ಅಕ್ಟೋಬರ್ 30 ರಂದು ನಟ ದರ್ಶನ್ ವಿರುದ್ಧ ದೋಷಾರೋಪ ಹೊರಿಸುವ ಕೋರ್ಟ್‌ : ಅಂದು ಏನೇನಾಗುತ್ತೆ? ದೋಷಾರೋಪ ಎಂದರೇನು?

ಅಕ್ಟೋಬರ್ 30 ರಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ನಟ ದರ್ಶನ್‌, ಉಳಿದ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗುತ್ತೆ. ದೋಷಾರೋಪ ಎಂದರೇನು? ಇದು ಎಷ್ಟು ಮಹತ್ವದ್ದು? ಅಕ್ಟೋಬರ್ 30 ರಂದು ಕೋರ್ಟ್ ನಲ್ಲಿ ಏನೇನಾಗುತ್ತೆ ? ಫುಲ್ ಡೀಟೈಲ್ಸ್ ಇಲ್ಲಿದೆ ಓದಿ.

author-image
Chandramohan
Darshan
Advertisment

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಯನ್ನು  ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟ್  ನಡೆಸುತ್ತಿದೆ.  ಆದರೇ, ಕೋರ್ಟ್ ನಲ್ಲಿ ಇನ್ನೂ ವಿಚಾರಣೆಯೇ ಆರಂಭವಾಗಿಲ್ಲ. ಕೋರ್ಟ್ ಗೆ ಚಾರ್ಜ್ ಷೀಟ್ ಸಲ್ಲಿಕೆಯಾಗಿದ್ದರೂ,  ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲು ಸಾಧ್ಯವಾಗಿಲ್ಲ.   ಆರೋಪಿಗಳೇ ಬೇಕಂತಲೇ ವಿಚಾರಣೆಯನ್ನು ವಿಳಂಬವಾಗುವಂತೆ ತಂತ್ರ ಮಾಡಿದ್ದಾರೆ. ಒಬ್ಬರ ನಂತರ ಒಬ್ಬರು ಕೇಸ್ ನಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ವಿಚಾರಣೆ ಆರಂಭಿಸಲು ಸಾಧ್ಯವಾಗಿಲ್ಲ. ಆದಷ್ಟು ಬೇಗನೇ ವಿಚಾರಣೆ ಆರಂಭಿಸಬೇಕೆಂದು ಪ್ರಾಸಿಕ್ಯೂಷನ್ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಕೋರ್ಟ್ ಗೆ ಮೆಮೋ ಸಲ್ಲಿಸಿದ್ದರು. 
ಇದಾದ ಬಳಿಕ ಇಂದು ಕೋರ್ಟ್, ಅಕ್ಟೋಬರ್ 30 ರಂದು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವುದಾಗಿ ದಿನಾಂಕ ನಿಗದಿ ಮಾಡಿದೆ. 

ದೋಷಾರೋಪ ಹೊರಿಸುವುದು ಎಂದರೇನು?


ದೋಷಾರೋಪ ಹೊರಿಸುವುದು ಅಂದರೇ, ಆರೋಪಿಗಳ ವಿರುದ್ಧ   ಕೋರ್ಟ್ ಗೆ ಈಗಾಗಲೇ ಸಲ್ಲಿಕೆಯಾಗಿರುವ ಚಾರ್ಜ್ ಷೀಟ್ ಆಧಾರದಲ್ಲಿ ಆರೋಪಿಗಳ ವಿರುದ್ಧ ಯಾವ್ಯಾವ ಆರೋಪಗಳಿವೆ ಎಂದು ಕೋರ್ಟ್,  ಸೆಕ್ಷನ್ ಗಳ ಪ್ರಕಾರ ಆರೋಪವನ್ನು ನಿಗದಿಪಡಿಸುತ್ತೆ.  ಆರೋಪಗಳನ್ನು ಹೊರಿಸುತ್ತೆ.   ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವ ಕೆಲಸವನ್ನು ಕೋರ್ಟ್ ನ ನ್ಯಾಯಾಧೀಶರು ಮಾಡುತ್ತಾರೆ. ನಿಮ್ಮ ವಿರುದ್ಧ  ಇಂತಿಂಥ ಸೆಕ್ಷನ್ ಗಳಡಿ ಆರೋಪ ಹೊರಿಸಲಾಗುತ್ತಿದೆ ಎಂದು ಆರೋಪಿಗಳಿಗೆ ಕೋರ್ಟ್ ನ್ಯಾಯಾಧೀಶರು ಓದಿ ಹೇಳುತ್ತಾರೆ. ಆರೋಪಿಗಳು ಆ ಆರೋಪಗಳನ್ನು ಒಪ್ಪಿಕೊಳ್ಳಬಹುದು ಇಲ್ಲವೇ ನಾವು ಒಪ್ಪಿಕೊಳ್ಳಲ್ಲ, ವಿಚಾರಣೆ ಎದುರಿಸುತ್ತೇವೆ ಎಂದು ಕೋರ್ಟ್ ನಲ್ಲಿ ಹೇಳಬಹುದು. 


ಮುಖ್ಯವಾಗಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಇಬ್ಬರೂ  ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಹೀಗಾಗಿ ನಟ ದರ್ಶನ್ ಹಾಗೂ ಆರೋಪಿ ಪವಿತ್ರಾಗೌಡ ವಿರುದ್ಧ ಐಪಿಸಿ ಸೆಕ್ಷನ್ 302 ರಡಿ ಕೊಲೆ ಆರೋಪ ಹೊರಿಸಲಾಗುತ್ತೆ. 
ಇದೇ ರೀತಿ ನಟ ದರ್ಶನ್ ಸೂಚನೆಯಿಂದಾಗಿಯೇ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ , ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿ ಬೆಂಗಳೂರಿಗೆ ಕರೆ ತಂದಿದ್ದ. ಹೀಗಾಗಿ ಐಪಿಸಿ ಸೆಕ್ಷನ್ ನಡಿ ಕಿಡ್ನ್ಯಾಪ್ ಆರೋಪವನ್ನು ನಟ ದರ್ಶನ್ ವಿರುದ್ಧ ಹೊರಿಸಲಾಗುತ್ತೆ. 
ಇನ್ನೂ ನಟ ದರ್ಶನ್ ಕೊಲೆ ಮಾಡಿದ ಬಳಿಕ ರೇಣುಕಾಸ್ವಾಮಿ ಶವವನ್ನು ಬೆಂಗಳೂರಿನ ಸುಮನಹಳ್ಳಿ ಬಳಿಯ ವೃಷಭಾವತಿ ನಾಲೆಗೆ ಎಸೆದು ಸಾಕ್ಷ್ಯನಾಶಕ್ಕೆ ಯತ್ನಿಸಿದ್ದರು. ಹೀಗಾಗಿ ಸಾಕ್ಷ್ಯನಾಶದ ಆರೋಪ ಹೊರಿಸಲಾಗುತ್ತೆ. 
ಇನ್ನೂ ಕೊಲೆಗೆ ಷಡ್ಯಂತ್ರ ನಡೆಸಿದ ಆರೋಪವನ್ನು ನಟ ದರ್ಶನ್ ವಿರುದ್ಧ ಹೊರಿಸಬಹುದು
ಯಾವ ಯಾವ ಸೆಕ್ಷನ್ ಗಳಡಿ ದೋಷಾರೋಪ ಹೊರಿಸಲಾಗಿರುತ್ತೋ ಅದೇ ಸೆಕ್ಷನ್ ಗಳಡಿ ಆರೋಪಕ್ಕೆ ಸಾಕ್ಷ್ಯಧಾರ ಇದೆಯೋ ಇಲ್ಲವೋ ಎಂದು ಮುಂದೆ ಕೋರ್ಟ್ ವಿಚಾರಣೆ ನಡೆಸಲಿದೆ. ಆರೋಪಿ ದರ್ಶನ್ ಪರ ವಕೀಲರು ಹಾಗೂ ಪ್ರಾಸಿಕ್ಯೂಷನ್ ಪರ ವಕೀಲರಿಬ್ಬರೂ ಈ ದೋಷರೋಪ ಹೊರಿಸಿದ ಸೆಕ್ಷನ್ ಗಳ ಆರೋಪಕ್ಕೆ ಸಾಕ್ಷ್ಯ ಇದೆಯೋ ಇಲ್ಲವೋ ಎಂಬ ಬಗ್ಗೆಯೇ ಗಮನ ಕೇಂದ್ರೀಕರಿಸಿ ವಾದ ಮಂಡನೆ ಮಾಡುವರು. ನಟ ದರ್ಶನ್ ವಿರುದ್ಧ ಪ್ರಮುಖವಾಗಿ ನಾಲ್ಕೈದು ಸೆಕ್ಷನ್ ಗಳಡಿ ದೋಷಾರೋಪ ಹೊರಿಸಬಹುದು. 

Bangalore city civil court



ಈ ಎಲ್ಲ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯ, ಆಧಾರಗಳು, ಪ್ರತ್ಯಕ್ಷದರ್ಶಿಗಳನ್ನು ಪ್ರಾಸಿಕ್ಯೂಷನ್ ಪರ ವಕೀಲರು ಮುಂದಿನ ದಿನಗಳಲ್ಲಿ ಕೋರ್ಟ್ ಗೆ ಹಾಜರುಪಡಿಸುತ್ತಾರೆ. ಈ ಆರೋಪಗಳನ್ನು ಸಾಬೀತುಪಡಿಸುವ ಹೊಣೆ ಪ್ರಾಸಿಕ್ಯೂಷನ್ ಪರ ವಕೀಲರ ಮೇಲೆ ಇರುತ್ತೆ.  ಯಾವುದೇ ಅನುಮಾನಕ್ಕೆ ಆಸ್ಪದ ಇಲ್ಲದಂತೆ ಆರೋಪಗಳನ್ನು ಪ್ರಾಸಿಕ್ಯೂಷನ್ ಪರ ವಕೀಲರು ಕೋರ್ಟ್ ನಲ್ಲಿ ಸಾಕ್ಷ್ಯ, ಆಧಾರ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಟೆಕ್ನಿಕಲ್ ಸಾಕ್ಷ್ಯ, ಪೋರೆನ್ಸಿಕ್ ಸಾಕ್ಷ್ಯ ಹಾಗೂ ಇನ್ನೂಳಿದ ಸಾಕ್ಷ್ಯಗಳ  ಮೂಲಕವೇ ಸಾಬೀತುಪಡಿಸಬೇಕು.  
ಆರೋಪಗಳನ್ನು ಪ್ರಾಸಿಕ್ಯೂಷನ್ ಪರ ವಕೀಲರು ಕೋರ್ಟ್ ನಲ್ಲಿ ಸಾಕ್ಷ್ಯಾಧಾರ ಸಮೇತ ಸಾಬೀತುಪಡಿಸಲು ವಿಫಲವಾದರೇ, ಆರೋಪಿಗಳು ಖುಲಾಸೆಯಾಗಿ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯೂ ಇರುತ್ತೆ.  
ಹೀಗಾಗಿ  ಯಾವುದೇ ಅನುಮಾನಕ್ಕೆ  ಆಸ್ಪದ ಇಲ್ಲದಂತೆ ಇದೇ  ಆರೋಪಿಗಳು, ಅವರ ವಿರುದ್ಧ ಹೊರಿಸಲಾದ  ಆರೋಪದ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಸಿಕ್ಯೂಷನ್  ಪರ ವಕೀಲರು ಪ್ರಬಲ ವಾದಮಂಡನೆಯನ್ನು ಸಾಕ್ಷ್ಯಾಧಾರ ಸಮೇತ ಮಾಡಬೇಕಾಗುತ್ತೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಈಗಾಗಲೇ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಪ್ರಸನ್ನಕುಮಾರ್ ಅವರನ್ನು ನೇಮಿಸಲಾಗಿದೆ. ಪ್ರಸನ್ನಕುಮಾರ್ ಅವರು ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಪ್ರಬಲ ವಾದ ಮಂಡನೆಗೆ ಸಜ್ಜಾಗಿದ್ದಾರೆ.  ವಕೀಲ ಪ್ರಸನ್ನ ಕುಮಾರ್ ಈ ಹಿಂದೆ ಸಿಬಿಐ ಹಾಗೂ ಎನ್ಐಎ ಕೇಸ್ ಗಳಲ್ಲೂ ಸಿಬಿಐ, ಎನ್‌ಐಎ ಪರವಾಗಿಯೂ ಕೋರ್ಟ್ ಗಳಲ್ಲಿ ವಾದ ಮಂಡನೆ ಮಾಡಿದ್ದಾರೆ.  ಹೀಗಾಗಿ ದರ್ಶನ್ ವಿರುದ್ಧ ಇರುವ ಎಲ್ಲ ಸಾಕ್ಷ್ಯಗಳನ್ನು ಕೋರ್ಟ್ ಮುಂದೆ ಇಟ್ಟು ದರ್ಶನ್ ವಿರುದ್ಧ ಪ್ರಬಲ ವಾದ ಮಂಡನೆ ಮಾಡುವಲ್ಲಿ ವಕೀಲ ಪ್ರಸನ್ನಕುಮಾರ್ ನಿಷ್ಣಾತರು.  ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ವಿರುದ್ಧ ಆಕ್ರಮ ಆಸ್ತಿ ಗಳಿಕೆ ಕೇಸ್ ನಲ್ಲಿ ಹಿರಿಯ ವಕೀಲ ಬಿ.ವಿ.ಆಚಾರ್ಯರಂತೆ ಹಿರಿಯ ವಕೀಲ ಪ್ರಸನ್ನ ಕುಮಾರ್ ಕೂಡ ಈ ಹೈ ಪ್ರೊಫೈಲ್ ಕೇಸ್ ನಲ್ಲಿ ಪ್ರಬಲ ವಾದ ಮಂಡನೆ ಮಾಡುವ ನಿರೀಕ್ಷೆ ಇದೆ.

SPP PRASSANNA KUMAR DARSHAN CASE

 ಎಸ್‌ಪಿಸಿ ಪ್ರಸನ್ನಕುಮಾರ್ ಹಾಗೂ ಆರೋಪಿ ನಟ ದರ್ಶನ್‌ 



ಕೆಲವೊಂದು ಕೊಲೆ ಕೇಸ್ ಗಳಲ್ಲಿ ಸಾಕ್ಷ್ಯಾಧಾರ ಕೊರತೆಯ ಕಾರಣದಿಂದಲೇ  ಆರೋಪಿಗಳು ಖುಲಾಸೆಯಾಗಿ ಜೈಲಿನಿಂದ ಬಿಡುಗಡೆಯಾದ ಉದಾಹರಣೆ ಇದೆ.  ಕೋರ್ಟ್ ಗೂ ಕೂಡ ಆರೋಪಿಗಳು ಈ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಮನದಟ್ಟು ಆಗಬೇಕು.  ಆಗ ಮಾತ್ರವೇ ಆರೋಪಿಗಳು ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡುತ್ತೆ. 
ಹೀಗಾಗಿ ಇನ್ನೂ ಕೊಲೆ  ಆರೋಪದ ದೋಷಾರೋಪ ಹೊರಿಸಿದರೇ, ಆ ಆರೋಪ ಸಾಬೀತಾದರೇ, ಜೀವಾವಧಿ ಶಿಕ್ಷೆಯಿಂದ ಹಿಡಿದು ಗಲ್ಲುಶಿಕ್ಷೆವರೆಗೂ ಶಿಕ್ಷೆ ವಿಧಿಸಲು  ಕಾನೂನಿನಲ್ಲಿ  ಅವಕಾಶ ಇದೆ. 
ಹೀಗಾಗಿ ನಟ ದರ್ಶನ್ ವಿರುದ್ಧದ ಕೊಲೆ ಆರೋಪ ಸಾಬೀತಾದರೇ, ಕನಿಷ್ಠ 7 ವರ್ಷದಿಂದ ಜೀವ ಇರುವವರೆಗೂ ಜೈಲಿನಲ್ಲಿ ದಿನ ಕಳೆಯಬೇಕೆಂದು ತೀರ್ಪು ನೀಡಬಹುದು. ಇಲ್ಲವೇ ಗಲ್ಲುಶಿಕ್ಷೆಯನ್ನು ನೀಡಬಹುದು. ಇದೆಲ್ಲವೂ ಕೋರ್ಟ್ ವಿವೇಚನೆಗೆ ಬಿಟ್ಟ ವಿಚಾರ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Darshan case accused delay the trial Renukaswamy case
Advertisment