/newsfirstlive-kannada/media/media_files/2025/11/10/dhanveer-photo-2025-11-10-14-57-02.jpg)
ನಟ ಧನ್ವೀರ್ ಮೊಬೈಲ್ ನಲ್ಲಿ ಡೇಟಾ ಪತ್ತೆಯಾಗಿಲ್ಲ!
ಪರಪ್ಪನ ಅಗ್ರಹಾರದ ಜೈಲಿನ ರಾಜಾತಿಥ್ಯ ವೀಡಿಯೋ ವೈರಲ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ನಟ ಧನ್ವೀರ್ ಮೇಲೆ ಪೊಲೀಸರಿಗೆ ಅನುಮಾನ ಇತ್ತು. ಹೀಗಾಗಿ ನಟ ಧನ್ವೀರ್ ರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು . ನಟ ಧನ್ವೀರ್ ಮೊಬೈಲ್ ಪೋನ್ ಅನ್ನು ವಶಕ್ಕೆ ಪಡೆದು ಅದನ್ನು ರೀಟ್ರೀವ್ ಮಾಡಲು ಸೈಬರ್ ಸೆಲ್ ಗೆ ಕಳಿಸಲಾಗಿತ್ತು. ಈಗ ಸೈಬರ್ ಸೆಲ್ ನಿಂದ ಮೊಬೈಲ್ ರೀಟ್ರೀವ್ ರಿಪೋರ್ಟ್ ಪೊಲೀಸರಿಗೆ ಬಂದಿದೆ. ಆದರೇ, ಮೊಬೈಲ್ ನಲ್ಲಿ ಯಾವುದೇ ಡೇಟಾ ಇರಲಿಲ್ಲ ಎಂದು ರಿಪೋರ್ಟ್ ಬಂದಿದೆ. ಡೇಟಾವೇ ಇಲ್ಲದ ಹೊಸ ಮೊಬೈಲ್ ಅನ್ನು ನಟ ಧನ್ವೀರ್ ಪೊಲೀಸರಿಗೆ ಕೊಟ್ಟು ಪೊಲೀಸರನ್ನು ಯಮಾರಿಸಿದ್ದಾರೆ. ಈಗ ಪೊಲೀಸರು ಸೈಬರ್ ಸೆಲ್ ರಿಪೋರ್ಟ್ ಜೊತೆಗೆ ಎಫ್‌ಎಸ್‌ಎಲ್ ರಿಪೋರ್ಟ್ ಗಾಗಿ ಕಾಯುತ್ತಿದ್ದಾರೆ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವಾಗ, ಸಾಕ್ಷ್ಯನಾಶದ ಸೆಕ್ಷನ್ ಅನ್ನು ಕೂಡ ಸೇರಿಸಲು ಪೊಲೀಸರು ಚರ್ಚೆ ನಡೆಸಿದ್ದಾರೆ. ನಟ ಧನ್ವೀರ್ ಹೊಸ ಮೊಬೈಲ್ ಕೊಟ್ಟು ಸಾಕ್ಷ್ಯನಾಶ ಮಾಡಿದ್ದಾರೆ ಎಂದು ಚಾರ್ಜ್ ಷೀಟ್ ನಲ್ಲಿ ಉಲ್ಲೇಖಿಸುವರು.
ಇನ್ನೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನೊಳಗಿನ ವಿಡಿಯೋಗಳ ವೈರಲ್ ಕೇಸ್ ನಲ್ಲಿ ವಿಡಿಯೊ ವೈರಸ್ ಮಾಡಿದವರ ಬೆನ್ನು ಬಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೊದಲಿಗೆ ವಿಡಿಯೋ ಚಿತ್ರೀಕರಣ ಮಾಡಿದ್ದ ಕೋಳಿ ಮಂಜನ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ವಿಲ್ಸನ್ ಗಾರ್ಡನ್ ನಾಗನ ಹೆಸರು ಅನ್ನು ಕೋಳಿ ಮಂಜ ಹೇಳಿದ್ದಾನೆ. ವೀಡಿಯೋ ಮಾಡಲು, ಹೊರಗಡೆ ಬಿಡಲು ಹೇಳಿದ್ದೇ ವಿಲ್ಸನ್ ಗಾರ್ಡನ್ ನಾಗ ಎಂದು ಕೋಳಿ ಮಂಜ ಹೇಳಿದ್ದಾನೆ.
ಕೋಳಿ ಮಂಜನ ಹೇಳಿಕೆ ಹಿನ್ನಲೆಯಲ್ಲಿ ವಿಲ್ಸನ್ ಗಾರ್ಡನ್ ನಾಗನನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ನಾಗನನ್ನು ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ನಾನು ಮೊಬೈಲ್ ಬಳಸಿಯೇ ತುಂಬಾ ವರ್ಷಗಳಾಗಿದೆ. ಜೈಲಿನಲ್ಲಿ ಯಾರಿಗೆ ಮೊಬೈಲ್ ಸಿಗುತ್ತೋ ಗೊತ್ತಿಲ್ಲ, ನನಗಂತೂ ಯಾವತ್ತು ಸಿಕ್ಕಿಲ್ಲ. ದುರುದ್ದೇಶಪೂರ್ವಕವಾಗಿ ಕೇಸ್ ನಲ್ಲಿ ನನ್ನ ಸಿಲುಕಿಸುವ ಪ್ರಯತ್ನವಾಗುತ್ತಿದೆ. ಕೋಳಿ ಮಂಜ ಅನ್ನೋನು ಯಾರೂ ಅನ್ನೋದೇ ನನಗೆ ಗೊತ್ತಿಲ್ಲ . ಅವನು ಮೊಬೈಲ್ ನಲ್ಲಿ ರಾಜಾತಿಥ್ಯ ಕೊಡುವುದನ್ನು ಸೆರೆಹಿಡಿದ್ರೆ ಅವನನ್ನೇ ಕೇಳಿ. ನನಗೂ ಈ ವೀಡಿಯೋ ವೈರಲ್‌ಗೂ ಸಂಬಂಧ ಇಲ್ಲ ಎಂದು ವಿಲ್ಸನ್ ಗಾರ್ಡನ್ ನಾಗ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಕಡ್ಡಿ ಮುರಿದ ಹಾಗೆ ವಿಲ್ಸನ್ ಗಾರ್ಡನ್ ನಾಗ ಹೇಳಿಕೆ ನೀಡಿದ್ದಾನೆ.
ಹೀಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನೊಳಗಿನ ವಿಡಿಯೋಗಳನ್ನು ವೈರಲ್ ಮಾಡಿದವರು ಯಾರು? ವಿಡಿಯೋ ರೆಕಾರ್ಡ್ ಮಾಡಿದವರು ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಇದೆ.
ಇದುವರೆಗೂ ಪೊಲೀಸರಿಗೆ ವೈರಲ್ ಮಾಡಿದವರ ಮಾಹಿತಿ ಲಭ್ಯವಾಗಿಲ್ಲ.
/filters:format(webp)/newsfirstlive-kannada/media/post_attachments/wp-content/uploads/2025/03/dhanveer.jpg)
ಸದ್ಯ ಜೈಲಿನಿಂದ ವಿಡಿಯೋಗಳು ಧನ್ವೀರ್ ಗೆ ಬಂದಿದ್ದು, ನಟ ಧನ್ವೀರ್ ವೈರಲ್ ಮಾಡಿದ್ದಾರೆ. ಆದರೇ, ಬಳಿಕ ಅದರ ಸಾಕ್ಷ್ಯಗಳನ್ನು ನಟ ಧನ್ವೀರ್ ನಾಶ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಎಫ್ ಎಸ್ ಎಲ್ ವರದಿಯಲ್ಲೂ ಕೂಡ ಡೇಟಾ ಇಲ್ಲದ ಮೊಬೈಲ್ ಎಂದು ವರದಿ ಬಂದರೇ, ಇದೇ ಪಾಯಿಂಟ್ ಮೇಲೆ ಚಾರ್ಜ್ ಶೀಟ್ ಅನ್ನು ಕೋರ್ಟ್ ಗೆ ಸಲ್ಲಿಸಲು ಪೊಲೀಸರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/11/10/parappana-agrahara-jail-1-2025-11-10-08-04-48.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us