Advertisment

ಜೈಲಿನಲ್ಲಿರುವ ನಟ ದರ್ಶನ್‌ಗೆ ಚೇರ್, ಹೀಟೀಂಗ್ ಬೆಲ್ಟ್ ನೀಡಲು ವೈದ್ಯರ ಸಲಹೆ : ಜೈಲಿನಲ್ಲಿ ನಟ ದರ್ಶನ್ ಕೂಗಾಡಿದ್ದು ಏಕೆ?

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ರನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿ ಕೂರಲು ಚೇರ್ ಮತ್ತು ಹೀಟಿಂಗ್ ಬೆಲ್ಟ್ ನೀಡಲು ವೈದ್ಯರು ಸಲಹೆ ನೀಡಿದ್ದಾರೆ. ಆದರೇ, ಇನ್ನೂ ಈ ಸೌಲಭ್ಯಗಳು ದರ್ಶನ್ ಗೆ ಸಿಕ್ಕಿಲ್ಲ. ಮತ್ತೊಂದೆಡೆ ಜೈಲಿನಲ್ಲಿ ದರ್ಶನ್ ಕೂಗಾಡಿದ್ದಾರೆ.

author-image
Chandramohan
actor darshan in jail

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌

Advertisment
  • ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌
  • ಜೈಲಿನಲ್ಲಿ ನಟ ದರ್ಶನ್ ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ
  • ನಟ ದರ್ಶನ್‌ಗೆ ಚೇರ್, ಹೀಟಿಂಗ್ ಬೆಲ್ಟ್ ನೀಡಲು ವೈದ್ಯರ ಸಲಹೆ
  • ಜೈಲಿನಲ್ಲಿ ನಟ ದರ್ಶನ್ ಕೋಪಗೊಂಡು ಕೂಗಾಡಿದ್ದು ಏಕೆ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಹಾಗೂ ಆತನ ಸಹಚರರು ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ತನಗೆ ಬೆನ್ನು ನೋವು ಎಂದು ವೈದ್ಯಕೀಯ ಕಾರಣ ನೀಡಿ ನಟ ದರ್ಶನ್ ಈ ಹಿಂದೆ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದರು. ಆದರೇ, ಈಗ ಮತ್ತೆ ಜೈಲಿನಲ್ಲಿ ಬೆನ್ನು ನೋವು ಕಾಡುತ್ತಿದೆಯಂತೆ.  ಹೀಗಾಗಿ ಜೈಲು ಆಸ್ಪತ್ರೆಯ ವೈದ್ಯರು ಹಾಗೂ ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯ ವೈದ್ಯರು ನಟ ದರ್ಶನ್ ರನ್ನು ತಪಾಸಣೆ ಮಾಡಿದ್ದಾರೆ. ಬಳಿಕ ನಟ ದರ್ಶನ್‌ ಬೆನ್ನು ನೋವಿಗೆ ಫಿಸಿಯೋ ಥೆರಪಿಗೆ ಸಲಹೆಯನ್ನು ವೈದ್ಯರು ನೀಡಿದ್ದಾರೆ. ಫಿಸಿಯೋ ಥೆರಪಿ ಮಾತ್ರವಲ್ಲ, ಹೀಟಿಂಗ್ ಬೆಲ್ಟ್ ನೀಡಲು ವೈದ್ಯರು ಜೈಲು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.  ಬೆನ್ನು ನೋವಿನ ಕಾರಣದಿಂದ ನೆಲದ ಮೇಲೆ ಕೂರದಂತೆ ವೈದ್ಯರ ಸಲಹೆ…ನೀಡಿದ್ದಾರೆ.  ದರ್ಶನ್ ಗೆ ವಾರಕ್ಕೆ 2 ಬಾರಿ ಫಿಸಿಯೋಥೆರಫಿ ನೀಡುವಂತೆ ವೈದ್ಯರ ಸಲಹೆ…ನೀಡಿದ್ದಾರೆ.  ಬಲಗೈಗೆ ಶಸ್ತ್ರಚಿಕಿತ್ಸೆ ಆಗಿದ್ದು, ಹೀಟಿಂಗ್ ಬೆಲ್ಟ್ ನೀಡಲು ವೈದ್ಯರ ಸಲಹೆ…ನೀಡಿದ್ದಾರೆ.  ಈ ಹಿಂದೆ ಆಪರೇಷನ್ ಮಾಡಿ ಕೈಗೆ ರಾಡ್  ಅನ್ನು ವೈದ್ಯರು ಹಾಕಿದ್ದಾರೆ. 
ಕೈ  ಒಳಗೆ ರಾಡ್ ಇರುವುದರಿಂದ  ಕೋಲ್ಡ್ ಆಗಿ ಮತ್ತೆ ನೋವಾಗುವ ಸಾಧ್ಯತೆ …ಇದೆ. ಹೀಗಾಗಿ ಆಪರೇಷನ್ ಆಗಿರುವ ಭಾಗಕ್ಕೆ ಹೀಟಿಂಗ್ ಬೆಲ್ಟ್ ನೀಡುವಂತೆ ವೈದ್ಯರ ಸೂಚನೆ…ನೀಡಿದ್ದಾರೆ. ಜೈಲಿನಲ್ಲಿರುವ ದರ್ಶನ್ ಓಡದಂತೆ, ನೆಗೆಯದಂತೆ, ನೆಲದ ಮೇಲೆ ಕೂರದಂತೆ ಸಲಹೆ ನೀಡಲಾಗಿದೆ. ಜೈಲಿನಲ್ಲಿ ಬೆನ್ನುನೋವಿನಿಂದ ಬಳಲುತ್ತಿರೋ ದರ್ಶನ್ ಗೆ ಒಂದು ಚೇರ್ ನೀಡಲು ಸಹ ಸಲಹೆ ನೀಡಲಾಗಿದೆ. … ಅಕ್ಟೋಬರ್ 10 ರಂದು ಚೇರ್ ಮತ್ತು ಹೀಟಿಂಗ್ ಬೆಲ್ಟ್ ಒದಗಿಸಲು ವೈದ್ಯರು ಸಲಹೆ ನೀಡಿದ್ದರು.  ಸಲಹೆ ನೀಡಿ 9 ದಿನ ಕಳೆದರೂ ದರ್ಶನ್ ಗೆ ಇನ್ನೂ ಚೇರ್ ಮತ್ತು ಹೀಟಿಂಗ್ ಬೆಲ್ಟ್ ನೀಡಿಲ್ಲ. 
ಮತ್ತೊಂದೆಡೆ ನಟ ದರ್ಶನ್‌ಗೆ ಜೈಲಿನಲ್ಲಿ ಒದಗಿಸಿರುವ ಸೌಲಭ್ಯಗಳ ಬಗ್ಗೆ ಬೆಂಗಳೂರಿನ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಡ್ಜ್ ವರದರಾಜ್  ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲು ಮ್ಯಾನ್ಯುಯಲ್ ಪ್ರಕಾರ ನಟ ದರ್ಶನ್‌ಗೆ ಸೌಲಭ್ಯ ನೀಡಲಾಗಿದೆ. ನಟ ದರ್ಶನ್ ಇನ್ನೂ ವಿಚಾರಣಾಧೀನ ಖೈದಿ ಆಗಿರುವುದರಿಂದ ಹೆಚ್ಚಿನ ಸೌಲಭ್ಯ ನೀಡಲು ಜೈಲು ಮ್ಯಾನ್ಯುಯಲ್ ನಲ್ಲಿ ಅವಕಾಶ ಇಲ್ಲ. ಆದರೆ, ಕೆಲವೊಂದು ಸೌಲಭ್ಯ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. 

Advertisment

Darshan



ಈ ವರದಿಯನ್ನು ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ಗೆ ಸಲ್ಲಿಸಲಾಗಿದೆ. ಈ ವರದಿಯ ಮಾಹಿತಿ ತಿಳಿದ ಬಳಿಕ ನಟ ದರ್ಶನ್ ಜೈಲಿನಲ್ಲಿ ಕೂಗಾಡಿದ್ದಾರೆ. ನಾನು ಜೈಲಿನಲ್ಲಿ ಹೀಗೆ ಇರಬೇಕಾ, ನನಗೇನೂ ಸೌಲಭ್ಯ ಕೊಡಲ್ವಾ ಎಂದೆಲ್ಲಾ ಕೂಗಾಡಿದ್ದಾರಂತೆ. ದರ್ಶನ್ ಸಹಚರ ನಾಗರಾಜ್ ದರ್ಶನ್ ರನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ. ಉಳಿದ ಸಹ ಖೈದಿಗಳು ನಟ ದರ್ಶನ್ ಸಹವಾಸವೇ ಬೇಡ ಎಂದು ದರ್ಶನ್ ರಿಂದ ದೂರ ಇದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Darshan in jail
Advertisment
Advertisment
Advertisment