/newsfirstlive-kannada/media/media_files/2025/10/10/kanthara-daiva-2025-10-10-16-19-38.jpg)
ದೈವ ಅನುಕರಣೆ ವಿರುದ್ಧ ದೈವಕ್ಕೆ ದೂರು ಸಲ್ಲಿಕೆ
ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿದ ಬಳಿಕ ಅನೇಕರು ದೈವವನ್ನು ಅನುಕರಣೆ ಮಾಡುತ್ತಿದ್ದಾರೆ. ಇದರಿಂದ ದೈವಾರಾಧನೆಗೆ ಅಪಚಾರವಾಗಿದೆ ಎಂದು ದೈವಾರಾಧನ ಸಂರಕ್ಷಣಾ ವೇದಿಕೆ, ದೈವ ನರ್ತಕರು ಮತ್ತು ದೈವಾರಾಧಕರು ಮಂಗಳೂರಿನ ಬಜಪೆಯ ಶ್ರೀ ಕ್ಷೇತ್ರ ಪೆರಾರದಲ್ಲಿರುವ ಬ್ರಹ್ಮದೇವರು, ಬಲವಂಡಿ, ಪಿಲಿಚಂಡಿ ದೈವಸ್ಥಾನದಲ್ಲಿ ದೈವದ ಮುಂದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ದೈವದ ಆವೇಶವನ್ನು ಅನುಕರಿಸುತ್ತಿದ್ದಾರೆ. ದೈವಾರಾಧನೆಯನ್ನು ಹಣ ಮಾಡುವ ಉದ್ದೇಶಕ್ಕೆ ಬಳಸಿಕೊಂಡಿರುವುದು ಸರಿಯಲ್ಲ ಎಂದು ಅವರು ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ದೈವವು " ಅನುಕರತೆ, ಅಪಹಾಸ್ಯ, ಹಣ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಲಾಗುದು. ದೈವದ ಆಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ" ಎಂದು ನುಡಿದಿದೆ.
ನನ್ನ ಹೆಸರಿನಲ್ಲಿ ಹಣ ಮಾಡುವವರನ್ನು ನೋಡಿಕೊಳ್ಳುತ್ತೇನೆ ಎಂದು ದೈವ ಹೇಳಿದೆ. ಹಣವೆಲ್ಲಾ ಆಸ್ಪತ್ರೆಗೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ ಎಂದು ಪಿಲ್ಚಂಡಿ ದೈವ ಹೇಳಿದೆ.
ಹಣ ಮಾಡಲು ದೈವವನ್ನ ಬಳಸಿಕೊಂಡಿದ್ದಾರೆ
ಕೆಲವು ದೈವನರ್ತಕರು ಮತ್ತು ದೈವಾರಾಧಕರು ಅನೇಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವದ ಬಗ್ಗೆ ಸಿನಿಮಾ ಮಾಡಬಾರದಿತ್ತು, ದೈವವನ್ನು ಮತ್ತು ದೈವ ನರ್ತನವನ್ನು ಭಕ್ತಿಯಿಂದ ನೋಡಬೇಕು. ಆದರೆ, ಸಿನಿಮಾ ಮಾಡುವ ಮೂಲಕ ಅದನ್ನು ಉದ್ಯಮದ ದೃಷ್ಟಿಯಿಂದ ನೋಡಲಾಗಿದೆ ಎಂದು ಅವರು ದೂರಿದ್ದಾರೆ. ಹಣ ಮಾಡಲು ದೈವವನ್ನು ಬಳಸಿಕೊಂಡಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
ಅಪಹಾಸ್ಯದಿಂದ ನಮಗೆ ತುಂಬಾ ಬೇಸರ
ಈ ಬಗ್ಗೆ ದೈವಾರಾಧಕ ಶ್ರೀಧರ್ ಕವತ್ತಾರ್ ಮಾಧ್ಯಮಗಳಿಗೆ ಮಾತನಾಡಿ, ದೈವದ ಅಪಹಾಸ್ಯದಿಂದ ನಮಗೆ ತುಂಬಾ ಬೇಸರ ಆಗಿದೆ. ನಮ್ಮ ಹೋರಾಟಕ್ಕೆ ದೈವವು ಸಂಪೂರ್ಣ ಬೆಂಬಲ ನೀಡಿದೆ. ಈ ರೀತಿಯ ತಪ್ಪನ್ನು ತುಳುವರು ಮಾಡಬೇಡಿ. ದೈವಕ್ಕೆ ಯಾರೇ ಅಪಹಾಸ್ಯ ಮಾಡಿದರೂ ನಾವು ಅದನ್ನು ವಿರೋಧಿಸುತ್ತೇವೆ," ಎಂದು ಹೇಳಿದರು.
ಕಾಂತಾರ ದೈವಗಳ ಅನುಕರಣೆ.. ಕಾಂತಾರ ನಟ ಬೇಸರ..!
ಕಾಂತಾರ ಚಾಪ್ಟರ್ 1 ನಟ ರಕ್ಷಿತ್ ಶೆಟ್ಟಿ ಮಾತು..
ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಚಿಂಕ್ರಾ ಅನ್ನೋ ಪಾತ್ರ ನಿಭಾಯಿಸಿದ್ದು ರಕ್ಷಿತ್. ದೈವ ನರ್ತನದ ಅನುಕರಣೆ ಮಾಡುತ್ತಾ, ಅಪಮಾವ ಮಾಡೋರಿಗೆ ರಕ್ಷಿತ್ ಮನವಿ ಮಾಡಿದ್ದಾರೆ. ದಯವಿಟ್ಟು ಈ ಥರದ ಅನುಕರಣೆ ಮಾಡಬೇಡಿ. ದೈವಗಳ ಮೇಲೆ ಅಪಾರ ಧಾರ್ಮಿಕ ನಂಬಿಕೆಗಳಿವೆ. ಅದನ್ನು ಅಪಹಾಸ್ಯ ಮಾಡ್ಬೇಡಿ. ಇದರಿಂದ ರಿಷಬ್ ಅವರಿಗೂ ಬೇಸರವಿದೆ ಅಂತಾ ಕಾಂತಾರ ಚಾಪ್ಟರ್ 1 ರ ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.