/newsfirstlive-kannada/media/media_files/2025/10/13/ramola-2025-10-13-17-35-34.jpg)
ಬೆಂಗಳೂರು: ಇತ್ತೀಚೆಗೆ ನಟಿ ರಮೋಲಾ, ನಿರ್ಮಾಪಕ ಹೇಮಂತ್ ವಿರುದ್ಧ ಅಶ್ಲೀಲವಾಗಿ ವರ್ತನೆ ಮಾಡಿದ್ದರೆಂದು ಆರೋಪ ಮಾಡಿದ್ದರು. ಆದ್ರೆ ರಮೋಲಾ ತಮ್ಮ ವಿರುದ್ಧ ತಪ್ಪು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ನಿರ್ಮಾಪಕ ಹೇಮಂತ್ ಅವರು ಫಿಲಂ ಚೇಂಬರ್​ಗೆ ದೂರು ನೀಡಿದ್ದಾರೆ.
ನಟಿ ರಮೋಲಾ ಅವರಿಗೆ ನೀಡಬೇಕಾದ ಎಲ್ಲಾ ಹಣ ನೀಡಿದ್ದೇನೆ. ಆದರೂ ನನ್ನ ವಿರುದ್ಧ ಅವರು ಆರೋಪ ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ನನ್ನ ಹೆಂಡತಿ ಗರ್ಭಿಣಿ ಇದ್ದು ಇಂತಹ ಕೆಟ್ಟ ಆರೋಪಗಳಿಂದ ಸಾಕಷ್ಟು ನೊಂದಿದ್ದಾರೆ. ಇಂತಹ ಬೆಳವಣಿಗೆಯಿಂದ ನನ್ನ ಹೆಂಡತಿಗೆ ತೊಂದರೆ ಆದರೆ ಅದಕ್ಕೆ ನಟಿ ರಮೋಲಾ ನೇರ ಕಾರಣವೆಂದು ಹೇಳಿ ಫಿಲಂ ಚೇಂಬರ್ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಅತ್ತೆ- ಮಾವ ಕಿರುಕುಳಕ್ಕೆ ಬೇಸತ್ತು ಜೀವ ಬಿಟ್ಟ ನವವಿವಾಹಿತೆ.. ಪೊಲೀಸರ ವಿರುದ್ಧ ಆಕ್ರೋಶ
/filters:format(webp)/newsfirstlive-kannada/media/media_files/2025/10/13/ramola-2025-10-13-17-32-41.jpg)
ಅಸಲಿಗೆ ಆಗಿದ್ದೇನು..?
ರಮೋಲಾ ‘ರಿಚ್ಚಿ’ ಹೆಸರಿನ ಸಿನಿಮಾದಲ್ಲಿ ಅಭಿನಯ ಮಾಡಿದ್ದರು. ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಈಗ ಚಿತ್ರದ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ರಿಚ್ಚಿ ಅವರು ಈ ಬಗ್ಗೆ ಫಿಲ್ಮ್ ಚೇಂಬರ್​​ಗೆ ದೂರು ನೀಡಿದ್ದಾರೆ. ಸಿನಿಮಾದ ಪ್ರಮೋಷನ್​ಗೆ ರಮೋಲಾ ಬರುತ್ತಿಲ್ಲ, ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಈ ಹಿಂದೆ ಹೇಳಿದ್ದರು.
ʻರಿಚ್ಚಿʼ ಸಿನಿಮಾದಲ್ಲಿ ರಮೋಲಾ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಮೋಷನ್ಸ್ ಬನ್ನಿ ಎಂದರೆ ಬರುತ್ತಿಲ್ಲ ಎಂದು ನಿರ್ಮಾಪಕ ಹೇಮಂತ್ ಅವರು ಈ ಹಿಂದೆ ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ದೂರನ್ನು ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ