/newsfirstlive-kannada/media/media_files/2025/12/25/singer-sonu-nigam-prasises-kannada-language-2025-12-25-18-32-20.jpg)
ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿರಬಹುದು- ಗಾಯಕ ಸೋನು ನಿಗಮ್
ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿರಬಹುದು ಎಂದು ಗಾಯಕ ಸೋನು ನಿಗಮ್ ಭಾವುಕವಾಗಿ ಮಾತನಾಡಿದ್ದಾರೆ. ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವ 2025ರ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಮಾತನಾಡಿದ್ದಾರೆ. ಕರಾವಳಿ ಉತ್ಸವದ 3ನೇ ದಿನದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸೋನು ನಿಗಮ್ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದ್ದಾರೆ.
ಕಳೆದ 25-30 ವರ್ಷಗಳಿಂದ ಸಾವಿರಾರು ಹಾಡುಗಳನ್ನು ಹಾಡುತ್ತಾ ಬಂದಿದ್ದು, ಕನ್ನಡಕ್ಕೆ ವಿಶೇಷ ಸ್ಥಾನವಿದೆ. ನನಗೆ ಇಷ್ಟು ಒಳ್ಳೆಯ ಕನ್ನಡ ಹಾಡುಗಳನ್ನು ಹಾಡುವ ಅವಕಾಶ ಸಿಕ್ಕಿರುವುದು ನಾನು ಯಾವುದೋ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎನಿಸುತ್ತಿದೆ. ಮುಂಬೈನಲ್ಲಿ ವಾಸವಾಗಿದ್ದರೂ ಕನ್ನಡ ಹಾಡು ಹಾಡುವಾಗ ಶಬ್ದಗಳ ಅರ್ಥ, ಭಾವನೆ ಅರ್ಥ ಮಾಡಿಕೊಂಡು ಹಾಡುತ್ತೇನೆ . ವೇದಿಕೆಯಲ್ಲಿ ಕನ್ನಡ ಹಾಡು ಹಾಡುವ ವೇಳೆ ಉಚ್ಛಾರ, ಭಾವನೆ ತಪ್ಪಾದರೆ ದಯವಿಟ್ಟು ಕ್ಷಮಿಸಿ ಎಂದು ಸೋನು ನಿಗಮ್ ಹೇಳಿದ್ದಾರೆ.
ನನ್ನ ಬಳಿ ಹಿಂದಿ ಹಾಡುಗಳಿಗಿಂತ ಸುಮಧುರವಾದ ಕನ್ನಡ ಹಾಡುಗಳಿವೆ. ಬಹುಶಃ ಕನ್ನಡ ಹಾಡುಗಳನ್ನೇ ಹಾಡಿದರೆ ಸುದೀರ್ಘ 6 ಗಂಟೆಗಳ ಕಾಲ ಹಾಡುವಷ್ಟು ಹಾಡುಗಳ ಸಂಗ್ರಹ ನನ್ನಲಿದೆ. ಪ್ರೇಕ್ಷಕರ ಅಪೇಕ್ಷೆಯಂತೆ ಕನ್ನಡ, ಹಿಂದಿ ಎರಡೂ ಹಾಡುಗಳನ್ನ ಹಾಡಿ ಕಾರ್ಯಕ್ರಮ ನೀಡುತ್ತೇನೆ ಎಂದು ಸೋನು ನಿಗಮ್ ಹೇಳಿದ್ದಾರೆ.
ತಮ್ಮ ಭಾವನಾತ್ಮಕ ನುಡಿಗಳಿಂದ ನೆರೆದಿದ್ದ ಲಕ್ಷಾಂತರ ಪ್ರೇಕ್ಷಕರ, ಕನ್ನಡಿಗರ ಮನಗೆಲ್ಲುವ ಪ್ರಯತ್ನವನ್ನು ಗಾಯಕ ಸೋನು ನಿಗಮ್ ಮಾಡಿದ್ದಾರೆ.
ಕಳೆದ ಏಪ್ರಿಲ್, ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಆಡಿದ ಮಾತುಗಳಿಂದ ಕನ್ನಡಿಗರು ಬೇಸರ, ಅಸಮಾಧಾನಗೊಂಡಿದ್ದರು. ಆದರೇ, ಈಗ ಮತ್ತೆ ಅದೇ ತಪ್ಪು ಮಾಡಿಲ್ಲ. ಈ ಭಾರಿ ಸೋನು ನಿಗಮ್ ಕನ್ನಡಿಗರ ಮನ ಗೆಲ್ಲುವ ಮಾತುಗಳನ್ನಾಡಿದ್ದಾರೆ. ಕನ್ನಡಿಗರನ್ನು ರಂಜಿಸಿದ್ದಾರೆ. ಕನ್ನಡದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿ ಕನ್ನಡಿಗರ ಮೆಚ್ಚುಗೆ ಪಡೆಯುವ ಪ್ರಯತ್ನ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us