ಕಿಚ್ಚ ಸುದೀಪ್ ಮಾತಿನ ಟಾರ್ಗೆಟ್ ಯಾರು ಗೊತ್ತಾ? ನಟ ದರ್ಶನ್ ಪತ್ನಿ ತಿರುಗೇಟು ಹೇಗಿತ್ತು?

ನಿನ್ನೆ ನಟ ಸುದೀಪ್ ಇನ್ನೂ ಮೇಲೆ ನಾವು ಯುದ್ಧಕ್ಕೆ ಸಿದ್ದ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಉತ್ತರ ಕೊಡಿ, ಇನ್ನೂ ಮೇಲೆ ನಾವು ಸೈಲೆಂಟಾಗಿ ಇರಲ್ಲ ಎಂದು ಯುದ್ಧದ ರಣಕಹಳೆ ಮೊಳಗಿಸಿದ್ದಾರೆ. ಇದಕ್ಕೆ ನಿನ್ನೆ ಸಂಜೆಯೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ತಿರುಗೇಟು ನೀಡಿದ್ದಾರೆ.

author-image
Chandramohan
SUDEEP VERSUS DARSHAN WIFE VIJAYLAXMI

ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ಈಗ ಸ್ಟಾರ್ ವಾರ್ ಮತ್ತೆ ಶುರು

Advertisment
  • ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ಈಗ ಸ್ಟಾರ್ ವಾರ್ ಮತ್ತೆ ಶುರು
  • ನಟ ಸುದೀಪ್ ವರ್ಸಸ್ ನಟ ದರ್ಶನ್
  • ನಟ ದರ್ಶನ್ ಅಂಡ್ ಫ್ಯಾನ್ಸ್ ಅನ್ನು ಟಾರ್ಗೆಟ್ ಮಾಡಿದ್ರಾ ನಟ ಸುದೀಪ್‌?
  • ಇಲ್ಲದಿದ್ದರೇ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಏಕೆ ಮಾತನಾಡಬೇಕಾಗಿತ್ತು?

ಸುದೀಪ್​ ಸಿನಿಮಾನ ತುಂಬಾನೇ ಪ್ರೀತಿ ಮಾಡೋ ವ್ಯಕ್ತಿತ್ವ....ಸರಿಯಾಗಿ ನಿದ್ದೆ ಕೂಡ ಮಾಡಲ್ಲ, ಒಂದು ಸಿನಿಮಾ ಮಾಡೋದಕ್ಕೆ ಸಿಕ್ಕಾಪಟ್ಟೆ ರಿಸ್ಕ್​ ತಗೊಳ್ಳೋ ನಟ..ಅಂತಹ ನಟನ ಸಿನಿಮಾ ಬರ್ತಿದೆ ಅಂದ್ರೆ ಮತ್ತೊಂದು ಗುಂಪು ಸಿನಿಮಾ ವಿರುದ್ಧವೇ ಕೆಲಸ ಮಾಡೋದಕ್ಕೆ ರೆಡಿಯಾಗಿರುತ್ತೆ ಅನ್ನೋದು ಅವರ ಮಾತುಗಳಿಂದಾನೇ ಗೊತ್ತಾಗ್ತಿದೆ..ಅಷ್ಟಕ್ಕೂ ಸುದೀಪ್ ಯುದ್ಧದ ಘೋಷಣೆ ಹಾಕೋದಕ್ಕೆ ಕಾರಣಗಳೇನು? ದರ್ಶನ್​ ಪತ್ನಿ ಫ್ಯಾನ್​ವಾರ್​​ಗೆ ಎಂಟ್ರಿಯಾಗಿದ್ದಾದ್ರೂ ಯಾಕೆ? ಹೇಳ್ತೀವಿ ಕೇಳಿ 
ಆಕ್ರೋಶ..ಬಹಿರಂಗ ಆಕ್ರೋಶ...ಕನ್ನಡದ ಸ್ಟಾರ್​ ಌಕ್ಟರ್​ ಕಿಚ್ಚ ಸುದೀಪ್​ ಆಕ್ರೋಶಗೊಳ್ಳೋದೇ ತುಂಬಾ ಕಡಿಮೆ..ಸಿನಿಮಾದಲ್ಲಿ ಆ ಕಥೆಗೋಸ್ಕರ ಆಕ್ರೋಶಪಟ್ಕೊಳ್ಳೋ ಸಾಕಷ್ಟು ದೃಶ್ಯಗಳಿದ್ರೂ ನಿಜ ಜೀವನದಲ್ಲಿ ಸುದೀಪ್​ ಸೂಪರ್ ಕಾಮ್​ ಪರ್ಸನ್​...ಇಂತಹ ಸುದೀಪ್​ ಬಹಿರಂಗ ವೇದಿಕೆಯಲ್ಲಿ ತಮ್ಮ ವಿರೋಧಿಗಳ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸಿರೋದು ಸೋಷಿಯಲ್​ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ..ಅದ್ರಲ್ಲೂ,  ತಾಳ್ಮೆಯಿಂದ ಇದ್ದಿದ್ದು ಸಾಕು..ಇನ್ಮುಂದೆ ಸಹಿಸಿಕೊಳ್ಳೋ ಮಾತೇ ಇಲ್ಲ. ನಾವೂ ಯುದ್ಧಕ್ಕೆ ಸಿದ್ಧ..ಇನ್ಮೇಲೆ ಎಲ್ಲಿ​ ಮಾತಾಡ್ಬೇಕೋ ಅಲ್ಲಿ ಮಾತಾಡಿ ಎನ್ನುವಂತಹ ಮಾತುಗಳು ಸುದೀಪ್​ ಬಾಯಿಂದ ಬಂದಿರೋದಕ್ಕೆ ಸಾಕಷ್ಟು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ..ಅಷ್ಟಕ್ಕೂ, ಸುದೀಪ್​ ಈ ರೀತಿ ತಮ್ಮ ವಿರೋಧಿಗಳಿಗೆ ವಾರ್ನ್​ ಮಾಡೋದಕ್ಕೆ ಬಹುದೊಡ್ಡ ಕಾರಣಗಳೇ ಇವೆ..ಆ ಕಾರಣ ಏನು ಅಂತಾ ಒಂದೊಂದಾಗಿ ಹೇಳ್ತಾ ಹೋಗ್ತೀವಿ ಕೇಳಿ..

ಕಿಚ್ಚನ ಕಿಚ್ಚು! 
ಕಾರಣ - 01
ಪೈರಸಿ ಭೂತಗಳಿಗೆ ವಾರ್ನ್​!

ಅದು 2019 ನೇ ಇಸವಿಯ ಸೆಪ್ಟೆಂಬರ್ ತಿಂಗಳು..ಬಹುಕೋಟಿ ವೆಚ್ಚದಲ್ಲಿ ಸುದೀಪ್​ ಅಭಿನಯದ ಪೈಲ್ವಾನ್​ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದ ಮೇಲೆ ಸುದೀಪ್​ ಸೇರಿದಂತೆ ಪೈಲ್ವಾನ್​ ಸಿನಿಮಾ ಇಡೀ ತಂಡ ಸಾಕಷ್ಟು ನಿರೀಕ್ಷೆ ಇಟ್ಕೊಂಡಿತ್ತು...ಆದ್ರೆ, ಚಿತ್ರ ರಿಲೀಸ್ ಆದ ದಿನವೇ ಸಿನಿಮಾಗೆ ಪೈರಸಿ ಭೂತ ಕಾಡಿತ್ತು..ಕಿಡಿಗೇಡಿಗಳು ಫಿಲ್ಮ್​ ರಿಲೀಸ್​ ಆದ ದಿನ ಚಿತ್ರದ ಸಂಪೂರ್ಣ ಲಿಂಕ್​ನ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಶೇರ್​ ಮಾಡಿ ವೈರಲ್​ ಮಾಡಿದ್ದಾರೆ ..ಪೈಲ್ವಾನ್' ಚಿತ್ರದ ಲಿಂಕ್​ ಶೇರ್​ ಮಾಡಿದ್ದಲ್ಲದೇ, ತಮ್ಮ ಫೇಸ್​ಬುಕ್ ಸ್ಟೋರಿಯಲ್ಲಿ ಸಿನಿಮಾದ ಲಿಂಕ್ ಬೇಕಾದವರು ಇನ್​ಬಾಕ್ಸ್ ಮಾಡುವಂತೆ ಪೋಸ್ಟ್ ಬೇರೆ ಮಾಡಿದ್ರು...ಇನ್ನು, ಈ ಪೈರಸಿ ಕಿಚ್ಚು ಅದೆಷ್ಟರ ಮಟ್ಟಿಗೆ  ಧಗಧಗಿಸಿತ್ತೆಂದರೆ ದರ್ಶನ್​ ಹಾಗೂ ಸುದೀಪ್ ಫ್ಯಾನ್ಸ್​ ಮಧ್ಯೆ ದೊಡ್ಡ ಕಾಳಗವೇ ನಡೆದು ಹೋಗಿತ್ತು...ಅಷ್ಟೇ ಅಲ್ಲ, ಸಿನಿಮಾವನ್ನ ಪೈರೇಟ್​ ಮಾಡಿದ ಇಬ್ಬರು ದುಷ್ಕರ್ಮಿಗಳನ್ನ ಪೊಲೀಸರು ಬಂಧನ ಕೂಡ ಮಾಡಿದ್ದರು...ಏನೇ ಅರೆಸ್ಟ್​ ಮಾಡಿದ್ರೂ, ಕಿಡಿಗೇಡಿಗಳ ಈ ಕೃತ್ಯದಿಂದ ನಿರ್ಮಾಪಕರಿಗೆ ಒಂದು ಮಟ್ಟಿಗೆ ನಷ್ಟವಾಗಿದ್ದಂತೂ ಸುಳ್ಳಲ್ಲ..ಆ ಘಟನೆ ನಡೆದು ಬರೋಬ್ಬರಿ 6 ವರ್ಷಗಳಾಗಿದೆ..ಅಲ್ಲಿಂದ ಇಲ್ಲಿವರೆಗೂ ಸುದೀಪ್​ ಸಿನಿಮಾಗಳ ವಿರುದ್ಧ ಒಂದು ತಂಡ ಕೆಲಸ ಮಾಡುತ್ತೆ ಅನ್ನೋ ಬಲವಾದ ನಂಬಿಕೆ ಸ್ಯಾಂಡಲ್​ವುಡ್​​ನಲ್ಲಿದೆ..ಈಗ ಸುದೀಪ್​ರ ಬಹುನಿರೀಕ್ಷಿತ ಮಾರ್ಕ್ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಹೋಪ್ಸ್​ ಇದ್ದು, ಸಿನಿಮಾಗೆ ಪೈಲ್ವಾನ್ ರೀತಿಯೇ ಡ್ಯಾಮೇಜ್ ಮಾಡೋದಕ್ಕೆ ನಡೀತಿರೋ ಪ್ಲಾನ್​ ಬಗ್ಗೆ ಸುದೀಪ್​ಗೆ ಗೊತ್ತಾಗಿರಬೇಕು, ಆ ಕಾರಣಕ್ಕೇಣೇ ಆ ಒಂದು ಕಾಣದ ಪಡೆ ವಿರುದ್ಧ, ಅಂದ್ರೆ ಪೈರಸಿ ಭೂತಗಳಿಗೆ ಬಿಸಿ ಮುಟ್ಟಿಸಲು ಸುದೀಪ್ ಯುದ್ಧದ ರಣಕಹಳೆ ಮೊಳಗಿಸಿದ್ದಾರೆ... 


ಕಿಚ್ಚನ ಕಿಚ್ಚು! 
ಕಾರಣ - 02
"ಪೋಸ್ಟ್​" ದುರುಳರಿಗೂ ಎಚ್ಚರಿಕೆ! 
ಇನ್ನು ಸುದೀಪ್ ಸಿನಿಮಾಗಳು ಬಂದಾಗ ಮತ್ತೊಬ್ಬ ನಟನ ಫ್ಯಾನ್ಸ್ ಕಿಚ್ಚನ ಪಿಕ್ಚರ್​​ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ತಾರೆ ಅಂತಲೂ ಹೇಳಲಾಗುತ್ತೆ..ಉದಾಹರಣೆಗೆ ಈ ಹಿಂದೆ ಮಾರ್ಕ್​ಗೂ ಮುಂಚೆ ಬಂದ ಮ್ಯಾಕ್ಸ್​ ಸಿನಿಮಾನೇ ತಗೊಳ್ಳಿ ಮ್ಯಾಕ್ಸ್​ ಸಿನಿಮಾ ಪ್ರಚಾರ ಆರಂಭವಾದಾಗಿನಿಂದಲೂ ಸುದೀಪ್​ ವಿರೋಧಿ ಬಣದ ಸದಸ್ಯರು ಸಿನಿಮಾದ ವಿರುದ್ಧ ಸಾಕಷ್ಟು ಪೋಸ್ಟ್​ಗಳನ್ನ ಹಾಕ್ತಾನೇ ಬಂದಿದ್ದರು . ಅಷ್ಟೇ ಅಲ್ಲ..ಈ ಮಾರ್ಕ್​ ಸಿನಿಮಾ ಟೈಮಲ್ಲೂ ಅದರ ನಿರ್ದೇಶಕ ವಿಜಯ್​ ಕಾರ್ತಿಕೇಯ ತಮಿಳುನಾಡಿನ ಮೂಲದವರು..ಕಾವೇರಿಯ ಬಗ್ಗೆ ಅವ್ರು ಹಿಂದೊಮ್ಮೆ ಕರ್ನಾಟಕ ವಿರೋಧಿ ಹೇಳಿಕೆ ಕೊಟ್ಟಿದ್ರು, ಕಾವೇರಿ ತಮಿಳಿಗೆ ಸೇರ್ಬೇಕು ಅಂತಾ ಅವರು ಹೇಳಿದ್ದ ಹಾಗೇ ನಕಲಿ ಪೋಸ್ಟ್​ ತಯಾರಿಸಿ ಹಂಚಿಕೊಂಡಿದ್ದರು..ಮತ್ತೆ ನಿರ್ದೇಶಕನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಯತ್ನ ಕೂಡ ಮಾಡಿದ್ದರು..ಇನ್ನು, ಮತ್ತೊಬ್ಬ ನಟನ ಸಿನಿಮಾವೊಂದರ ಒಂಭತ್ತು ಸಾವಿರ ಪೈರಸಿ ಲಿಂಕ್​ಗಳನ್ನ ತೆಗೆದು ಹಾಕಿದ್ದೇವೆ, ನಿಮಗೂ ಇದೇ ರೀತಿ ಮಾಡ್ತೀವಿ ಅನ್ನೋ ಮೂಲಕ ಮಾರ್ಕ್ ಸಿನಿಮಾದ ಪೈರಸಿ ಮಾಡುವ ಬೆದರಿಕೆ ಹಾಕಿದ್ದರು..ಅಷ್ಟೇ ಅಲ್ಲ, ಮಾರ್ಕ್ ಸಿನಿಮಾ ಟಿಕೆಟ್ಸ್​ ಮಾರಾಟ ಮಾಡುವ ಬುಕ್​​ಮೈ ಶೋನಲ್ಲಿ ರೇಟಿಂಗ್​ ಕಡಿಮೆ ಮಾಡುವ ಪ್ರಯತ್ನವೂ ನಡೆದಿತ್ತು ಅಂತಾ ಹೇಳಲಾಗುತ್ತಾದ್ರೂ ಅದಕ್ಕೆ ಪ್ರೂಫ್​ ಇಲ್ಲ..ಬಟ್, ಸುದೀಪ್​ ಹೇಳಿಕೆಯಿಂದ ಸೋಷಿಯಲ್​ ಮೀಡಿಯಾದಲ್ಲೂ ಮಾರ್ಕ್ ಬಗ್ಗೆ ಅಪಪ್ರಚಾರ ಮಾಡುವ ಪ್ಲಾನ್ ನಡೀತಿದೆ ಅನ್ನೋದು ಗೊತ್ತಾಗಿರೋದು ಸುಳ್ಳಲ್ಲ..

ಕಿಚ್ಚನ ಕಿಚ್ಚು! 
ಕಾರಣ - 03
ನೆಗೆಟಿವ್​ ಕಾಮೆಂಟ್ಸ್​ಕಾರರಿಗೆ ವಾರ್ನ್​
ಒಂದು ಪೈರೆಸಿ..ಇನ್ನೊಂದು ಸುಳ್ಳು ಸುಳ್ಳು ಪೋಸ್ಟರ್​ ಹಾಕೋದು.. ಇವರಿಬ್ಬರ ಜೊತೆಗೆ ಮತ್ತೂ ಒಂದು ತಂಡ ಇದೆ .  ಅದೇನಪ್ಪ ಅಂದ್ರೆ ಅವರೇ ಕಾಮೆಂಟ್ ಕಿಡಿಗೇಡಿಗಳು..ಹೌದು, ಕಿಚ್ಚನ ಕಿಚ್ಚಿಗೆ ಕಾಮೆಂಟ್​ ಕಿಡಿಗೇಡಿಗಳೂ ಕಾರಣ ಇರಬಹುದು...ಯಾವುದೇ ಸಿನಿಮಾ ತಗೊಳ್ಳಿ..ಅದು ರಿಲೀಸ್ ಆದ್ಮೇಲೆ ನೋಡ್ಕೊಂಡು ಬಂದ ಪಕ್ಕಾ ವಿಮರ್ಶೆ ಬರೆಯುವವರ ವರ್ಗ ನಮ್ಮ ಮಧ್ಯೆ ಇದೆ...ಬಟ್, ಕೆಲವರು ಸಿನಿಮಾನೇ ನೋಡಿರಲ್ಲ, ಅಷ್ಟರಲ್ಲಾಗಲೇ ಹೀರೋ ತಮಗೆ ಆಗೋದಿಲ್ಲ ಅನ್ನೋ ಒಂದೇ  ಒಂದು ಕಾರಣಕ್ಕೆ ಸಿನಿಮಾಗೆ ಸಂಬಂಧಿಸಿದ ಪೋಸ್ಟರ್​ಗಳ ಮೇಲೆ ಮನಬಂದಂತೆ ಕಾಮೆಂಟ್​ ಮಾಡ್ತಾರೆ...ಅಷ್ಟೇ ಅಲ್ಲ, ಆ ಕಾಮೆಂಟ್​ ಮೂಲಕವೇ ಸಿನಿಮಾಗೆ ನೆಗೆಟಿವ್​ ಪ್ರಚಾರ ಮಾಡೋದಕ್ಕೂ ಪ್ರಯತ್ನ ಮಾಡ್ತಾರೆ...ಅಂತಹ ಒಂದು ಕಾಮೆಂಟ್​ ಕಿಡಿಗೇಡಿಗಳ ತಂಡ ಮಾರ್ಕ್  ಸಿನಿಮಾ ಬಗ್ಗೆಯೂ ನೆಗೆಟಿವ್ ಕಾಮೆಂಟ್ ಹೊಡೆಯೋದಕ್ಕೆ ಸಿನಿಮಾ ಬರೋ ಮುಂಚೆಯೇ ರೆಡಿಯಾಗಿ ಕೂತಿದೆ ಅನ್ನೋ ಮಾಹಿತಿ ಕೂಡ ಸುದೀಪ್​ಗೆ ಸಿಕ್ಕಿದ್ರೂ ಸಿಕ್ಕಿರಬಹುದು..ಆ ಕಾರಣದಿಂದ ಈ ರೀತಿ ಯುದ್ಧದ ವಾರ್ನ್​ ಸೈರನ್ ಮೊಳಗಿಸಿರಬಹುದು ಅಂತಾ ಹೇಳಲಾಗುತ್ತೆ.

kiccha sudeep (2)

ಸುದೀಪ್​ ಆಕ್ರೋಶಕ್ಕೆ ದರ್ಶನ್​ ಫ್ಯಾನ್ಸ್​ ಗರಂ..!
ಹುಬ್ಬಳ್ಳಿಯಲ್ಲಿ ಓಪನ್ ಸ್ಟೇಜ್​ ಮೇಲೆ ನಿಂತು ಸುದೀಪ್ ಮೊಳಗಿಸಿದ ಯುದ್ಧದ ರಣಕಹಳೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ..ಸುದೀಪ್​ ಆಡಿದ ಪ್ರತಿಯೊಂದು ಮಾತನ್ನೂ ಡೀಕೋಡ್​ ಮಾಡಲಾಗ್ತಿದೆ..ಸುದೀಪ್ ಹೇಳಿದ್ದು ಯಾರಿಗೆ? ಯಾಕಾಗಿ ಆ ಥರ ಹೇಳಿದ್ರು ಅನ್ನೋ ಬಿಸಿ ಡಿಸ್ಕಷನ್​ ನಡೀತಿರೋ ಮಧ್ಯೆ, ಮತ್ತೊಂದು ಪಡೆ ಸುದೀಪ್ ಹೇಳಿಕೆ ವಿರುದ್ಧ ದಾಳಿಗಿಳಿದಿದೆ..ಆ ಪಡೆ ಬೇರಾವುದೂ ಅಲ್ಲ, ಜೈಲಲ್ಲಿರೋ ಕೊಲೆ ಆರೋಪಿ, ಮತ್ತು ನಟ ದರ್ಶನ್ ಫ್ಯಾನ್ಸ್​..

ಹೌದು ಸುದೀಪ್​ ಯಾರನ್ನೂ ಬೊಟ್ಟು ಮಾಡಿ ಯುದ್ಧಕ್ಕೆ ಸಿದ್ಧ ಅನ್ನೋ ಮಾತುಗಳನ್ನ ಆಡಿಲ್ಲ, ಆದ್ರೆ, ಸುದೀಪ್​ ಹೇಳಿಕೆ ಯಥಾಪ್ರಕಾರ ದರ್ಶನ್​ ಫ್ಯಾನ್ಸ್​ ಟಾಂಗ್​ ಕೊಡೋದಕ್ಕೆ ಶುರುಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ, ಸುದೀಪ್ ಮಾತನಾಡಿರೋ ವಿಡಿಯೋಗಳನ್ನ ಶೇರ್​ಮಾಡೋದಲ್ಲದೇ ಮನಬಂದಂತೆ ಕಾಮೆಂಟ್​ ಮಾಡ್ತಿದ್ದಾರೆ..ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಫ್ಯಾನ್​​ವಾರ್ ಬೆಂಕಿ ಹೊತ್ಕೊಂಡಿದೆ..ಆದ್ರೆ, ಎಲ್ಲಕ್ಕಿಂತ ಇಂಟರೆಸ್ಟಿಂಗ್​ ಅಂದ್ರೆ, ಈ ವಾರ್​​ಗೆ ಅಧಿಕೃತವಾಗಿ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಎಂಟ್ರಿಕೊಟ್ಟಿರೋದು..

"ದರ್ಶನ್​ ಇರುವಾಗ ಹೇಳಿಕೆ ಕೊಡೋರು ಮಾಯವಾಗಿರ್ತಾರೆ"
ಕಿಚ್ಚನ ಯುದ್ಧದ ಕಹಳೆಗೆ ದರ್ಶನ್​ ಪತ್ನಿ ಕೌಂಟರ್​ ಕೊಟ್ರಾ?
ಲಕ್ಷ್ಮಿ..ವಿಜಯಲಕ್ಷ್ಮಿ...ನಟ ದರ್ಶನ್​ ಪಾಲಿನ ಅದೃಷ್ಟ ಲಕ್ಷ್ಮಿ ಫ್ಯಾನ್​​ವಾರ್​​ಗೆ ಎಂಟ್ರಿಕೊಟ್ಟಿದ್ದಾರೆ..ಇತ್ತ ಸುದೀಪ್ ಹುಬ್ಬಳ್ಳಿಯಲ್ಲಿ ಯುದ್ಧಕ್ಕೆ ಕಹಳೆ ಮೊಳಗಿಸುತ್ತಿದ್ದಂತೆ, ಅತ್ತ ದಾವಣಗೆರೆಯಲ್ಲಿ ಸುದೀಪ್​ ಮಾತಿಗೆ ಕೌಂಟರ್​ ಕೊಡುವಂತೆ ಮಾತಾನಾಡಿದ್ದಾರೆ..ದರ್ಶನ್​ ಫ್ಯಾನ್ಸ್​ ವಿರುದ್ಧ ಸಂದರ್ಶನಗಳಲ್ಲಿ, ವೇದಿಕೆಗಳ ಮೇಲೆ ಹೇಳಿಕೆಗಳನ್ನ ಕೊಡೋ ಕೆಲಸ ನಡೀತಿದೆ...ಆದ್ರೆ, ದರ್ಶನ್​ ಇರುವಾಗ ಹೇಳಿಕೆ ಕೊಡೋರು ಮಾಯವಾಗಿರ್ತಾರೆ ಅಂತಾ ವಿಜಯಲಕ್ಷ್ಮಿ ಹೇಳಿರೋದು ಈಗ ಮತ್ತೆ ಸುದೀಪ್​ ಫ್ಯಾನ್ಸ್​ ಕೆಂಡವಾಗುವಂತೆ ಮಾಡಿದೆ 

ಕೆಲವು ವ್ಯಕ್ತಿಗಳು ದರ್ಶನ್​ ಅವರು ಇಲ್ಲದೇ ಇರುವಾಗ ಅವರ ಬಗ್ಗೆ ಅವರ ಫ್ಯಾನ್ಸ್​ ಬಗ್ಗೆ ವೇದಿಕೆ ಮೇಲೆ ನಿಂತು ಮಾತನಾಡುವುದು.ಮೀಡಿಯಾದಲ್ಲಿ ಕೂತ್ಕೊಂಡು ಮಾತನಾಡುವುದು..ಹೊರಗಡೆ ಮಾತನಾಡುವುದು ಎಲ್ಲಾ ಮಾಡ್ತಿದ್ದಾರೆ..ಅದೇ ಜನಗಳು ದರ್ಶನ್​ ಇದ್ದಾಗ ಅವರು ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ..ಎಲ್ಲಿ ಮಾಯ ಆಗಿರ್ತಾರೆ ಅಂತಾನೂ ಗೊತ್ತಾಗಲ್ಲ.ದರ್ಶನ್​ ಅವರು ಹೇಳಿರೋ ಹಾಗೇ ತಲೆ ಕೆಡಿಸಿಕೊಳ್ಳಬಾರದು..ದರ್ಶನ್​ ಹೇಳಿರೋ ಹಾಗೇ ನಾವು ನೊಂದುಕೊಳ್ಳುವುದಿಲ್ಲ..ನಮಗೆ ಇಂಪಾರ್ಟೆಂಟ್​ ನಿಮ್ಮ ಪ್ರೀತಿ ಹಾಗೂ ಬೆಂಬಲ ಮಾತ್ರ, ನೀವೂ ಹಾಗೇ ಬೇಜಾರ್​ ಮಾಡಿಕೊಳ್ಳಬೇಡಿ, ಕೋಪ ಮಾಡಿಕೊಳ್ಳಬೇಡಿ
                    ವಿಜಯಲಕ್ಷ್ಮಿ, ನಟ ದರ್ಶನ್ ಪತ್ನಿ



ವಿಜಯಲಕ್ಷ್ಮಿಯವರ ಈ ಹೇಳಿಕೆ ಸ್ಯಾಂಡಲ್​ವುಡ್​ನಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಸ್ಟಾರ್​ವಾರ್​​​ಗೆ ಮತ್ತೆ ತುಪ್ಪ ಸುರಿದಿರೋದ್ರಲ್ಲಿ ಸಂಶಯವಿಲ್ಲ..ಕಿಚ್ಚ ಆಗಲಿ ದರ್ಶನ್​ ಪತ್ನಿಯಾಗಲಿ ಯಾರೂ ಕೂಡ ಯಾರತ್ತಲೂ ಡೈರೆಕ್ಟ್​ ಬೊಟ್ಟು ಮಾಡಿಲ್ಲ..ಆದ್ರೆ, ಅವರವರೇ ಅವರವರಲ್ಲೇ ಯುದ್ಧ ಮೊಳಗಿಸಿಕೊಳ್ಳುತ್ತಿರೋದು ಇಬ್ಬರು ಬಿಗ್​ಸ್ಟಾರ್​ಗಳ ಮಧ್ಯೆದ ಕಂದಕ ಇನ್ನೂ ಮುಚ್ಚಿಲ್ಲ ಅನ್ನೋದಕ್ಕೆ ಸತ್ಯಸಾಕ್ಷಿಯಂತೆ ಕಾಣ್ತಿದೆ..

DARSHAN WIFE VIJAYLAXMI




ಏಟು ಎದುರೇಟು...ಇದು ಸ್ಟಾಂಡಲ್​ವುಡ್​ ಸ್ಟಾರ್​​ವಾರ್​ನ ಕಾಮನ್​ ಫ್ಯಾಕ್ಟರ್​..ಬಟ್, ಬಹುನಿರೀಕ್ಷಿತ  ಸಿನಿಮಾಗಳು ರಿಲೀಸ್ ಆಗೋ ಹೊತ್ತಲ್ಲಿ ಈ ರೀತಿಯ ಫೈಟ್​ ನಿಜಕ್ಕೂ ಸಿನಿಮಾಗೆ ಒಳ್ಳೆ ರಿಸಲ್ಟ್​ ತಂದುಕೊಡುತ್ತಾ? ಗೊತ್ತಿಲ್ಲ..ಬಟ್, ಕಿಚ್ಚ ಅಂತೂ ಆ ಕಾಣದ ಪಡೆಯ ವಿರುದ್ಧ ತೊಡೆತಟ್ಟಿಯಾಗಿದ್ದು, ಈ ಫೈಟ್​ ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದುನೋಡ್ಬೇಕು  



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ACTOR SUDEEP VERSUS ACTOR DARSHAN WIFE VIAYLAXMI STAR WAR
Advertisment