/newsfirstlive-kannada/media/media_files/2025/08/24/daali-dhananjaya-2025-08-24-12-57-40.jpg)
/newsfirstlive-kannada/media/media_files/2025/08/24/dhananjay-2025-08-24-12-43-07.jpg)
ಸ್ಯಾಂಡಲ್ವುಡ್ ಸ್ಟಾರ್ ನಟ ಡಾಲಿ ಧನಂಜಯ್ ಸಖತ್ ಜಾಲಿ ಮೂಡ್ನಲ್ಲಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಧನಂಜಯ್ ಅವರು ಪತ್ನಿ ಧನ್ಯತಾ ಜೊತೆಗೆ ಯೂರೋಪ್ ಪ್ರವಾಸದ ಕೈಗೊಂಡಿದ್ದಾರೆ.
/newsfirstlive-kannada/media/media_files/2025/08/24/dhananjay-2-2025-08-24-12-43-07.jpg)
ಹೌದು, ಆಗಸ್ಟ್ 23ರಂದು ನಟ ಡಾಲಿ ಧನಂಜಯ್ ಅವರ ಹುಟ್ಟು ಹಬ್ಬವಿತ್ತು. ಮದುವೆ ಬಳಿಕ ತಮ್ಮ 39ನೇ ಬರ್ತ್ಡೇಯನ್ನು ಪತ್ನಿ ಧನ್ಯತಾ ಜೊತೆಗೆ ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ.
/newsfirstlive-kannada/media/media_files/2025/08/24/dhananjay-3-2025-08-24-12-43-07.jpg)
ಇನ್ನೂ, ಪತಿಯ ಹುಟ್ಟುಹಬ್ಬದಂದು ಪತ್ನಿ ಧನ್ಯತಾ ಇನ್ಸ್ಟಾಗ್ರಾಮ್ನಲ್ಲಿ, ತನ್ನ ಪ್ರತಿಭೆ, ಉತ್ಸಾಹ ಮತ್ತು ಹೃದಯದಿಂದ ಸ್ಫೂರ್ತಿ ನೀಡುತ್ತಲೇ ಇರುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಶಯಗಳು. ಪರದೆಯ ಮೇಲೆ ಮತ್ತು ಹೊರಗೆ ನೀವು ಮಿಂಚುವುದನ್ನು ನೋಡುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿ. ಹೆಚ್ಚಿನ ಶಕ್ತಿ, ಹೆಚ್ಚಿನ ಕಥೆಗಳು ಮತ್ತು ಅಂತ್ಯವಿಲ್ಲದ ಪ್ರೀತಿಗಾಗಿ ಇಲ್ಲಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
/newsfirstlive-kannada/media/media_files/2025/08/24/dhananjay4-2025-08-24-12-43-07.jpg)
ಫೆಬ್ರವರಿ 15, 16ರಂದು ಮೈಸೂರಿನಲ್ಲಿ ಡಾಲಿ ಹಾಗೂ ಧನ್ಯತಾ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
/newsfirstlive-kannada/media/media_files/2025/08/24/dhananjay-5-2025-08-24-12-43-07.jpg)
ಸದ್ಯ ಈ ಜೋಡಿ ದೇಶ ವಿದೇಶ ಸುತ್ತುವುದರಲ್ಲಿ ಬ್ಯುಸಿಯಾಗಿದೆ. ಇನ್ನೂ ಈ ಸ್ಟಾರ್ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
/newsfirstlive-kannada/media/media_files/2025/08/24/dhananjay-6-2025-08-24-12-43-07.jpg)
ಧನಂಜಯ್ ಮತ್ತು ಧನ್ಯತಾಗೆ ಮೈಸೂರಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಪರಿಚಯ ಆಗಿದೆ. ಮ್ಯೂಚುವಲ್ ಫ್ರೆಂಡ್ಸ್ ಮೂಲಕ ಇಬ್ಬರಿಗೂ ಪರಿಚಯ ಆಗಿತ್ತು.
/newsfirstlive-kannada/media/media_files/2025/08/24/dhananjay-7-2025-08-24-12-43-07.jpg)
ಧನ್ಯತಾ ಮೂಲ ಚಿತ್ರದುರ್ಗವಾದರು ಅರಸೀಕೆರೆಯಲ್ಲಿ ಒಂದಷ್ಟು ವರ್ಷಗಳ ಒಡನಾಟ ಹೊಂದಿದ್ದರು. ತುಂಬಾ ವರ್ಷಗಳ ಪರಿಚಯದ ಬಳಿಕ ಕಳೆದ ಒಂದೂವರೆ ವರ್ಷದಲ್ಲಿ ಒಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು.
/newsfirstlive-kannada/media/media_files/2025/08/24/dhananjay-8-2025-08-24-12-43-07.jpg)
ಇನ್ನು, ಧನ್ಯತಾ ತಂದೆ-ತಾಯಿ ಸರ್ಕಾರಿ ನೌಕರರಾಗಿದ್ದರು. ನಿವೃತ್ತಿ ಬಳಿಕ ಮಗಳಿಗಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಧನ್ಯತಾಗೆ ಸಹೋದರಿ ಇದ್ದಾರೆ. ಧನ್ಯತಾ ವೈದ್ಯೆಯಾಗಿದ್ದು, ಜಯನಗರದ ಖಾಸಗಿ ಆಸ್ಪತ್ರೆವೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.