/newsfirstlive-kannada/media/post_attachments/wp-content/uploads/2024/09/Darshan-Bellary-Jail-6.jpg)
ರೇಣುಕಾಸ್ವಾಮಿ ಹತ್ಯೆ ಮಾಡಿ ಗಹಗಹಿಸಿದ್ದ ಡಿ ಗ್ಯಾಂಗ್ಗೆ ಕಾನೂನಿನ ಸಂಕೋಲೆ ಕುತ್ತಿಗೆ ಬಿಗಿ ಹಿಡಿದಿದೆ. ಉಸಿರಾಡೋಕ್ಕಾಗದೇ ಒದ್ದಾಡುವಂತಾಗಿದೆ. ಜಾಮೀನು ರದ್ದಾದ ಕಾರಣ ನಟ ದರ್ಶನ್ ಮತ್ತೆ ಜೈಲುಪಾಲಾಗಿದ್ದು ಸದ್ಯ ಜೈಲಾಧಿಕಾರಿಗಳಿಗೂ ಢವಢವ ತಂದಿದೆ. ಕಾನೂನಿನ ಎದುರು ಎಲ್ಲರೂ ಸಮಾನರೇ. ಐಷಾರಾಮಿ ವ್ಯವಸ್ಥೆ ಮಾಡಿಕೊಟ್ಟಿದ್ದು ಗೊತ್ತಾದ್ರೆ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ.
ಜೈಲಾಧಿಕಾರಿಗಳ ಪರಿಸ್ಥಿತಿ ಗಂಟಲಲ್ಲಿ ಬಿಸಿತುಪ್ಪ ಸಿಕ್ಕಿದಂತಾಗಿದೆ. ನಿನ್ನೆ ಪತ್ನಿ ವಿಜಯಲಕ್ಷ್ಮಿ ನೋಡಲು ಬಂದಾಗಲೂ ಜೈಲಾಧಿಕಾರಿಗಳ ಬಿಗಿ ಕ್ರಮದ ಬಿಸಿ ತಟ್ಟಿದ್ದು ಎರಡೂವರೆ ತಾಸು ಜೈಲಿನ ಹೊರಗೆ ಕಾಯುವಂತಾಗಿದೆ. ಜೈಲಿನ ಪ್ರೊಟೋಕಾಲ್ ಪ್ರಕಾರವೇ ವಿಜಯಲಕ್ಷ್ಮಿಗೆ ದರ್ಶನ್ ಭೇಟಿ ಮಾಡಿಸಲಾಗಿದೆ.
‘ದಾಸ’ನ ಮೇಲೆ ಹದ್ದಿನಕಣ್ಣು!
ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸುಪ್ರೀಂಕೋರ್ಟ್ ಭಯ ಶುರುವಾಗಿದೆ. ಜೈಲಿನಲ್ಲಿ ದರ್ಶನ್ಗೆ ಯಾವುದೇ ಫೋಟೋ, ವಿಡಿಯೋ ಚಿತ್ರೀಕರಣ ಹಾಗೂ ಯಾವುದೇ ರಾಜಾತಿಥ್ಯ ನೀಡಂಗಿಲ್ಲ. ಅಪ್ಪಿತಪ್ಪಿ ಯಾರ ಜೊತೆಗೂ ಫೋಟೋ ತೆಗೆಸಿಕೊಂಡ್ರೆ ಕಷ್ಟಕ್ಕೆ ಸಿಲುಕಲಿದ್ದಾರೆ. ಪರಪ್ಪನ ಅಗ್ರಹಾರದ ಜೈಲಿನ ಅಧಿಕಾರಿಗಳ ಕೆಲಸಕ್ಕೆ ಕುತ್ತು ಬರಲಿದೆ.
ಇದರ ನಡುವೆ ಬಳ್ಳಾರಿ ಜೈಲಿಗೂ ನಟ ದರ್ಶನ್ ಶಿಫ್ಟ್ ಮಾಡಲು ಪ್ರಯತ್ನ ನಡೆದಿದೆ. ಈ ಮಧ್ಯೆ ಪರಪ್ಪನ ಅಗ್ರಹಾರದಲ್ಲೇ ಇನ್ಮುಂದೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ನಟ ದರ್ಶನ್ ಇರುವ ಬ್ಯಾರಕ್ನಲ್ಲಿ ಬಳ್ಳಾರಿ ಸೆಲ್ನಂತೆ ಇಲ್ಲೂ ಸಿಸಿಟಿವಿ ಅಳವಡಿಕೆಗೆ ಜೈಲಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಸಾಮಾನ್ಯ ಖೈದಿಯಂತೆ ನಾಲ್ಕು ಗೋಡೆ ಮಧ್ಯೆ ಇರಲೇಬೇಕಿದೆ. ಸೆಲ್ನಿಂದ ಹೊರಗೆ ಕಾಲಿಡುವಂತಿಲ್ಲ. ಅಲ್ಲೇ ಓಡಾಡಬೇಕು, ಅಲ್ಲೇ ಕೂತ್ಕೋಬೇಕು, ಅಲ್ಲೇ ನಿದ್ದೆ ಮಾಡಬೇಕು. ದಿನದ 24 ಗಂಟೆಗಳೂ ಜೈಲಾಧಿಕಾರಿಗಳ ಕೋಟೆಯಲ್ಲಿ ಬಂಧಿಯಾಗುವಂತಾಗಿದೆ.
ನಟ ದರ್ಶನ್ ಇರಿಸಿರುವ ಜೈಲಿನ ಕೊಠಡಿ ಸ್ವಲ್ಪ ವಿಶಾಲವಾಗಿದ್ದು ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಧರಿಸಿಕೊಳ್ಳಲು ಸೂಚನೆ ನೀಡಲಾಗಿದೆ. ದರ್ಶನ್ ವಾಕ್ ಮಾಡ್ತಾ ಮಲಗಿರೋದು ಬಾಡಿ ವಾರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದರ್ಶನ್ ಕೊಠಡಿಯ ಮುಂದೆ ಬ್ಯಾರಿಕೆಡ್ ಅಳವಡಿಕೆ ಮಾಡಲಾಗಿದ್ದು ಜೈಲಿನಲ್ಲಿ ಆರೋಪಿ ದರ್ಶನ್ಗೆ ಯಾರ ಭೇಟಿಗೂ ಇಲ್ಲ ಅವಕಾಶ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ಊಟ-ತಿಂಡಿಯನ್ನು ಸಿಬ್ಬಂದಿ ಜೈಲಿನ ಕೊಠಡಿಗೆ ಪೂರೈಸುತ್ತಿದ್ದು ದರ್ಶನ್ ಇರುವ ಸೆಲ್ನಲ್ಲಿ ಟಿವಿ ಕೂಡ ಇಲ್ಲ. ಖಾಲಿ ಕೂರಬೇಕು, ಇಲ್ಲವೇ ಪುಸ್ತಕ ಓದುತ್ತಾ ಕಾಲ ಕಳೀಬೇಕು. ಸದ್ಯ ಇಬ್ಬರು ಜೈಲರ್ಗಳು, ಇಬ್ಬರು ಅಸಿಸ್ಟೆಂಟ್ ಜೈಲರ್ಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ