/newsfirstlive-kannada/media/post_attachments/wp-content/uploads/2024/10/Darshan-brother-Dinakar-Thoogudeepa-2.jpg)
ನಟ ದರ್ಶನ್ ರಾಜಕೀಯಕ್ಕೆ ಬರುವುದನ್ನು ಸೆಲೆಬ್ರಿಟಿ ಅಭಿಮಾನಿಗಳು ತೀರ್ಮಾನ ಮಾಡ್ತಾರೆ ಎಂದು ನಟ ದರ್ಶನ್ ಸೋದರ ದಿನಕರ್ ತೂಗುದೀಪ ಹೇಳಿದ್ದಾರೆ. ಇಂದು ಬಿಡುಗಡೆಯಾದ ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ನೋಡಿದ ಬಳಿಕ ದಿನಕರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಡೆವಿಲ್ ಸಿನಿಮಾ ಚೆನ್ನಾಗಿದೆ. ಕೃಷ್ಣ ಪಾತ್ರಕ್ಕಿಂತ ಡೆವಿಲ್ ಪಾತ್ರ ತುಂಬಾ ಇಷ್ಟ ಆಯ್ತು. ಎರಡು ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾನೆ. 14 ವರ್ಷದ ಹಿಂದೆ ಸಾರಥಿ ರಿಲೀಸ್ ಮಾಡಿದಾಗ ಭಯ ಇತ್ತು. ಈಗ ಆ ರೀತಿ ಇಲ್ಲ. ದರ್ಶನ್ ಅವರ ಅಭಿಮಾನಿಗಳೇ ಸಿನಿಮಾ ಮೆರೆಸುತ್ತಿದ್ದಾರೆ.. ರಿಲೀಸ್‌ಗೂ ಮೊದಲೇ ಕಾನ್ಫಿಡೆನ್ಸ್ ಕೊಟ್ಟಿದ್ರು. ನಟ ದರ್ಶನ್ ರಾಜಕೀಯಕ್ಕೆ ಬರುವುದನ್ನು ಅಭಿಮಾನಿಗಳು ಡಿಸೈಡ್ ಮಾಡ್ತಾರೆ. ರಾಜಕೀಯಕ್ಕೆ ಆಫರ್ ಯಾವುದು ಬಂದಿರಲಿಲ್ಲ , ಬುಕ್ ಮೈ ಶೋ ನೆಗೆಟಿವ್ ರಿವೀವ್ಸ್ ಬರ್ತಿತ್ತು . ಹಾಗಾಗಿ ರಿವೀವ್ಸ್ ಆಫ್ ಮಾಡಿಸಿದ್ದೇವೆ. ದುಡ್ಡು ಕೊಟ್ಟು ರೇಟಿಂಗ್ ಮಾಡಿಸುವುದು, ಸಿನಿಮಾ ಕಲ್ಚರ್ ಹಾಳು ಮಾಡುವ ಕೆಲಸ ನಡಿತಾ ಇತ್ತು. ನನ್ನ ರಾಯಲ್ ಸಿನಿಮಾಗೂ ಅನುಭವ ಆಗಿದೆ. ಬೇಕು ಅಂತಾನೇ ನೆಗೆಟಿವ್ ಮಾಡಿಸಿದ್ದರು. ನಮ್ಮ ಸೀನಿಯರ್ ಶಿವಣ್ಣ, ರಿಷಬ್ ಶೆಟ್ಟಿ ಸಿನಿಮಾಗೆ ವಿಶ್ ಮಾಡಿದ್ದಾರೆ. ಸಾಕಷ್ಟು ಸಿನಿಮಾಗೆ ಬೆಂಬಲವಾಗಿ ನಿಂತಿದಾರೆ . ಡೆವಿಲ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ.. ಎಲ್ಲರೂ ತಪ್ಪದೇ ನೋಡಿ ಎಂದು ದರ್ಶನ್ ಸೋದರ ಹಾಗೂ ನಿರ್ದೇಶಕ ದಿನಕರ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/11/devil-darshan-7-2025-12-11-10-44-36.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us