತೆಯಲ್ಲಿಯೇ ನಾಯಕನಾಗಿ ನಟಿಸಲಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾ ಶುರುವಾಗುವ ಮುಂಚೆಯೇ ಘೋಷಣೆಯಾಗಿದ್ದ ಜೈ ಹನುಮಾನ್ ಸಿನಿಮಾ ಇದೀಗ ಪ್ರಾರಂಭ ಆಗ್ತಿದ್ದು, ಶೀಘ್ರವೇ ಮುಹೂರ್ತ ನಡೆಯಲಿದೆ ಅಂತ ಚಿತ್ರ ತಂಡ ಅನೌನ್ಸ್​ ಮಾಡಿದೆ. 

ಹಂಪಿಯಲ್ಲಿ ರಿಷಬ್ ಶೆಟ್ಟಿ 'ಜೈ ಹನುಮಾನ್' ಮುಹೂರ್ತ!
ಹನುಮಂತನ ಜನ್ಮಸ್ಥಳ ಅಂಜನಾದ್ರಿಯಲ್ಲಿ ಚಿತ್ರಕ್ಕೆ ಚಾಲನೆ!
ಕಾಂತಾರ.. ಕಾಂತಾರ ಚಾಪ್ಟರ್​ 1 ಸಿನಿಮಾ ಹಿಟ್ ಆಗಿ 4 ತಿಂಗಳು ಕಳೆದ್ರೂ ರಿಷಬ್ ಶೆಟ್ಟಿ ಹೊಸ ಸಿನಿಮಾ ಶುರುವಾಗಿಲ್ಲ. ಜೈ ಹನುಮಾನ್ ಚಿತ್ರದಲ್ಲಿ ನಟಿಸೋಕೆ ಬಹಳ ಹಿಂದೆಯೇ ಡಿವೈನ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಜನವರಿಯಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ಕೊಂಚ ತಡವಾಗಿದ್ದು ಅಂತೂ ಇಂತೂ ಇದೀಗ ಮುಹೂರ್ತ ಫಿಕ್ಸ್ ಆಗಿದೆ. 
ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಪೌರಾಣಿಕ ಸಿನಿಮಾ ಇದು ಎನ್ನಲಾಗ್ತಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಹನುಮಂತನಾಗಿ ರಿಷಬ್ ಶೆಟ್ಟಿ ಬಣ್ಣ ಹಚ್ಚಲಿದ್ದಾರೆ. ಫೆಬ್ರವರಿ 22 ರಂದು ಹಂಪಿಯಲ್ಲಿ ಅದ್ಧೂರಿಯಾಗಿ ಸಿನಿಮಾ ಮುಹೂರ್ತ ನೆರವೇರಲಿದೆ. ಮಾರ್ಚ್‌ನಲ್ಲೇ ಚಿತ್ರೀಕರಣ ಶುರುವಾಗಲಿದೆ. ಆ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿದೆ. ವಿದೇಶದ ಅನುಭವಿ ತಂತ್ರಜ್ಞರು ಚಿತ್ರದ ಗ್ರಾಫಿಕ್ಸ್ ಕೆಲಸಗಳನ್ನ ನಿಭಾಯಿಸಲಿದ್ದಾರೆ.

ವಾಯುಪುತ್ರನ ಪಾತ್ರದಲ್ಲಿ ಶಿವ!
ಕಿಶ್ಕಿಂಧೆಯಲ್ಲಿ ಶೂಟಿಂಗ್, ಅಂಜನಾದ್ರಿ ಸನ್ನಿಧಿಯಲ್ಲಿ ಚಾಲನೆ
ವಾಯುಪುತ್ರ ಹನುಮಂತ ಪಾತ್ರದಲ್ಲಿ ಮುಂಚಲಿದ್ದಾರೆ ರಿಷಬ್
ರಿಷಬ್ ಶೆಟ್ಟಿ ಜೊತೆಗೆ ನಟ ರಾಣಾ ದಗ್ಗುಬಾಟಿ ಸ್ಕ್ರೀನ್ ಶೇರ್
ಈ ಸಿನಿಮಾ ಐಮ್ಯಾಕ್ಸ್ 3D ತಂತ್ರಜ್ಞಾನದಲ್ಲಿ ಮೂಡಿಬರಲಿದೆ
ಏಪ್ರಿಲ್ ತಿಂಗಳಿನಿಂದ ಅಧಿಕೃತವಾಗಿ ಚಿತ್ರೀಕರಣ ಆರಂಭ
ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹೂಡಿಕೆ

ಕಿಶ್ಕಿಂಧೆಯಲ್ಲಿ ಶೂಟಿಂಗ್ ನಡೆಯಲಿದ್ದು, ಹನುಮಂತನ ಜನ್ಮಸ್ಥಳ ಅಂಜನಾದ್ರಿಯ ಸನ್ನಿಧಿಯಲ್ಲಿ ಚಾಲನೆ ಕೊಡಲಿದ್ದಾರೆ. ಕಾಂತಾರದ ಶಿವನಾಗಿ ಅಬ್ಬರಿಸಿದ್ದ ರಿಷಬ್ ವಾಯುಪುತ್ರ ಹನುಮಂತ ಪಾತ್ರದಲ್ಲಿ ಮುಂಚಲಿದ್ದಾರೆ. ಜೈ ಹನುಮಾನ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ನಟ ರಾಣಾ ದಗ್ಗುಬಾಟಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಈ ಜೈ ಹನುಮಾನ್ ಚಿತ್ರ ಐಮ್ಯಾಕ್ಸ್ 3D ತಂತ್ರಜ್ಞಾನದಲ್ಲಿ ಮೂಡಿಬರಲಿದೆ. ಇನ್ನೂ ಜೈ ಹನುಮಾನ್ ತಂಡ ಏಪ್ರಿಲ್ ತಿಂಗಳಿನಿಂದ ಅಧಿಕೃತವಾಗಿ ಚಿತ್ರೀಕರಣ ಆರಂಭಿಸಲು ಪ್ಲಾನ್​ ಮಾಡಿಕೊಂಡಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬಿಗ್ ಬಜೆಟ್‌ ಸಿನಿಮಾಗೆ ಹೂಡಿಕೆ ಮಾಡಲಿದ್ದಾರೆ.

ಕಳೆದ ಒಂದು ವರ್ಷದಿಂದ ಪ್ರಶಾಂತ್ ವರ್ಮಾ ಜೈ ಹನುಮಾನ್ ಚಿತ್ರದ ಕಥೆ.. ಚಿತ್ರಕಥೆ ತಿದ್ದಿ ತೀಡಿದ್ದಾರೆ. ಪೌರಾಣಿಕ ಕಥೆಯನ್ನ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಅದ್ಭುತವಾಗಿ ತೆರೆಮೇಲೆ ತರುವ ಪ್ರಯತ್ನ ನಡೀತಿದೆ. ಹಂಪಿಗೆ ಹೊಂದಿಕೊಂಡಿರುವ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಸ್ಥಳ ಎನ್ನುವುದು ಕೆಲವರ ವಾದ. ಇದೀಗ ಅದೇ ಹಂಪಿಯಲ್ಲಿ ಜೈ ಹನುಮಾನ್ ಚಿತ್ರಕ್ಕೆ ಚಾಲನೆ ಸಿಗುತ್ತಿರುವುದು ವಿಶೇಷ.

ನ್ಯೂಸ್ ಫಸ್ಟ್​ ಬ್ಯುರೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
Rishab Shetty JAI HANUMAN MOVIE BY RISHABH SHETTY
Advertisment
Advertisment
Advertisment