/newsfirstlive-kannada/media/media_files/2025/10/21/vijay-devarkonda-rashmika-2025-10-21-12-27-19.jpg)
ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ
ತೆಲುಗು ನಟ, ಹೀರೋ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಕ್ಟೋಬರ್ 3 ರಂದು ಮದುವೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಆದರೇ, ಇದನ್ನು ಅಧಿಕೃತವಾಗಿ ಘೋಷಿಸುವ ಗೋಜಿಗೆ ಇಬ್ಬರೂ ಹೋಗಿಲ್ಲ. ರಶ್ಮಿಕಾ ಮಂದಣ್ಣ, ವಿಜಯ ದೇವಕೊಂಡ ಕೈ ಬೆರಳಿನಲ್ಲಿ ಎಂಗೇಜ್ ಮೆಂಟ್ ರಿಂಗ್ ಇರೋದನ್ನು ಸೋಷಿಯಲ್ ಮೀಡಿಯಾ ಪೋಟೋಗಳಲ್ಲೇ ಜನರು ಗುರುತಿಸಿದ್ದಾರೆ. ’
ಈಗ ನಿನ್ನೆ ದಿನ ವಿಜಯ ದೇವರಕೊಂಡ ತಮ್ಮ ಮನೆಯಲ್ಲಿ ಪಟಾಕಿ, ದೀಪ ಹಚ್ಚಿ ದೀಪಾವಳಿ ಆಚರಿಸಿದ್ದಾರೆ. ಈ ವೇಳೆ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿಲ್ಲ. ಆದರೇ, ವಿಡಿಯೋದಲ್ಲಿ ಹೆಣ್ಣು ಧ್ವನಿಯೊಂದು ಕೇಳಿಸಿದೆ.
ಆ ಧ್ವನಿ ಬೇರಾರದ್ದು ಅಲ್ಲ. ಅದುವೇ ನಟಿ ರಶ್ಮಿಕಾ ಮಂದಣ್ಣ ಧ್ವನಿ. ರಶ್ಮಿಕಾ ಮಂದಣ್ಣ ಈಗಾಗಲೇ ವಿಜಯ ದೇವರಕೊಂಡ ಮನೆಯಲ್ಲೇ ಇದ್ದಾರೆ. ಅವರ ಮನೆಯಲ್ಲೇ ದೀಪಾವಳಿ ಆಚರಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಆಗಸದಲ್ಲಿ ಪಟಾಕಿ ಸಿಡಿಯುವ ವಿಡಿಯೋವನ್ನು ನಟ ವಿಜಯ ದೇವರಕೊಂಡ ಹಂಚಿಕೊಂಡಿದ್ದಾರೆ. ಆಗಲೇ ಹೆಣ್ಣು ಧ್ವನಿಯೊಂದು ಮಾತನಾಡಿರುವುದು ಕೇಳಿಸುತ್ತೆ.
ನಿಮ್ಮೆಲ್ಲರಿಗೂ ಹ್ಯಾಪಿ ದೀಪಾವಳಿ . ದೀಪಾವಳಿ ಯಾವಾಗಲೂ ನನಗೆ ಫೇವರಿಟ್ ಹಬ್ಬ. ನಿಮ್ಮೆಲ್ಲರಿಗೂ ದೊಡ್ಡ ಅಪ್ಪುಗೆ ಮತ್ತು ನನ್ನ ಪ್ರೀತಿಯನ್ನು ಕಳಿಸುತ್ತಿದ್ದೇನೆ ಎಂದು ನಟ ವಿಜಯ ದೇವರಕೊಂಡ ಇನ್ಸಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.