ಧ್ರುವ ಸರ್ಜಾ ವಿರುದ್ಧ ಕೋಟಿ ಕೋಟಿ ಹಣ ವಂಚನೆ ಆರೋಪ.. FIR ದಾಖಲು

ನಟ ಧ್ರುವ ಸರ್ಜಾ ಅವರು ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಡೈರೆಕ್ಟರ್ ರಾಘವೇಂದ್ರ ಹೆಗಡೆಯಿಂದ ಕೋಟಿ ಕೋಟಿ ಹಣ ಪಡೆದಿರುವ ಆರೋಪ ಮಾಡಲಾಗಿದೆ.

author-image
Bhimappa
DHRUVA_SARJA
Advertisment

ನಟ ಧ್ರುವ ಸರ್ಜಾ ಅವರು ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಡೈರೆಕ್ಟರ್ ರಾಘವೇಂದ್ರ ಹೆಗಡೆಯಿಂದ ಕೋಟಿ ಕೋಟಿ ಹಣ ಪಡೆದಿರುವ ಆರೋಪ ಮಾಡಲಾಗಿದೆ.

ಧ್ರುವಾ ಸರ್ಜಾ ವಿರುದ್ಧ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದಾಖಲೆ ಸಮೇತ ಪ್ರಕರಣ ದಾಖಲು ಮಾಡಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್​ಎಸ್​) ಸೆಕ್ಷನ್​ 316 (2) (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 318 (4) (ವಂಚನೆ) ಅಡಿ ಎಫ್​ಐಆರ್ ದಾಖಲಾಗಿದೆ.

3.5 ಕೋಟಿ ರೂಪಾಯಿಗಳನ್ನು 2018ರಲ್ಲೇ ಧ್ರುವ ಸರ್ಜಾಗೆ ನೀಡಲಾಗಿದ್ದು ಇದಕ್ಕೆ ಈವರೆಗೆ ಬಡ್ಡಿಯೊಂದಿಗೆ ನಷ್ಟವನ್ನು ಲೆಕ್ಕ ಹಾಕಿದ್ರೆ 9.58 ಕೋಟಿ ರೂಪಾಯಿಗೂ ಅಧಿಕವಾಗುತ್ತದೆ. ಇನ್ನು ನಟ ಧ್ರುವ ಸರ್ಜಾ ಅವರಿಗೆ ಹಣ ನೀಡಿರುವ ಕುರಿತು ಒಪ್ಪಂದ, ಹಣಕಾಸಿನ ದಾಖಲೆಗಳು, ಅಗ್ರಿಮೆಂಟ್ ಹಾಗೂ ಬ್ಯಾಂಕ್​ನಲ್ಲಿ ಹಣದ ವ್ಯವಹಾರ ಮಾಡಿರುವ ದಾಖಲೆಗಳನ್ನು ಹೆಗಡೆ, ಪೊಲೀಸರಿಗೆ ಸಾಕ್ಷಿಯಾಗಿ ನೀಡಿದ್ದಾರೆ. ಸದ್ಯ ತನಿಖಾಧಿಕಾರಿಗಳು ಇವುಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

  • ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪ ಪ್ರಕರಣ ದಾಖಲು
  • ಮುಂಬೈನ ಅಂಬೋಲಿ ಪೊಲೀಸರಿಂದ ಎಫ್​ಐಆರ್ ದಾಖಲು
  • ನಿರ್ದೇಶಕನೊಂದಿಗೆ ವಂಚನೆ ಮಾಡಿದ ಆರೋಪದಲ್ಲಿ ದೂರು ದಾಖಲು
  • ರಾಘವೇಂದ್ರ ಹೆಗಡೆಯಿಂದ 3.15 ಕೋಟಿ ರೂಪಾಯಿ ಪಡೆದ ಆರೋಪ
  • ಹೆಗಡೆಯವರು 2018 ಮತ್ತು 2021ರ ನಡುವೆ ನಟನಿಗೆ ಹಣ ನೀಡಿದ್ದರು
  • ಹಣ ಪಡೆದ ನಂತರ ತನ್ನ ನಟನೆಯ ಬದ್ಧತೆ ಪೂರೈಸುವಲ್ಲಿ ವಿಳಂಬ 
  • ಯಾವುದೇ ಶೂಟಿಂಗ್​​ಗೆ ಹಾಜರಾಗಲಿಲ್ಲ ಈ ಹಿನ್ನೆಲೆ ಕೇಸ್ ಹಾಕಲಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dhruva Sarja
Advertisment