ನವಂಬರ್‌ 3 ರಂದು ನಟ ದರ್ಶನ್, ಪವಿತ್ರಾ ವಿರುದ್ಧ ಕೊಲೆ ಕೇಸ್ ನ ದೋಷಾರೋಪ ನಿಗದಿ: ಜೈಲಿಗೆ ವಕೀಲರ ಭೇಟಿಗೆ ಕೋರ್ಟ್ ಸೂಚನೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ನವಂಬರ್ 3ರ ಸೋಮವಾರ ಬೆಂಗಳೂರು ಕೋರ್ಟ್ ದೋಷಾರೋಪ ಹೊರಿಸಲಿದೆ. ಇಂದೇ ದೋಷಾರೋಪ ಹೊರಿಸಬೇಕಾಗಿತ್ತು. ವಕೀಲರ ಮನವಿ ಮೇರೆಗೆ ಮುಂದೂಡಲಾಗಿದೆ.

author-image
Chandramohan
darshna
Advertisment

 
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನವಂಬರ್ 3 ರಂದು ನಟ ದರ್ಶನ್, ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗುತ್ತೆ.  ಇಂದು ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗಳೆಲ್ಲಾ ಜೈಲಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು . ಕೋರ್ಟ್ ಜಡ್ಜ್ ಇಂದೇ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವುದಾಗಿ ಹೇಳಿದ್ದರು. ಆದರೇ, ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ , ಸ್ಪಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು.  ಇದರಿಂದಾಗಿ ನವಂಬರ್ 3 ರಂದು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವುದಾಗಿ ಕೋರ್ಟ್ ಹೇಳಿದೆ.  ನವಂಬರ್ 3 ರಂದು ಜೈಲಿನಿಂದ ಹೊರಗೆ ಜಾಮೀನಿನ ಮೇಲೆ ಇರುವ ಆರೋಪಿಗಳು ಕೂಡ ಕಡ್ಡಾಯವಾಗಿ ಖುದ್ದಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ನವಂಬರ್ 3 ರಂದು ವಿಚಾರಣೆಗೆ ಹಾಜರಾಗದಿದ್ದರೇ, ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗುತ್ತೆ ಎಂದು ಕೋರ್ಟ್ ಹೇಳಿದೆ.  ನವಂಬರ್ 3ರ ಸೋಮವಾರ ನಟ ದರ್ಶನ್ ಹಾಗೂ ಪವಿತ್ರಾಗೌಡ , ಉಳಿದ ಆರೋಪಿಗಳ ವಿರುದ್ಧ ಯಾವ್ಯಾವ ಸೆಕ್ಷನ್ ಗಳಡಿ ವಿಚಾರಣೆ ನಡೆಯಬೇಕೆಂದು ಕೋರ್ಟ್ ನಿರ್ಧರಿಸಿ, ಆರೋಪ ಹೊರಿಸಲಾಗುತ್ತೆ. ನಟ ದರ್ಶನ್ , ಪವಿತ್ರಾಗೌಡ ವಿರುದ್ಧ ಕೊಲೆ , ಹಲ್ಲೆ, ಕಿಡ್ನ್ಯಾಪ್, ಸಾಕ್ಷ್ಯನಾಶ, ಷಡ್ಯಂತ್ರ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸುವ ಸಾಧ್ಯತೆ ಇದೆ. ಇವುಗಳ ಬಗ್ಗೆ ಮುಂದೆ ಕೋರ್ಟ್ ನಲ್ಲಿ ಪರ - ವಿರೋಧ ವಾದ-ಪ್ರತಿವಾದ ನಡೆಯಲಿದೆ. 

Darshan in jail
Advertisment