/newsfirstlive-kannada/media/media_files/2025/08/11/dhruva_sarja-1-2025-08-11-11-33-07.jpg)
ಬೆಂಗಳೂರು: ಧ್ರವಾ ಸರ್ಜಾ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಮುಂಬೈಯಲ್ಲಿ ದೂರು ದಾಖಲು ಮಾಡಿದ್ದರು. ಇದಾದ ಮೇಲೆ ನಿರ್ದೇಶಕ ರಾಘವೇಂದ್ರ ಹೆಗಡೆರನ್ನ ಕನ್ನಡ ವಿರೋಧಿ ಎಂದು ಬಿಂಬಿಸಲಾಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸ್ಪಷ್ಟನೆ ಕೊಟ್ಟಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ಹೆಗಡೆ, ನಾನು ಹುಟ್ಟಿದ್ದು ಕರಾವಳಿಯಲ್ಲಿ, ಬೆಳೆದಿದ್ದು ಕರ್ನಾಟಕ ಸರ್ಕಾರದ ಆಶ್ರಮ ಶಾಲೆಯಲ್ಲಿ. 10ನೇ ತರಗತಿ ಓದಿ, ವೈಯಕ್ತಿ ಜೀವನಕ್ಕಾಗಿ ಮುಂಬೈಗೆ ಬಂದಿದ್ದೇನೆ. ಮುಂಬೈನಲ್ಲಿ ಆಟೋ ಡ್ರೈವರ್ ಆಗಿ, ವೇಟರ್, ಹೋಟೆಲ್ ಮಾಲೀಕನಾಗಿ, ಚಿತ್ರರಂಗದ ಸಹ ಸಂಕಲನಕಾರನಾಗಿ, ನಿರ್ದೇಶಕನಾಗಿ, ಆರ್ಹೆಚ್ ಎಂಟರ್ಟೈನ್ಮೆಂಟ್ ಓನರ್ ಆಗಿ ಸೆಟಲ್ ಆದೆ. ನಂತರ ನಿರ್ಮಾಪಕನಾಗಬೇಕು, ನಿರ್ದೇಶಕನಾಗಬೇಕು ಎಂದಾಗ ಮೊದಲು ಆಲೋಚನೆ ಬಂದಿದ್ದು ನನ್ನ ತಾಯಿ ನಾಡು ಕನ್ನಡ ಎಂದು ಹೇಳಿದ್ದಾರೆ.
ದರ್ಶನ್ ಅವರ ಜೊತೆ ಜಗ್ಗುದಾದಾ ಸಿನಿಮಾ ಮಾಡಿದೆ. ಅದು ಸೂಪರ್ ಹಿಟ್ ಆಯಿತು. ಶನಿ ಸೀರಿಯಲ್, ಮಹಾಕಾಳಿ ಸೀರಿಯಲ್ ಮಾಡಿದೆ. 2ನೇ ಸಿನಿಮಾ ಮಾಡಬೇಕು ಎಂದು ಧ್ರುವ ಸರ್ಜಾಗೆ ಹಣ ನೀಡಿದ್ದೆ. ಈ ನಡುವೆ ಸಿನಿಮಾ ಮಾಡುವ ಸಂಬಂಧ ಹಣದ ವ್ಯವಹಾರದಲ್ಲಿ ಮಾತುಕತೆಗಳು ನಡೆದವು. ಧ್ರುವ ಅವರು ಕೆಡಿ ಸಿನಿಮಾ ಮುಗಿಸಬೇಕು ಅಂತ ಕೇಳಿಕೊಂಡರು. ಅದಕ್ಕೆ ನಾನು ಓಕೆ ಎಂದಿದ್ದೆ. ಹೀಗೆ ಮುಗಿತ ಮುಗಿತಾ 8 ವರ್ಷ ಕಳೆದಿದೆ ಎಂದರು.
ನಂತರ ತಮಿಳಿನ ಅಮರನ್ ಸಿನಿಮಾ ರಿಲೀಸ್ ಆಗುತ್ತೆ. ಇದರಲ್ಲಿನ ಸ್ಟೋರಿ ಶೇ.60 ರಷ್ಟು ಇತ್ತು. ಹೀಗಾಗಿ ಕಥೆ ಕ್ಯಾನ್ಸಲ್ ಮಾಡೋಣ ಎಂದೆ. ಬಳಿಕ ಧ್ರವ ಸರ್ಜಾ ಅವರೇ ಸಿನಿಮಾ ಮಾಡಲು ಲೆಟರ್ ಕೊಟ್ಟರು. ಅದು ಕೂಡ ಕನ್ನಡದಲ್ಲೇ ಇದೆ. ಒಮ್ಮೆ ಧ್ರುವ ಸರ್ಜಾ, ಅರ್ಜುನ್ ಸರ್ಜಾ ಇಬ್ಬರು ಬಂದು ಮಾತನಾಡಿದರು. ಅವರು ಎಂಥಹ ಸಿನಿಮಾ ಮಾಡುತ್ತೀಯಾ ಎಂದರು ಕೇಳಿದರು. ಅದಕ್ಕೆ ನಾನು ಕನ್ನಡ ಸಿನಿಮಾನೇ ಮಾಡ್ತಿನಿ, ಪ್ಯಾನ್ ಇಂಡಿಯಾ ಸಿನಿಮಾ ಬೇಡ, ಹಣ ಖರ್ಚು ಆಗುತ್ತೆ ಎಂದು ಅವರಿಗೆ ಹೇಳಿದ್ದೆ ಎಂದು ಹೇಳಿದ್ದಾರೆ.
ಮಾರ್ಟಿನ್, ಕೆಡಿ ಎಲ್ಲ ಪ್ಯಾನ್ ಇಂಡಿಯಾ ಸಿನಿಮಾ. ಈಗ ಮುಂಬೈ ಪ್ರಡ್ಯೂಸರ್ಗೆ ಡೇಟ್ ಕೊಟ್ಟಿದ್ದೇನೆ. ಅವರ ನಂತರ ನೀನು ಮಾಡು ಎಂದರು. ಅದಕ್ಕೆ ಈಗಲೇ 8 ವರ್ಷ ಆಗಿದೆ. ಇನ್ನೊಂದು ಮೂವಿ ಎಂದರೆ 4 ವರ್ಷ ಸೇರಿ ಒಟ್ಟು 12 ವರ್ಷ ಹೋಗಿ ಬಿಡುತ್ತೆ. ಈ ಮಧ್ಯೆ ಪೀಪಲ್ಸ್ ಮೀಡಿಯಾದವರು ನಿಮಗಿಂತ ಮೊದಲೇ ನಾನು ಹಣ ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರು ನನಗೆ ನೋಟಿಸ್ ಕಳಿಸಿ, ನಮ್ಮ ಸಿನಿಮಾ ಆಗುವವರೆಗೆ, ನೀವು ಸಿನಿಮಾ ಮಾಡಬಾರದು ಅಂತ ನೋಟಿಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದೆಲ್ಲ ಸೇರಿದರೆ 15, 16 ವರ್ಷ ಆಗುತ್ತದೆ. ಹೀಗಾಗಿಯೇ ಅವರಿಗೆ ಕೋರ್ಟ್ ನೋಟಿಸ್ ಕಳಿಸಿದ್ದೇನೆ. ಅಗ್ರಿಮೆಂಟ್ನಲ್ಲಿ ಏನಿದೆಯೋ ಅದನ್ನಷ್ಟೇ ಕೇಳುತ್ತಿದ್ದೇನೆ. ನನ್ನ ಹಣ ನನಗೆ ವಾಪಸ್ ಕೊಡಿ ಎಂದು. ಅಶ್ವಿನಿಯವರಿಗೆ ನನ್ನ ಹಾಗೂ ಧ್ರವ ಸರ್ಜಾ ನಡುವೆ ಏನ್ ನಡೆದಿದೆ ಎಂದು ಗೊತ್ತಿಲ್ಲ. ಈಗ ಇನ್ನಷ್ಟು ವೇಟ್ ಮಾಡೋದು ಒಳ್ಳೆಯದಲ್ಲ ಎಂದು ನೋಟಿಸ್ ಕಳಿಸಿದ್ದೇನೆ. ಇದನ್ನು ಮಾಡಿದ್ದಕ್ಕೆ ನನ್ನನ್ನು ಕನ್ನಡ ವಿರೋಧಿ ಎಂದ ಬಿಂಬಿಸಲು ಮುಂದಾಗಿದ್ದಾರೆ. ನಾನು ಕನ್ನಡ ವಿರೋಧಿ ಅಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಡಾ.ವಿಷ್ಣುವರ್ಧನ್ ವಿರೋಧಿಗಳಿಗೆ ಬಸವಣ್ಣನವರ ವಚನದ ಮೂಲಕ ಉಪೇಂದ್ರ ತಿರುಗೇಟು
/filters:format(webp)/newsfirstlive-kannada/media/media_files/2025/08/01/dhruva-sarja-2025-08-01-09-20-32.jpg)
ನಾನು ತೆಲುಗು, ತಮಿಳು ಸಿನಿಮಾ ಮಾಡುವಾಗಿದ್ರೆ ಕನ್ನಡ ನಟನನ್ನು ಏಕೆ ಆಯ್ಕೆ ಮಾಡುತ್ತೀನಿ?. ಆ ಇಂಡಸ್ಟ್ರಿಯಲ್ಲಿ ಹೀರೋಗಳಿದ್ದಾರಲ್ಲ. ನನ್ನ ಹಾಗೂ ಧ್ರವ ಸರ್ಜಾ ನಡುವೆ ಒಂದು ಅಗ್ರಿಮೆಂಟ್ನಲ್ಲಿ ಈ ಬಗ್ಗೆ ಎಲ್ಲ ಮಾಹಿತಿ ಸಂಪೂರ್ಣವಾಗಿದೆ. ಐ ಆ್ಯಮ್ ಎ ಸೋಲ್ಜರ್ ಅಂತ ಕನ್ನಡದಲ್ಲೇ ಕ್ಲೀಯರ್ ಆಗಿ ಬರೆದಿದೆ. ಎಲ್ಲಿಯೂ ತಮಿಳು, ತೆಲುಗು ಇಲ್ಲ. ನನ್ನ ತಾಯಿ ಕನ್ನಡದ ಆಶೀರ್ವಾದ ಇದೆ. ಖಂಡಿತಾ ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಧ್ರವ ಸರ್ಜಾ ಅವರು ಕೋ-ಪ್ರೊಡ್ಯುಸರ್ ಒತ್ತಡ ಇದೆ ಎಂದು ಹೇಳಿರುವುದು ಖಂಡಿತ ಸುಳ್ಳು. ಕೋ-ಪ್ರೊಡ್ಯುಸರ್ ಯಾವಾಗಲೂ ನನ್ನ ಹಿಂದೆ ಇರುತ್ತಾರೆ. ಒತ್ತಡ ಹಾಕುವುದಿಲ್ಲ. ಸಮಯ ವ್ಯರ್ಥ ಆಗುತ್ತದೆ. ಇದೇ ಮುಖ್ಯ. ಜಗ್ಗುದಾದ ಆದ ಮೇಲೆ ಸಿನಿಮಾ ಮಾಡಿಲ್ಲ. ಅವನು ಪಿಚ್ಚರ್ ಮಾಡಿಲ್ಲ, 8 ವರ್ಷದಿಂದ ಸಿನಿಮಾ ಮಾಡಿಲ್ಲ ಎಂದು ಧ್ರುವ ಸರ್ಜಾರಿಂದ ನನಗೆ ಮೆಂಟಲ್ ಟಾರ್ಚರ್ ಬಂದಿದೆ. ಧ್ರುವ ಸರ್ಜಾ ಡೇಟ್ ಕೊಟ್ಟಿದ್ರೆ ಮೆಂಟಲ್ ಟಾರ್ಚರ್ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ