/newsfirstlive-kannada/media/media_files/2025/09/12/s_narayan-2025-09-12-17-53-35.jpg)
ಬೆಂಗಳೂರು: ಸ್ಯಾಂಡಲ್ವುಡ್ನ ಕಲಾ ಸಮ್ರಾಟ ಎಸ್ ನಾರಾಯಣ್ ಅವರ ಕುಟುಂಬದ ವಿರುದ್ಧ ಅವರ ಸೊಸೆ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಎಸ್ ನಾರಾಯಣ್, ಪತ್ನಿ ಭಾಗ್ಯವತಿ ಹಾಗೂ ಮಗ ಪವನ್ ವಿರುದ್ಧ ಕೇಸ್ ದಾಖಲಾಗಿದೆ. ಸೊಸೆ ಪವಿತ್ರಾ ಅವರ ಆರೋಪಕ್ಕೆ ಎಸ್ ನಾರಾಯಣ್ ಅವರು ಪ್ರತಿಕ್ರಿಯಿಸಿದ್ದಾರೆ.
ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರು, ಆ ಹೆಣ್ಣುಮಗುವಿನ ಸಮಸ್ಯೆ ಹೊರಗೆ ಬರಬಾರದು. ಯಾವುದೇ ಹೆಣ್ಣು ಮಗುವನ್ನ ನೋಯಿಸಲು ನಾನು ಇಷ್ಟ ಪಡಲ್ಲ. ವರದಕ್ಷಿಣೆಗಿಂತ ಹೆಚ್ಚಿನ ಹಣ ಕೊಟ್ಟಿದ್ದೇನೆ ಎಂದು ಸೊಸೆ ಆರೋಪಿಸಿದ್ದಾರೆ ಎಂದಿದ್ದಕ್ಕೆ. ಹಾಗಾಂತ ನಾನು ವಿಧಾನಸೌಧ ಖರೀದಿ ಮಾಡುತ್ತೇನೆ ಎಂದರೆ ಯಾರು ನಂಬಲ್ಲ. ಹಾಗೇ ಸೊಸೆ ಹೇಳಿದ್ದನ್ನ ಎಲ್ಲರೂ ನಂಬೋದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಸಮಸ್ಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಕೊರ್ಟ್ನಲ್ಲಿವೆ. ಹೆಚ್ಚು ಹೇಳುವುದಕ್ಕೆ ಆಗಲ್ಲ. 14 ತಿಂಗಳಿನಿಂದ ನಮ್ಮ ಜೊತೆ ಸೊಸೆ ಇಲ್ಲ. ನಮ್ಮನ್ನು ಸಂಪರ್ಕ ಮಾಡಲು ಅವರಿಗೆ ಯಾವುದೇ ವಿಷಯ ಇಲ್ಲ. ಆದರೆ ಮಗು ಅವರ ಬಳಿ ಇದ್ದಿದ್ದರಿಂದ ಅವರ ಬಳಿ ತುಂಬಾ ಕೆಳಮಟ್ಟಕ್ಕೆ ಹೋಗಿದ್ದೀವಿ. ಏಕೆಂದರೆ ಮಗುವನ್ನ ನೋಡಬೇಕು ಎನ್ನುವ ಆಸೆ. ನಮ್ಮ ಜಗಳದಲ್ಲಿ ಮಗು ಏನು ತಪ್ಪು ಮಾಡಿತ್ತು. ತಾಯಿ ನೂರು ಸಮಸ್ಯೆ ಬಂದರೂ ಮಗುವಿಗಾಗಿ ತ್ಯಾಗ ಮಾಡಬೇಕು. ಆದರೆ ಹಾಗೇ ಮಾಡಲಿಲ್ಲ. ಮಗುವಿಗಾಗಿ ತಂದೆ ಅವರ ಮನೆ ಬಳಿ ಹೋಗಿದ್ದಾಗ ಹೊರಗೆ ನಿಲ್ಲಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ನಿಂದಿಸಿ, ಅವಮಾನ ಮಾಡಿ ವಾಪಸ್ ಕಳಿಸಿದ್ದಾರೆ ಎಂದು ಹೇಳಿದ್ದಾರೆ.
ಅವರು ಮಾಡಿದ ಎಲ್ಲ ಅವಮಾನಗಳನ್ನ ಸಹಿಸಿಕೊಂಡು ಇದ್ದೀವಿ. ನಮ್ಮನ್ನು ನೋಯಿಸುವುದು ಯಾವ ನ್ಯಾಯ?. ಅಷ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದೇನೆ. ನಾನು ಯಾಕೆ ಹಣ ಕೇಳಲಿ. ಸೊಸೆಯ ತಂದೆ ಅವರ ನಂಬರ್ ಕೊಡುತ್ತೇನೆ, ಅವರ ಬಳಿಯೇ ಮಾತನಾಡಿ. ಮದುವೆ ನಾನು ಮಾಡಿದ್ದೇನಾ ಅವರು ಮಾಡಿದ್ದಾರಾ ಎನ್ನುವುದು ಗೊತ್ತಾಗುತ್ತದೆ. ಮಗಳು ಚೆನ್ನಾಗಿ ಇರಲಿ ಎಂದು ತಂದೆ ಬಯಸುವುದು ಸಾಮಾನ್ಯ. ಅವರ ಮದುವೆ ಕಾರ್ಡ್ ನೋಡಿ ಏನೆಲ್ಲಾ ಬರಿಸಿದ್ದೇನೆ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಮದುವೆಯಾಗಿ 1 ತಿಂಗಳಿಗೆ ನಮ್ಮ ಅವರ ಸಂಪರ್ಕ ಎಲ್ಲ ಕೆಟ್ಟು ಹೋಗಿತ್ತು. ಇವತ್ತುವರೆಗೂ ನಾನು, ನನ್ನ ಶ್ರೀಮತಿ ಅವರ ಬಳಿ ಮಾತನಾಡಿಲ್ಲ. ಅವರು ಕೊಡುವ ಗೌರವ ಇಲ್ಲೇ ಅರ್ಥ ಆಗುತ್ತಲ್ಲ. ಹಿರಿಯರಿಗೆ ಯಾವ ಮಕ್ಕಳು ಗೌರವ ಕೊಡುತ್ತಾರೋ ಅವರಿಗೆ ಒಳ್ಳೆ ದಿನಗಳು ಸಿಗುತ್ತವೆ. ಗುರುಹಿರಿಯರನ್ನ ಗೌರವಿಸದ ಮಕ್ಕಳು ಸಗಣಿಗಿಂತ ಕಡೆ. ಆ ಮಕ್ಕಳ ಜೀವನ ಚೆನ್ನಾಗಿರಲ್ಲ ಎಂದಿದ್ದಾರೆ.
ಮನೆಯಿಂದ ಆಚೆ ಹೋದ ಮೇಲೆ ಗಂಡ ಕೆಲಸಕ್ಕೆ ಹೋಗುತ್ತಿಲ್ಲ ಎಂದು ಹೇಳಿ ಮನೆಯನ್ನು ತಾನೇ ನಡೆಸಿಕೊಂಡು ಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಮೊದಲು ಇವರಿಬ್ಬರು ಲವ್ ಮಾಡಿ ಮದುವೆ ಆಗಿರೋದು. ಇವರು ಲವ್ ಮಾಡುವಾಗ ಇವೆಲ್ಲ ಪ್ರಶ್ನೆ ಮಾಡಿಕೊಳ್ಳಬೇಕು. ಏನು ಕೆಲಸ ಮಾಡುತ್ತಾನೆ, ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತಾನೆ ಎನ್ನುವುದು ಕ್ಲಾರಿಟಿ ಪಡೆಯಬೇಕು. ಇವರು ಲವ್ ಮಾಡಿದ್ದಾರೆ ಎಂದು ಮದುವೆ ನಾವು ಫಿಕ್ಸ್ ಮಾಡಿಲ್ಲ. ಅವರು ಲವ್ ಮಾಡಿದ್ದಾರೆ ಎಂದು ಎಲ್ಲ ಒಪ್ಪಿಕೊಂಡು ಇಬ್ಬರು ಸಾಯೋವರೆಗೂ ಒಟ್ಟಿಗೆ ಇರಬೇಕು. ಅದು ಬಿಟ್ಟು ಹೀಗೆಲ್ಲಾ ಮಾಡುವುದು ಸರಿನಾ ಎಂದು ಹೇಳಿದ್ದಾರೆ.
ಒಂದು ಸಿನಿಮಾ ಆದ ಮೇಲೆ ನಮಗೆ ಮೂರು ವರ್ಷ ಯಾವುದೇ ಕೆಲಸ ಇರಲ್ಲ. ಪವನ್, ಸೊಸೆ ಪವಿತ್ರಾ ಇಬ್ಬರು ಸಿನಿಮಾ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಸಿನಿಮಾದಲ್ಲಿ ಇವರು ಡೈರೆಕ್ಟರ್ ಆದರೆ, ಮಗ ಹೀರೋ ಆಗಿದ್ದನು. ಅಲ್ಲಿ ಇಬ್ಬರಿಗೆ ಲವ್ ಆಗಿದೆ. ಬಳಿಕ ಮದುವೆ ಆಗಿ ಬಂದಿದ್ದಾರೆ. ನಮ್ಮ ಮನೆಗೆ ಯಾವುದೇ ಸಂಪಾದನೆ ಕೊಡಲ್ಲ. ಮನೆಯಲ್ಲಿ ಇರುವವರನ್ನ ನಾನೇ ಸಾಕಿದ್ದು. ಅಷ್ಟಾದರೂ ಕೆಲಸಕ್ಕೆ ಹೋಗಬೇಡಿ ಎಂದು ಹೇಳಿದ್ದೆ. ಅವರ ಖರ್ಚು ತುಂಬಿಸುವುದಕ್ಕಾಗಿ ಕೆಲಸಕ್ಕೆ ಹೋಗುತ್ತಿದ್ದರು. ಅದಕ್ಕೆ ನಮ್ಮನ್ನ ಹಣ ಕೇಳಿದರೆ?. ಅವರ ಸಂಪಾದನೆ ಎಷ್ಟು?, ಅವರ ತಿಂಗಳ ಖರ್ಚು ಎಷ್ಟಿದೆ ಎಂದು ಅವರನ್ನು ಕೇಳಿ ಎಂದು ಎಸ್ ನಾರಾಯಣ ಅವರು ಹೇಳಿದ್ದಾರೆ.
ಅವರು ಲವ್ ಮಾಡಿಕೊಂಡು ಒಪ್ಪಿಕೊಂಡು ಬಂದ ಮೇಲೆ ಸಾಲ ಮಾಡಿ ನಾನು ಮದುವೆ ಮಾಡಿಕೊಟ್ಟಿದ್ದೀನಿ. ಇಷ್ಟೊಂದು ಅವಮಾನ ಮಾಡೋಕೆ ಯಾಕೆ ನಮ್ಮ ಮನೆಗೆ ಸೊಸೆಯಾಗಿ ಬರಬೇಕು. ಎಲ್ಲ ಗೊತ್ತಾಗಿ ತಾನೇ ಲವ್ ಮಾಡಿದ್ದು. ನಾನು ಹೇಳಿದ್ನಾ ನನ್ನ ಮಗನನ್ನು ಲವ್ ಮಾಡು ಅಂತ. ಲವ್ ಮಾಡುವಾಗಲೇ ಅವನ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು. ಇಬ್ಬರು ಒಪ್ಪಿಕೊಂಡಿದ್ದಾರೆ ಎಂದು ನಮ್ಮ ಮನೆಯಲ್ಲಿ ಯಾರು ವಿರೋಧ ಮಾಡಿಲ್ಲ. ಸಂತೋಷದಿಂದ ಅದ್ಧೂರಿಯಾಗಿ ಮದುವೆ ಸಮಾರಂಭ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಕೇವಲ 500 ರೂಪಾಯಿ ಅಸಿಸ್ಟೆಂಟ್ ಡೈರೆಕ್ಟ್ ಆಗಿ ಸಿನಿಮಾ ರಂಗದಲ್ಲಿ ಬೆಳೆದಿದ್ದೇನೆ. ಅವಾಗಲೇ ಕುಟುಂಬ ನಿರ್ವಹಣೆ ಮಾಡಿದ್ದೇನೆ. ಕರ್ನಾಟಕದಲ್ಲಿ ನನ್ನನ್ನು ಗುರುತಿಸೋ ಲೆವೆಲ್ಗೆ ನಾನು ಬೆಳೆದಿದ್ದೇನೆ. ಬದುಕುಬೇಕು ಎನ್ನುವ ಛಲ ಇರಬೇಕು. ಅದು ಬಿಟ್ಟು ನನಗೆ ಏನು ಇಲ್ಲ ಎನ್ನುವುದು ಇರಬಾರದು. ಇವರು ಏನೇ ಮಾಡಿದರು ನನ್ನ ಹೆಸರಿಗೆ ಮಸಿ ಬಳಿಯೋಕೆ ಆಗೋದಿಲ್ಲ ಎಂದು ಗಂರಂ ಆಗಿಯೇ ಹೇಳಿದ್ದಾರೆ.
ನನ್ನ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಶ್ನೆ ಮಾಡಲು ಯಾರಿಗೂ ಹಕ್ಕಿಲ್ಲ. ನನ್ನ ಮನೆಯಲ್ಲಿ ನಿತ್ಯ ಅನ್ನ ದಾಸೋಹ ಇದ್ದಂತೆ ಇರುತ್ತದೆ. ನನ್ನವರು ಎಂದು ಯಾರೇ ಬಂದರು ಮನೆಯಲ್ಲಿ ಊಟ ಮಾಡಿ ಹೋಗ್ತಾರೆ. ಇವರು ಮದುವೆಗೂ ಮೊದಲು ಬ್ಯಾಂಕ್ ಬ್ಯಾಲೆನ್ಸ್ ನೋಡಿ ನನ್ನ ಮನೆಗೆ ಬಂದ್ರಾ?. ನಾನು ಹೇಳಿದ್ದನ್ನ ಕೇಳಿಸುವುದಕ್ಕೆ ಯಾರಿಗೂ ಇಷ್ಟ ಇಲ್ಲ. ಎಲ್ಲರೂ ಹೈ ಟೆಂಪರ್ ಅಲ್ಲಿ ಇರುತ್ತಾರೆ. ಯಾರು ಕೇಳಿಸಿಕೊಳ್ಳುವುದಿಲ್ಲ. ನಾವು ಬದುಕಿ ಬಾಳಿದ್ದನ್ನ ಅನುಭವ ಹೇಳಿದರೆ ಕೇಳಲ್ಲ. ತಮ್ಮ ಇಷ್ಟದಂತೆ ಇರುತ್ತಾರೆ ಎಂದು ಹೇಳಿದ್ದಾರೆ.
ಕಾನುನು ಹೋರಾಟಕ್ಕೆ ಅವರೇ ನಮ್ಮನ್ನು ಎಳೆದು ಬಿಟ್ಟಿದ್ದಾರೆ. ನನ್ನ ಮನೆ ಯಾವತ್ತೂ ಚಂದನವನ. ನಗು ನಗುತಾ ಇದ್ದೀವಿ. ಒಬ್ಬರನ್ನ ಒಬ್ಬರು ತಮಾಷೆ ಮಾಡಿಕೊಂಡು ಇದ್ವಿ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುತ್ತಿದ್ದೇವು. ಈ ಮಹಾತಾಯಿ ಮನೆಗೆ ಬಂದ ಮೇಲೆ ಇದೆಲ್ಲಾ ಹಾಳು ಆಯಿತು. ಈಯಮ್ಮ ಬಂದ ಮೇಲೆ ಊಟಕ್ಕೆ ತಟ್ಟೆ ತೆಗೆದುಕೊಂಡು ಗಂಡನ ಕರೆದುಕೊಂಡು ರೂಮ್ಗೆ ಹೋಗುತ್ತಿದ್ದರು ಎಂದು ಹೇಳಿದ್ದಾರೆ.
ನಾನು ಏನಾದರೂ ಸಲಹೆ ಹೇಳಿದರೆ, ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದರು. ಇದರಿಂದ ನಾವು ತುಂಬಾ ಭಯ ಬಿದ್ದಿದ್ದೇವು. ಅವರಿಗೆ ಮೊದಲಿನಿಂದ ಅಂತಹದ್ದು ಇತ್ತಂತೆ. ಸಣ್ಣ ಸಣ್ಣದಾದ ವಿಷಯಕ್ಕೂ ಡೆತ್ನೋಟ್ ಬರೆದಿಟ್ಟಿದ್ದಾರೆ. ಇಂತಹ ಸಣ್ಣ ಸಣ್ಣದಕ್ಕೆ ಜಗಳ ಆಗಿದ್ದಕ್ಕೆ ಮನೆಯಲ್ಲಿ ಗಲಾಟೆ ಆಗೋಯಿತು ಎಂದು ನಿರ್ದೇಶಕ ಎಸ್ ನಾರಾಯಣ ಅವ್ರು ಹೇಳಿದ್ದಾರೆ .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ