/newsfirstlive-kannada/media/media_files/2025/12/24/rakshita-2025-12-24-14-02-37.jpg)
ಬೆಂಗಳೂರು: ನಾಳೆ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ರಿಲೀಸ್ ಆಗ್ತಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ ವಿಚಾರ ಭಾರೀ ಚರ್ಚೆ ಆಗ್ತಿದೆ. ಇದೀಗ ದಚ್ಚು - ಕಿಚ್ಚನ ಪರ ನಟಿ ರಕ್ಷಿತಾ ಪ್ರೇಮ್ ಮಾತನ್ನಾಡಿದ್ದಾರೆ.
ದರ್ಶನ್ - ಸುದೀಪ್ ನಡುವೆ ಅಂಥದ್ದೇನೂ ವೈರತ್ವ ಇಲ್ಲ. ಅಭಿಮಾನಿಗಳ ಹೆಸರಲ್ಲಿ ಕೆಲವರು ಈ ಥರದ ದ್ವೇಷದ ಹುಟ್ಟಾಕ್ತಿದ್ದಾರೆ. ಇಬ್ಬರನ್ನೂ ತುಂಬಾ ಹತ್ತಿರದಿಂದ ನಾನು ನೋಡಿದ್ದೀನಿ. ಇಬ್ಬರ ಮಧ್ಯೆ ದ್ವೇಷ ಅನ್ನೋದಿಲ್ಲ. ಕಾಟೇರ ಸಿನಿಮಾನ ಸುದೀಪ್ ತಮ್ಮ ಮನೆಯಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಹಾಕಿಸಿದ್ರು.
ಕಾಟೇರ ಸಿನಿಮಾದಲ್ಲಿ ದರ್ಶನ್ ನಟನೆ ನೋಡಿ ಮೆಚ್ಚಿ ಸುದೀಪ್ ಮಾತನಾಡಿದ್ದರು. ದರ್ಶನ್ ಕೂಡ ಅಷ್ಟೇ. ಸುದೀಪ್ ಬಗ್ಗೆ ಒಳ್ಳೆಯದೇ ಮಾತಾಡ್ತಿದ್ರು. ಸುದೀಪ್ ಹೇಳಿಕೆ ಕೊಟ್ಟಿರೋದು ಪೈರಸಿ ಹಾವಳಿ ಬಗ್ಗೆ. ಇದನ್ನು ಇಬ್ಬರ ವಯಕ್ತಿಕ ದ್ವೇಷಗಳಿಗೆ ತಿರುಗಿಸೋದು ಬೇಡ ಎಂದಿದ್ದಾರೆ.
ಇದನ್ನೂ ಓದಿ:ಪೋಷಕರೇ ಹುಷಾರ್! ಟಿನ್ನರ್ ಕುಡಿದು ಪ್ರಾಣಬಿಟ್ಟ ಮೂರು ವರ್ಷದ ಬಾಲಕಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us