/newsfirstlive-kannada/media/media_files/2025/10/03/rachitha-ram-2025-10-03-12-55-50.jpg)
ನಟಿ ರಚಿತಾ ರಾಮ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ
ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಚಿತರಾಮ್ ಇಂದು 33 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದ ಬಳಿ ಅಭಿಮಾನಿಗಳಿಂದ ರಚಿತಾ ರಾಮ್ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ನಿನ್ನೆ ರಾತ್ರಿಯಿಂದಲೇ ರಚಿತಾ ನಿವಾಸದ ಬಳಿ ಅಭಿಮಾನಿಗಳ ದಂಡು ನೆರೆದಿದೆ. ಲ್ಯಾಂಡ್ ಲಾರ್ಡ್ ಸಿನಿಮಾ ತಂಡದಿಂದ ರಚಿತಾ ರಾಮ್ ಹುಟ್ಟುಹಬ್ಬದ ಅದ್ದೂರಿ ಆಚರಣೆಯನ್ನು ಮಾಡಲಾಗುತ್ತಿದೆ. ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಸಿನಿಮಾ ಆಗಿದೆ. ರಚಿತರಾಮ್ ನಿವಾಸದ ಬಳಿ ಡೊಳ್ಳು ಕುಣಿತ, ಯಕ್ಷಗಾನ ಕಲಾವಿದರಿಂದ ನೃತ್ಯ ಪ್ರದರ್ಶನ ಕೂಡ ನಡೆಯುತ್ತಿದೆ. ರಚಿತಾ ರಾಮ್ ನಿವಾಸದ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಇಂದು ಸಂಜೆವರೆಗೆ ಆರ್ ಆರ್ ನಗರದ ನಿವಾಸದಲ್ಲಿ ಅಭಿಮಾನಿಗಳನ್ನು ರಚಿತಾ ರಾಮ್ ಭೇಟಿಯಾಗಲಿದ್ದಾರೆ.
ಇನ್ನೂ ಈ ವೇಳೆ ನಟಿ ರಚಿತರಾಮ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. 2 ವರ್ಷದ ನಂತರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ಮಾಧ್ಯಮದವರ ಜೊತೆ ಫಸ್ಟ್ ಟೈಮ್ ಬರ್ತ್ ಡೇ ಸೆಲೆಬ್ರೇಷನ್ ಮಾಡುತ್ತಿದ್ದೇನೆ. ರಜನಿಕಾಂತ್ ಸರ್ ಕಾಲ್ ಮಾಡಿ ವಿಶ್ ಮಾಡಿದ್ರು . ಖುಷಿ ಆಯ್ತು . ಕೂಲಿ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಲ್ಯಾಂಡ್ ಲಾರ್ಡ್ ಸಿನಿಮಾ ಸಿಗೋದಕ್ಕೆ ದರ್ಶನ್ ಕಾರಣ. ನಾನು ದರ್ಶನ್ ಅವರ ಜೊತೆ ಮಾತಾಡಿದಾಗ ಒಪ್ಪಿಕೋ ಎಂದು ಹೇಳಿದ್ದರು. ನಿನ್ನೆ ರಾತ್ರಿ ಕಾಂತಾರ ಬಗ್ಗೆ ಮಾತಾಡಿದಾಗ ಮೈ ಜುಮ್ ಅನ್ನಿಸಿತ್ತು. ಲ್ಯಾಂಡ್ ಲಾರ್ಡ್ ಸಿನಿಮಾದ ಟೀಸರ್ ಅಷ್ಟೇ ಮೈ ಜುಮ್ ಅನ್ನಿಸುತ್ತೆ. ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ದುನಿಯಾ ವಿಜಯ್ ಮಗಳ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು.
ನಟಿ ರಚಿತರಾಮ್
ನಾನು ರಾಜಕೀಯಕ್ಕೆ ಬರುವ ಮಾತೇ ಇಲ್ಲ. ರಾಜಕಾರಣ ನನಗೆ ಗೊತ್ತಿಲ್ಲ. ಸಾಕಷ್ಟು ಸಿನಿಮಾಗಳು ಬರುತ್ತಿವೆ. ಬೇರೆ ಇಂಡಸ್ಟ್ರಿಂದ ನೆಗೆಟಿವ್ ಪಾತ್ರಗಳೇ ಬರುತ್ತಿದೆ. ನಾನು ಮದುವೆಯಾದರೇ, ಅರೆಂಜ್ಡ್ ಮ್ಯಾರೇಜ್ ಆಗ್ತೀನಿ. ಸದ್ಯಕ್ಕೆ ಮನೆಯಲ್ಲಿ ಹುಡುಗನ ಹುಡುಕುತ್ತಿದ್ದಾರೆ. ಡ್ರೀಮ್ ಬಾಯ್ ಅಂತೇನು ಆಸೆಗಳು ಇಲ್ಲ. ನೋಡೋಣ ಕಂಕಣ ಭಾಗ್ಯ ಇದ್ದಾಗ ಮದುವೆ ಆಗುತ್ತೇನೆ. ಮೂಗು ಚುಚ್ಚಿಸಿರೋದಕ್ಕೂ ಮದುವೆಗೂ ಲಿಂಕ್ ಇಲ್ಲ ಎಂದು ಸ್ಯಾಂಡಲ್ ವುಡ್ ಕ್ವೀನ್ ರಚಿತ್ ರಾಮ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.