/newsfirstlive-kannada/media/media_files/2025/11/26/celina-jaitley-files-case-agianst-husband-2025-11-26-18-25-06.jpg)
ಪತಿ ಪೀಟರ್ ಜೊತೆ ನಟಿ ಸೆಲಿನಾ ಜೇಟ್ಲಿ
ಪರದೆ ಮೇಲೆ ಕಾಣಿಸೋ ಹೀರೋಯಿನ್​ಗಳ ಜೀವನ.. ನಿಜದಲ್ಲಿ ಕಲ್ಲು.. ಮುಳ್ಳುಗಳಿಂದ ತುಂಬಿರುತ್ತೆ.. ಸೆಲೆಬ್ರಿಟಿ ಫೀಲ್ಡ್​ನಲ್ಲಿ ಬೆಳೆಯೋದು ಒಂದು ಕಷ್ಟವಾದ್ರೆ.. ಬದುಕೋದು ಇನ್ನೊಂದು ರೀತಿಯ ಕಷ್ಟ.. ದಾಂಪತ್ಯ ಜೀವನ ಟೀಕೆ ಎಂಬ ಬಾಣಗಳಿಂದ ಮಾಡಿದ ಹಾಸಿಗೆ.. ನಟಿ, ಮಾಜಿ ಮಿಸ್ ಇಂಡಿಯಾ ಬ್ಯೂಟಿ ಸೆಲಿನಾ ಜೇಟ್ಲಿ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ.
ಉಪ್ಪಿ ಚಿತ್ರದ ನಾಯಕಿ ಸೆಲಿನಾ ಜೇಟ್ಲಿ ಸಂಸಾರದಲ್ಲಿ ಬಿರುಕು!
ಗಂಡನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್ ನಟಿ!
ನಟ ಉಪೇಂದ್ರ ಅಭಿನಯದ ಶ್ರೀಮತಿ ಸಿನಿಮಾದಲ್ಲಿ ಸೋನಿಯಾ ರಾಯ್ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತವಾಗಿದ್ದ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಕೌಟುಂಬಿಕ ಕಲಹ ಕೋರ್ಟ್ ಮೆಟ್ಟಿಲೇರಿದೆ. 2011ರಲ್ಲಿ ರಿಲೀಸ್ ಆದ ಬಾಲಿವುಡ್‌ನ ಐತ್ರಾಜ್ ಸಿನಿಮಾದ ರಿಮೇಕ್ ಆಗಿದ್ದ ಸಿನಿಮಾ ಶ್ರೀಮತಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸೆಲಿನಾ ಜೇಟ್ಲಿ, ತಮ್ಮ ಪತಿ ಪೀಟರ್ ಹಾಗ್ ವಿರುದ್ಧ ಕೌಟುಂಬಿಕ ಹಿಂಸಾಚಾರ ದೂರು ದಾಖಲಿಸಿದ್ದಾರೆ.
ಪತಿಗೆ ನೋಟಿಸ್ ಜಾರಿ.. ಡಿಸೆಂಬರ್ 12 ರಂದು ವಿಚಾರಣೆ!
ಇಂಡಿಯಾ ಮೆಚ್ಚಿದ ಬ್ಯೂಟಿ ಸೆಲಿನಾ ಜೇಟ್ಲಿಗೆ ದಾಂಪತ್ಯ ಜೀವನ ಅಷ್ಟು ಸರಿ ಇರಲಿಲ್ಲವಂತೆ. ಹೋಟೆಲ್ ಉದ್ಯಮಿ ಪೀಟರ್ ಹಾಗ್​ರನ್ನ ಮದುವೆ ಆಗಿ ಕೆಲ ಕಾಲಕ್ಕೆ ಬಾಲಾ ಬಿಚ್ಚಿದ್ದ ಪೀಟರ್ ಹಾಗ್​ ವಿರುದ್ಧ ಬಾಲಿವುಡ್​ ಬ್ಯೂಟಿ ಕೌಟುಂಬಿಕ ಹಿಂಸಾಚಾರದ ಆರೋಪದಡಿ ಮುಂಬೈ ನ್ಯಾಯಾಲಯಕ್ಕೆ 50 ಕೋಟಿ ಪರಿಹಾರ ಮತ್ತು ಮಾಸಿಕ ನಿರ್ವಹಣೆಗಾಗಿ 10 ಲಕ್ಷ ರೂಪಾಯಿ ನೀಡಬೇಕು ಅಂತ ಅರ್ಜಿ ಸಲ್ಲಿಸಿದ್ದಾರೆ. ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹಾಗ್‌ಗೆ ನೋಟಿಸ್ ಜಾರಿ ಕೂಡ ಮಾಡಿದ್ದು, ಪ್ರಕರಣದ ವಿಚಾರಣೆ ಡಿಸೆಂಬರ್ 12 ರಂದು ನಡೆಯಲಿದೆ.
ಪತಿ ಪೀಟರ್ ಹೆಗ್​ ಅಕ್ಟೋಬರ್ 11 ರಂದು ಮಧ್ಯರಾತ್ರಿ ಆಸ್ಟ್ರಿಯಾದಲ್ಲಿರುವ ಮನೆಯಿಂದ ಹೊರ ಹಾಕಿದ್ದಾರಂತೆ. ಅಂದು ಭಾರತಕ್ಕೆ ರಿಟರ್ನ್ ಆಗಿರೋ ಸೆಲಿನಾ.. ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ.
ಪತಿ ವಿರುದ್ಧ ಸೆಲಿನಾ ಜೇಟ್ಲಿ 10 ಆರೋಪಗಳು
01. ತೀವ್ರ ಭಾವನಾತ್ಮಕ, ದೈಹಿಕ, ಲೈಂಗಿಕ, ಮೌಖಿಕ ನಿಂದನೆ
02. ಮನೆ ಕಲಸದವಳಂತೆ ಕಾಣುತ್ತೀಯ ಎಂದು ಹಂಗಿಸುತ್ತಿದ್ದ
03. ನನ್ನನ್ನ ವಿರೂಪಗೊಳಿಸುವ ಬೆದರಿಕೆಗಳು ಹಾಕುತ್ತಿದ್ದ ಹೆಗ್​
04. ಗರ್ಭಾವಸ್ಥೆಯಲ್ಲಿದ್ದಾಗ ದೈಹಿಕ ಹಿಂಸೆ ನೀಡಿದ್ದ ಪೀಟರ್​
05. ತನ್ನ ಸಿನಿಮಾ ವೃತ್ತಿಜೀವನವನ್ನು ತ್ಯಜಿಸಲು ಬಲವಂತ
06. ಆರ್ಥಿಕ ದಬ್ಬಾಳಿಕೆ, ಆಸ್ತಿಗಳು ಮತ್ತು ಖಾತೆ ಮೇಲೆ ಹಿಡಿತ
07. ಮುಂಬೈನಲ್ಲಿ ತನ್ನ ಫ್ಲಾಟ್ ಅನ್ನ ಬಲವಂತವಾಗಿ ಶಿಫ್ಟ್​
08. ಹಣದ ದುರುಪಯೋಗ, ಅವರ ಬ್ಯಾಂಕ್ ಕಾರ್ಡ್ ಬಳಕೆ
09. ತನ್ನ ಮಕ್ಕಳನ್ನು ಸಂಪರ್ಕಿಸದಂತೆ ತಡೆಯುತ್ತಿರುವ ಹೆಗ್​
10. ಭಯದಿಂದ ಆಸ್ಟ್ರಿಯಾದಿಂದ ಪಲಾಯನ ಮಾಡಿದ್ದೇನೆ
(ಮದುವೆ ಬಳಿಕ ತೀವ್ರ ಭಾವನಾತ್ಮಕ, ದೈಹಿಕ, ಲೈಂಗಿಕ ಮತ್ತು ಮೌಖಿಕ ನಿಂದನೆ ಅನುಭವಿಸಿರುವುದಾಗಿ ಸೆಲೀನಾ ಜೇಟ್ಲಿ ಆರೋಪಿಸಿದ್ದಾರೆ. ಪೀಟರ್ ಹ್ಯಾಗ್ ತನ್ನನ್ನ ಮನೆ ಕೆಲಸದವಳಂತೆ ಕಾಣುತ್ತೀಯ ಎಂದು ಹಂಗಿಸುತ್ತಿದ್ದ. ತಿರುಗೆ ಪ್ರಶ್ನೆ ಮಾಡಿದ್ರೆ ನನ್ನನ್ನ ವಿರೂಪಗೊಳಿಸುವ ಬೆದರಿಕೆಗಳು ಹಾಕುತ್ತಿದ್ದರಂತೆ ಪತಿ ಹೆಗ್​. ಗರ್ಭಾವಸ್ಥೆಯಲ್ಲಿ ಕೂಗಾಡಿದ್ದು, ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆ ಬಳಿಕ ಅಪಾರ್ಟ್‌ಮೆಂಟ್‌ನಿಂದ ಹೊರಗೆ ತಳ್ಳಿದ್ದು, ಹೊಡೆದ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ಸಿನಿಮಾ ವೃತ್ತಿಜೀವನವನ್ನ ತ್ಯಜಿಸು ಅಂತ ತನ್ನ ಆರ್ಥಿಕ ಸ್ವಾತಂತ್ರ್ಯ ಕಿತ್ತುಕೊಳ್ಳಲು ಬಲವಂತ ಪಡಿಸಿದ್ದನಂತೆ. ಸೆಲೀನಾ ಜೇಟ್ಲಿಯ ಬಳಿ ಇದ್ದ ಹಣವನ್ನ ನೀಡುವಂತೆ ದಬ್ಬಾಳಿಕೆ ಮಾಡಿ ಆಸ್ತಿಗಳು ಮತ್ತು ಖಾತೆ ಮೇಲೆ ಹಿಡಿತ ಸಾಧಿಸಿದ್ದನಂತೆ. ಮುಂಬೈನಲ್ಲಿ ತನ್ನ ಫ್ಲಾಟ್ ಅನ್ನ ಬಲವಂತವಾಗಿ ಶಿಫ್ಟ್​ ಮಾಡಿಸಿದ್ದಾರೆ ಅಂತ ಅರ್ಜಿಯಲ್ಲಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನ ಪಯೋಗಪಡಿಸಿಕೊಂಡಿದ್ದು ಮಾತ್ರವಲ್ಲದೆ ವಿಮಾ ಆದಾಯವನ್ನ ದುರುಪಯೋಗಪಡಿಸಿಕೊಂಡಿದ್ದಾರೆ. ವಿವಾದಗಳು ಪ್ರಾರಂಭವಾದಾಗಿನಿಂದ ತನ್ನ ಮಕ್ಕಳನ್ನ ಸಂಪರ್ಕಿಸದಂತೆ ಹೆಗ್​ ತಡೆಯುತ್ತಿದ್ದಾರೆ. ಮಕ್ಕಳನ್ನ ಕಡೆದುಕೊಂಡು ಬಂದರೆ ಕಿಡ್ನ್ಯಾಪ್​ ಕೇಸ್​ಗೆ ಹೆದರಿ ಭಯದಿಂದ ಆಸ್ಟ್ರಿಯಾದಿಂದ ಪಲಾಯನ ಮಾಡಿದ್ದೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.)
/filters:format(webp)/newsfirstlive-kannada/media/media_files/2025/11/26/celina-jaitley-files-case-agianst-husband-1-2025-11-26-18-28-58.jpg)
2010 ರಲ್ಲಿ ಪೀಟರ್​ ಹೆಗ್​ ಮತ್ತು ಸೆಲಿನಾ ಮದುವೆಯಾಗಿತ್ತು. 2012 ರಲ್ಲಿ ವಿನ್ಸ್ಟನ್ ಮತ್ತು ವಿರಾಜ್ ಎಂಬ ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ್ದ ಸೆಲಿನಾ. 2017 ರಲ್ಲಿ ಮತ್ತೆ ಎರಡನೇ ಬಾರಿಯೂ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಶಂಶೇರ್ ಎಂಬ ಮಗು ಹೃದಯ ಸಂಬಂಧಿ ಸಮಸ್ಯೆಯಿಂದ ತೀರಿಕೊಂಡಿದ್ದು, ಆರ್ಥರ್ ಮಾತ್ರ ಬದುಕುಳಿದಿದ್ದಾನೆ. ಒಟ್ಟಾರೆ, ಮೂವರು ಮಕ್ಕಳ ಜೊತೆ ಜೀವನ ಕಳೆಯಲು ಆಸೆ ಪಟ್ಟಿರುವ ಸೆಲಿನಾ ಕೋರ್ಟ್​ ಮೊರೆ ಹೋಗಿದ್ದಾರೆ. ಕೋರ್ಟ್​ನಲ್ಲಿ ಪ್ರಕರಣ ಯಾವ ಹಾದಿ ಹಿಡಿಯುತ್ತೋ ಕಾದು ನೋಡಬೇಕಿದೆ.
ನ್ಯೂಸ್ ಫಸ್ಟ್​ ಬ್ಯುರೋ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us