Advertisment

ತೆಲುಗು ನಟಿ ಹೇಮಾ ವಿರುದ್ಧದ ಡ್ರಗ್ಸ್ ಸೇವನೆ ಕೇಸ್ ರದ್ದು : ಹೈಕೋರ್ಟ್ ನಿಂದ ನಟಿ ಹೇಮಾಗೆ ಬಿಗ್ ರಿಲೀಫ್‌

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ 88 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ತಮ್ಮ ವಿರುದ್ಧದ ಕೇಸ್ ರದ್ದು ಕೋರಿ ನಟಿ ಹೇಮಾ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಈಗ ಕೇಸ್ ರದ್ದುಪಡಿಸಿದೆ.

author-image
Chandramohan
drug case agianst hema quashed in HC

ತೆಲುಗು ನಟಿ ಕೊಲ್ಲ ಹೇಮಾ ವಿರುದ್ಧದ ಡ್ರಗ್ಸ್ ಕೇಸ್ ರದ್ದು-ಹೈಕೋರ್ಟ್

Advertisment
  • ತೆಲುಗು ನಟಿ ಕೊಲ್ಲ ಹೇಮಾ ವಿರುದ್ಧದ ಡ್ರಗ್ಸ್ ಕೇಸ್ ರದ್ದು-ಹೈಕೋರ್ಟ್
  • ಕಳೆದ ವರ್ಷ ಎಲೆಕ್ಟ್ಕಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್
  • ಹೈಕೋರ್ಟ್ ನಿಂದ ಕೇಸ್ ರದ್ದುಪಡಿಸಿ ಆದೇಶ

ಟಾಲಿವುಡ್ ನಟಿ ಹೇಮಾಗೆ  ಬಿಗ್ ರಿಲೀಫ್ ಸಿಕ್ಕಿದೆ.  ರೇವ್ ಪಾರ್ಟಿ ಕೇಸಲ್ಲಿ ನಟಿ ಹೇಮಾಗೆ ಮುಕ್ತಿ ಸಿಕ್ಕಿದೆ.  ನಟಿ  ಹೇಮಾ  ವಿರುದ್ಧದ ಡ್ರಗ್ಸ್ ಸೇವನೆ ಪ್ರಕರಣ ರದ್ದುಪಡಿಸಲಾಗಿದೆ.   ಹೈಕೋರ್ಟ್ ಏಕಸದಸ್ಯ ಪೀಠ ನಟಿ ಹೇಮಾ ವಿರುದ್ಧದ ಕೇಸ್ ರದ್ದುಪಡಿಸಿ  ಮಹತ್ವದ ಆದೇಶ ನೀಡಿದೆ.  ರೇವ್ ಪಾರ್ಟಿ ಕೇಸ್‌  ನಲ್ಲಿ   ನಟಿ ಕೊಲ್ಲ ಹೇಮಾರನ್ನು ಬಂಧಿಸಲಾಗಿತ್ತು.  ನಟಿ ಹೇಮಾ ಮೇಲೆ ಎಂಡಿಎಂಎ ಡ್ರಗ್ಸ್ ಸೇವನೆ ಆರೋಪ ಇತ್ತು.  ನಂತರ ಆಕೆಯನ್ನು  ಬಂಧಿಸಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿತ್ತು.  ಸಿಸಿಬಿ ಪೊಲೀಸರು  ಬೆಂಗಳೂರಿನ  ಖಾಸಗಿ ಆಸ್ಪತ್ರೆಯಲ್ಲಿ ನಟಿ ಹೇಮಾಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದರು. 
ಬಳಿಕ ಕೇಸ್ ರದ್ದು ಕೋರಿ ನಟಿ ಹೇಮಾ ಹೈಕೋರ್ಟ್ ಮೊರೆ ಹೋಗಿದ್ದರು.  ನಟಿ ಹೇಮಾ ಅರ್ಜಿ ಪುರಸ್ಕರಿಸಿ ಹೈಕೋರ್ಟ್ ಆದೇಶ ನೀಡಿದೆ.  

Advertisment

ಹಾಗಾದ್ರೆ ನಟಿ ಹೇಮಾಗೆ ರಿಲೀಫ್ ಸಿಗಲು ಕಾರಣ ಏನು ಗೊತ್ತಾ.?

ಖಾಸಗಿ ಆಸ್ಪತ್ರೆಯಲ್ಲಿ ನಟಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು.

ಆರೋಪ ಸಾಬೀತುಪಡಿಸಲು ಖಾಸಗಿ ಆಸ್ಪತ್ರೆ ವರದಿ ಅವಲಂಬನೆ..

ಡ್ರಗ್ಸ್ ಸೇವನೆ ದೃಢ ಪಡಿಸುವ ಪರೀಕ್ಷೆಗಳ ಮಾನದಂಡಗಳು ಇನ್ನೂ ಲಭ್ಯವಿಲ್ಲ.

ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಫಾರೆನ್ಸಿಕ್ ಟೆಸ್ಟ್ ಸರಿಯಾದ ವಿಧಾನಗಳಿಲ್ಲ..

ಮಾನದಂಡವಿಲ್ಲದ ಪರೀಕ್ಷೆಗಳು ನ್ಯಾಯಾಲಯದಲ್ಲಿ ವಿಶ್ವಾಸಾರ್ಹವಲ್ಲ.

ರಕ್ತ, ಮೂತ್ರ ಮಾದರಿಗಳ ಪರೀಕ್ಷಿಸಲು ಸ್ಟಾಂಡರ್ಡ್ ಪ್ರೊಟೋಕಾಲ್ ರೂಪಿಸಿಲ್ಲ

ಕೇಂದ್ರ ಸರ್ಕಾರ ನ್ಯಾಷನಲ್ ನೋಡಲ್ ಡ್ರಗ್ಸ್ ಟೆಸ್ಟಿಂಗ್ ಲ್ಯಾಬೋರೇಟರಿ ನೇಮಿಸಿಲ್ಲ..

 ಎನ್ ಡಿ ಪಿಎಸ್ ಕೇಸ್ ಮುಂದುವರಿಸಲು ಕಾನೂನು ಬದ್ಧ ಆಧಾರವಿಲ್ಲವೆಂದು ಕೋರ್ಟ್ ನಿರ್ಧಾರ..

ನಟಿ ಹೇಮಾ ವಿರುದ್ಧದ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. 

ನಟಿ ಹೇಮಾ ಕಣ್ಣೀರು

ಹೈಕೋರ್ಟ್ ನಲ್ಲಿ ಕೇಸ್ ರದ್ದುಗೊಂಡ ಹಿನ್ನೆಲೆಯಲ್ಲಿ  ವಿಡಿಯೋದಲ್ಲಿ ನಟಿ ಹೇಮಾ ಕಣ್ಣೀರು ಹಾಕಿದ್ದಾರೆ.  ಘಟನೆಯಿಂದ ಕುಗ್ಗಿ ತಾಯಿ ಸಾವನ್ನಪ್ಪಿದರು. ಆ ನೋವು ಅನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಒಳ್ಳೆ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ಬೆಂಗಳೂರು ಹೈಕೋರ್ಟ್ ಕೇಸ್ ವಜಾ ಮಾಡಿದೆ ಎಂದು ತೆಲುಗು ನಟಿ ಹೇಮಾ ಹೇಳಿದ್ದಾರೆ. 

drug case agianst hema quashed in HC (1)

ಪ್ರಕರಣದ ಹಿನ್ನೆಲೆ

ಇದು 2024ರ ಮೇ, 19 ರಂದು ನಡೆದಿದ್ದ ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ ಎನ್‌ಡಿಪಿಎಸ್ ಕೇಸ್ ದಾಖಲಿಸಿದ್ದರು. ಹೆಬ್ಬಗೋಡಿಯ ಜಿಆರ್ ಫಾರ್ಮ್ಸ್ ನಲ್ಲಿ  ರೇವ್ ಪಾರ್ಟಿ ನಡೆದಿತ್ತು.   ರೇವ್ ಪಾರ್ಟಿಯಲ್ಲಿ ನಟಿ ಕೊಲ್ಲ ಹೇಮಾ ಭಾಗಿಯಾಗಿದ್ದರು . ಸ್ನೇಹಿತ ವಾಸು ಎಂಬಾತನ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು  ದಾಳಿ‌ ನಡೆಸಿದ್ದರು.  
ಮಾದಕವಸ್ತು ಸೇವನೆ ಮತ್ತು ಶಾಂತಿಭಂಗ ಉಂಟು ಮಾಡಿದ ಆರೋಪದಡಿ ಬೆಂಗಳೂರಿನ  ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.  ರೇವ್ ಪಾರ್ಟಿಯಲ್ಲಿ ಎಂಡಿಎಂಎ ಫಿಲ್ಸ್, ಕೊಕೇನ್ ಬಳಕೆ ಮಾಡಲಾಗಿತ್ತು.  ನಟಿ ಹೇಮಾ ಸೇರಿ 88 ಮಂದಿ ಬಂಧನ ಮಾಡಲಾಗಿತ್ತು.  ತನಿಖೆ ನಡೆಸಿ 88 ಜನರ ಮೇಲೆ ಚಾರ್ಜ್ ಶೀಟ್ ಅನ್ನು   ಪೊಲೀಸರು ಕೋರ್ಟ್ ಗೆ ಸಲ್ಲಿಸಿದ್ದರು.  ಚಾರ್ಜ್ ಶೀಟ್ ಬಳಿಕ ಪ್ರಕರಣಕ್ಕೆ ತಡೆ ಹಾಗೂ ಪ್ರಕರಣ ರದ್ದತಿ ಕೋರಿ ನಟಿ ಹೇಮಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈಗ ಹೈಕೋರ್ಟ್ ನಟಿ ಹೇಮಾ ವಿರುದ್ಧದ ಕೇಸ್ ಅನ್ನು ರದ್ದುಪಡಿಸಿ ಆದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment

Drug case against actress hema quashed in High court
Advertisment
Advertisment
Advertisment