/newsfirstlive-kannada/media/media_files/2025/10/02/kanthara-cinema-review-2025-10-02-14-03-35.jpg)
ಇಂದು ಬಿಡುಗಡೆಯಾಗಿರುವ ಕಾಂತಾರ ಸಿನಿಮಾಗೆ ಭಾರಿ ಡಿಮ್ಯಾಂಡ್
ಕಾಂತಾರ-ಚಾಪ್ಟರ್ 1 ಸಿನಿಮಾ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಕರ್ನಾಟಕದಲ್ಲೂ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಸಿನಿಮಾ ಟಿಕೆಟ್ ಗಳೇ ಪ್ರೇಕ್ಷಕರಿಗೆ ಸಿಗುತ್ತಿಲ್ಲ. ಪ್ರತಿಯೊಂದು ಗಂಟೆಗೆ 85 ಸಾವಿರ ಟಿಕೆಟ್ ಗಳು ಬುಕ್ ಮೈ ಷೋನಲ್ಲಿ ಬುಕ್ ಆಗುತ್ತಿವೆ. ಸಿನಿಮಾ ಟಿಕೆಟ್ ಬೆಲೆ ಕೆಲವೆಡೆ 1,200 ರೂಪಾಯಿ ಕೂಡ ಇದೆ. ಆದರೂ ಪ್ರೇಕ್ಷಕರು ಟಿಕೆಟ್ ಖರೀದಿಸಿ ಥಿಯೇಟರ್, ಮಲ್ಟಿಪ್ಲೆಕ್ಸ್ ಗೆ ಬಂದು ಕಾಂತಾರ ಸಿನಿಮಾ ನೋಡುತ್ತಿದ್ದಾರೆ.
ಗಂಟೆಗೆ 85 ಸಾವಿರ ಸಿನಿಮಾ ಟಿಕೆಟ್ ಬುಕ್ ಆಗುತ್ತಿರುವುದು ಇದೇ ಮೊದಲು. ಭಾರತದ ಸಿನಿಮಾ ಇತಿಹಾಸದಲ್ಲಿ ಯಾವುದೇ ಸಿನಿಮಾಗೂ ಕೂಡ ಇಷ್ಟೊಂದು ದೊಡ್ಡ ರೆಸ್ಪಾನ್ಸ್ ಇದುವರೆಗೂ ಸಿಕ್ಕಿಲ್ಲ.
ಬೆಂಗಳೂರಿನ ಯಾವುದೇ ಥಿಯೇಟರ್, ಮಲ್ಟಿಪ್ಲೆಕ್ಸ್ ನಲ್ಲಿ ಕಾಂತಾರ-1ರ ಸಿನಿಮಾ ಟಿಕೆಟ್ ಗಳೇ ಸಿಗುತ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.