ಕಾಂತಾರ ಯಶಸ್ಸು ಕಂಡರೂ ರಿಷಭ್ ಶೆಟ್ಟಿ ಸ್ನೇಹಿತ ರಕ್ಷಿತ್ ಬಂದಿಲ್ಲವೇಕೆ? ಎಲ್ಲಿ ಹೋದರು ರಕ್ಷಿತ್ ಶೆಟ್ಟಿ?

ಕಾಂತಾರ -1 ಸಿನಿಮಾ ಸಖತ್ ಸಕ್ಸಸ್ ಕಂಡಿದೆ. ದೇಶ, ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ರಿಷಭ್ ಶೆಟ್ಟಿ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ರಿಷಭ್ ಶೆಟ್ಟಿರನ್ನು ಅಭಿನಂದಿಸುತ್ತಿದ್ದಾರೆ. ಆದರೇ, ರಿಷಭ್ ಶೆಟ್ಟಿ ಸ್ನೇಹಿತ ರಕ್ಷಿತ್ ಶೆಟ್ಟಿ ಇನ್ನೂ ಸಾರ್ವಜನಿಕವಾಗಿ ಅಭಿನಂದಿಸಿಲ್ಲ.

author-image
Chandramohan
RAKSHITH SHETTY AND RISHABH SHETTY

ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿ

Advertisment
  • ಕಾಂತಾರ-1 ಸಕ್ಸಸ್ ಕಂಡರೂ ಬಾರದ ರಕ್ಷಿತ್ ಶೆಟ್ಟಿ
  • ರಿಷಭ್ ಶೆಟ್ಟಿ ಆಪ್ತ ಗೆಳೆಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಲ್ಲಿ ಹೋದರು?
  • ಕಳೆದ ಭಾರಿ ಪ್ರೀಮಿಯರ್ ಶೋನಲ್ಲಿ ಅಭಿನಂದಿಸಿದ್ದ ರಕ್ಷಿತ್ ಶೆಟ್ಟಿ


ಖ್ಯಾತ ನಟ, ನಿರ್ದೇಶಕ ರಿಷಭ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ-1 ಸಿನಿಮಾ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಸಿನಿಮಾಗೆ ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿ ದೈವದ ದರ್ಶನವಾಗಿದೆ ಎಂದು ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಡಿವೈನ್ ಸ್ಟಾರ್ ಪಟ್ಟಕ್ಕೆ ತಾವೇ ಸೂಕ್ತ ಅನ್ನೋದನ್ನು ರಿಷಭ್ ಶೆಟ್ಟಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 
ಕಾಂತಾರ ಸಿನಿಮಾ ಕರ್ನಾಟಕದ ಗಡಿ ದಾಟಿ ಅನ್ಯ ರಾಜ್ಯ, ದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.  ತೆಲುಗು ನಟರೂ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
ಆದರೇ, ರಿಷಭ್ ಶೆಟ್ಟಿಯ ಆಪ್ತ ಗೆಳೆಯ ರಕ್ಷಿತ್ ಶೆಟ್ಟಿ  ಇನ್ನೂ ಎಲ್ಲೂ ಕಾಣಿಸಿಕೊಂಡಿಲ್ಲ. ಕಳೆದ ಭಾರಿ ಕಾಂತಾರ ಸಿನಿಮಾ ಬಿಡುಗಡೆಗೂ ಮುನ್ನ ನಡೆದ ಪ್ರೀಮಿಯರ್ ಶೋನಲ್ಲೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾ ನೋಡಿದ್ದರು. ಸಿನಿಮಾ ಮುಗಿಯುತ್ತಿದ್ದಂತೆ, ಥಿಯೇಟರ್‌ನ ಕೊನೆಯ ಸಾಲಿನಿಂದ ಓಡಿ ಬಂದು ರಿಷಭ್ ಶೆಟ್ಟಿಯನ್ನು ತಬ್ಬಿಕೊಂಡು ಭಾವುಕವಾಗಿ ಅಭಿನಂದಿಸಿದ್ದರು. ಆ ದೃಶ್ಯ  ಇನ್ನೂ ಎಲ್ಲರ ಕಣ್ಣಿಗೆ ಕಟ್ಟಿದಂತೆಯೇ ಇದೆ.  ಅದರ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ತಾವು ನೋಡಬಹುದು. 



ಆದರೇ, ಈ ಭಾರಿ ಕಾಂತಾರ ಪ್ರೀಕ್ವೆಲ್ ಸಿನಿಮಾ ಕಾಂತಾರ-1 ಬಿಡುಗಡೆಯಾಗಿದೆ. ನಿನ್ನೆ ಪ್ರೀಮಿಯರ್ ಶೋ ಕೂಡ ಬೆಂಗಳೂರನಲ್ಲಿ ನಡೆದಿದೆ. ಪ್ರೀಮೀಯರ್ ಶೋಗೂ ರಕ್ಷಿತ್ ಶೆಟ್ಟಿ ಬಂದಿಲ್ಲ. ಮೊದಲ ದಿನದ ಮೊದಲ ಶೋಗೂ ರಕ್ಷಿತ್ ಶೆಟ್ಟಿ ಬಂದಿಲ್ಲ.  ರಕ್ಷಿತ್ ಶೆಟ್ಟಿ ಎಲ್ಲಿ ಹೋದರು? ಸ್ನೇಹಿತ ರಿಷಭ್ ಶೆಟ್ಟಿಯನ್ನು ಈ ಸಿನಿಮಾ ಯಶಸ್ಸಿಗೆ   ಇನ್ನೂ ರಕ್ಷಿತ್ ಶೆಟ್ಟಿ ಅಭಿನಂದಿಸಲಿಲ್ಲವೇ ಎಂದು ಸಿನಿ ಪ್ರಿಯರು ಕೇಳುತ್ತಿದ್ದಾರೆ. ಸ್ನೇಹಿತರು ಎಂದಿಗೂ ಸ್ನೇಹಿತರೇ. ಯಶಸ್ಸು, ಸೋಲು ಎರಡರಲ್ಲೂ ಜೊತೆಗೆ  ಇರುವವರು ಸ್ನೇಹಿತರು. ಈ ಹಿಂದೆ ರಿಷಭ್ ಜೊತೆಗೆ ಹೆಜ್ಜೆ ಹಾಕಿದ್ದ ರಕ್ಷಿತ್ ಶೆಟ್ಟಿ ಯಶಸ್ಸಿನ ಖುಷಿಯ ಸಂದರ್ಭದಲ್ಲಿ ಎಲ್ಲಿದ್ದಾರೆ? ಹೇಗಿದ್ದಾರೆ? ಏಕೆ  ಇನ್ನೂ ಸ್ನೇಹಿತ ರಿಷಭ್ ಶೆಟ್ಟಿಯನ್ನು ಸಾರ್ವಜನಿಕವಾಗಿ  ಅಭಿನಂದಿಸಲು ಬಂದಿಲ್ಲ ಎಂದು ಸಿನಿಮಾ ಪ್ರೇಕ್ಷಕರು ಕೇಳುತ್ತಿದ್ದಾರೆ. 

RAKSHITH SHETTY AND RISHABH SHETTY (1)


 
ಇನ್ನೂ ಸೆಪ್ಟೆಂಬರ್ 22 ರಂದು ರಕ್ಷಿತ್ ಶೆಟ್ಟಿ, ಕಾಂತಾರ-1 ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೇ, ಆದಾದ ಬಳಿಕ ಕಾಂತಾರ ಸಿನಿಮಾ ಬಗ್ಗೆ ರಕ್ಷಿತ್ ಶೆಟ್ಟಿ ಯಾವುದೇ ಟ್ವೀಟ್ ಮಾಡಿಲ್ಲ. ಟ್ವೀಟರ್ ನಲ್ಲೂ ಕಾಂತಾರ ಸಕ್ಸಸ್ ಬಗ್ಗೆ ಅಭಿನಂದಿಸಿ ಟ್ವೀಟ್ ಕೂಡ ಮಾಡಿಲ್ಲ. 
ಇನ್ನೂ ರಾಜ್ ಬಿ ಶೆಟ್ಟಿ ಕೂಡ ಕಾಂತಾರ-1 ಸಿನಿಮಾ ನೋಡಲು ಬಂದಿಲ್ಲ. ರಾಜ್ ಶೆಟ್ಟಿ ಎಲ್ಲಿ ಹೋದರು ಎಂಬ ಕುತೂಹಲದ ಪ್ರಶ್ನೆ ಸಿನಿಮಾ ಪ್ರೇಕ್ಷಕರನ್ನು ಕಾಡುತ್ತಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

where is Rakshith shetty
Advertisment