‘ಕಾಂತಾರ’ಗೆ ಸಾಥ್ ಕೊಟ್ಟ ಮಲಯಾಳಂನ ಖ್ಯಾತ ‌ನಟ ಪೃಥ್ವಿರಾಜ್ ಸುಕುಮಾರನ್

ಕಾಂತಾರ ಸಿನಿಮಾ 2022 ರಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಕಾಂತಾರದ ಫ್ರೀಕ್ವೆಲ್ ಶೂಟಿಂಗ್ ಕೂಡ ಮುಗಿದಿದೆ. ಈ ವರ್ಷದ ಆಕ್ಟೋಬರ್ 2 ರಂದು ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾಕ್ಕೆ ಈಗ ಕೇರಳದ ಫೃಥ್ವಿರಾಜ್ ಸುಕುಮಾರನ್ ಕೂಡ ಜೊತೆಯಾಗಿದ್ದಾರೆ. ಸಿನಿಮಾದ ಕೇರಳ ಡಿಸ್ಟ್ರಿಬ್ಯೂಷನ್ ಅನ್ನು ನಟ ಫೃಥ್ವಿರಾಜ್ ಸುಕುಮಾರನ್ ಪಡೆದಿದ್ದಾರೆ.

author-image
Chandramohan
PRUTHUVI RAJ SUKUMARAN

ಕಾಂತಾರ ಸಿನಿಮಾದ ಡಿಸ್ಟ್ರಿಬ್ಯೂಷನ್ ಹಕ್ಕು ಪಡೆದ ನಟ ಫೃಥ್ವಿರಾಜ್ ಸುಕುಮಾರನ್

Advertisment

ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ  ನಿರ್ದೇಶಿಸುತ್ತಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದ್ದು, ಬೆರಳೆಣಿಕೆ ದಿನಗಳಷ್ಟೇ ಉಳಿದಿದೆ. 
ಕೆಲವು ಸಿನಿಮಾಗಳು ಸೈಲೆಂಟಾಗಿ ಬಂದು ಹಿಟ್ ಆಗುತ್ತೆ. ಅದಕ್ಕೆ ಬೆಸ್ಟ್​ ಉದಾಹರಣೆಯೇ 2022ರಲ್ಲಿ ಬಿಡುಗಡೆಯಾಗಿದ್ದ ರಿಷಬ್ ಶೆಟ್ಟಿ ನಿರ್ದೇಶಕ ಮತ್ತು ನಟನಾಗಿ ಮಿಂಚಿದ ‘ಕಾಂತಾರ’.  
2022 ರಲ್ಲಿ ತೆರೆಕಂಡ ಹೊಸ ದಾಖಲೆ ಬರೆದಿದ್ದ ‘ಕಾಂತಾರ’ ಸಿನಿಮಾ ನಟ ರಿಷಬ್​ ಶೆಟ್ಟಿ ಸಿನಿಗ್ರಾಫ್​ಗೆ ಬಹು ದೊಡ್ಡ ತಿರುವು ನೀಡಿತ್ತು. ಬಾಕ್ಸ್ ಆಫೀಸ್​ನಲ್ಲೂ ದೊಡ್ಡ ಮೊತ್ತವನ್ನ ಬಾಚಿತ್ತು. ಜೊತೆಗೆ ಆರಂಭದಲ್ಲಿ ತೆರೆಕಂಡ ಬಳಿಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಿಂಚಿತ್ತು. ಮಾತ್ರವಲ್ಲದೇ ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ರಿಷಬ್ ಶೆಟ್ಟಿರವರಿಗೆ ರಾಷ್ಟ್ರಪತಿಗಳ ಕೈಯಿಂದ  ಬೆಸ್ಟ್​ ಆ್ಯಕ್ಟರ್​ ನ್ಯಾಷನಲ್​ ಅವಾರ್ಡ್​ ಕೂಡ ಲಭ್ಯವಾಗಿತ್ತು. 
ಇದೀಗ  ಮತ್ತೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ  ಕಾಂತಾರ ಪ್ರೀಕ್ವೆಲ್ ಶೂಟಿಂಗ್​ ಪೂರ್ಣಗೊಂಡಿದೆ.ರಿಷಬ್ ಶೆಟ್ಟಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು,  ಅಕ್ಟೋಬರ್ 2ರಂದು ಸಿನಿಮಾ ರಿಲೀಸ್​ ಆಗಲಿದೆ.
ಇನ್ನು, ಈಗಾಗಲೇ  ಕಾಂತಾರಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದ್ದು, ದಾಖಲೆ ಮಟ್ಟದಲ್ಲಿ ಸಿನಿಮಾದ ಬ್ಯುಸಿನೆಸ್ ನಡೀತಿದೆ.  ಇದೀಗ ಮಲಯಾಳಂನಲ್ಲೂ ಹೆಚ್ಚಿನ ಬೇಡಿಕೆ ಶುರುವಾಗಿದ್ದು, ಕೇಳರದಲ್ಲೂ ಕ್ರೇಜ್ ಜೋರಾಗಿದೆ. ಖುಷಿಯ ವಿಚಾರ ಏನಂದ್ರೆ ಮಲಯಾಳಂನ ಖ್ಯಾತ ‌ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾದ ಡಿಸ್ಟ್ರಿಬ್ಯೂಷನ್ ಹಕ್ಕು ಖರೀದಿಸಿದ್ದು, ಪೃಥ್ವಿರಾಜ್ ಪ್ರೊಡಕ್ಷನ್ ಮೂಲಕ ಕೇರಳದಾದ್ಯಂತ ಸಿನಿಮಾ ಬಿಡುಗಡೆ ಮಾಡ್ತಿದ್ದಾರೆ.

PRUTHUVI RAJ SUKUMARAN02


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Kantara Movie
Advertisment