ಹೃದಯಾಘಾತದಿಂದ ಸಿನಿಮಾ ನಿರ್ದೇಶಕ ಜೋ ಸೈಮನ್ ವಿಧಿವಶ : ಫಿಲಂ ಚೇಬರ್ ನಲ್ಲಿ ಸಭೆ ನಡೆಸುವಾಗ ಹೃದಯಾಘಾತ

ಕನ್ನಡ ಸಿನಿಮಾಗಳ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಜೋ ಸೈಮನ್ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕರ್ನಾಟಕ ಫಿಲಂ ಚೇಂಬರ್ ನಲ್ಲಿ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಭಾಗಿಯಾಗಿದ್ದಾಗ ಹೃದಯಾಘಾತ ಸಂಭವಿಸಿದೆ. 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜೋ ಸೈಮನ್ ದುಡಿದಿದ್ದಾರೆ.

author-image
Chandramohan
CINEMA DIRECTOR JOE SIMON IS NO MORE
Advertisment

ಹಿರಿಯ ಕನ್ನಡ ಸಿನಿಮಾ ನಿರ್ದೇಶಕ ಜೋ ಸೈಮನ್ ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಹೃದಯಾಘಾತದಿಂದ ಜೋ ಸೈಮನ್ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕರ್ನಾಟಕ ಫಿಲಂ ಚೇಂಬರ್ ನಲ್ಲಿ ಸಭೆ ನಡೆಸುವಾಗ ಹೃದಯಾಘಾತದಿಂದ ಜೋ ಸೈಮನ್ ಸಾವನ್ನಪ್ಪಿದ್ದಾರೆ. 
ಜೋಸೈಮನ್ ಅವರು ಸಾಹಸ ಸಿಂಹ, ಬಂಗಾರದ ಗುಡಿ ಸಿನಿಮಾ ಸೇರಿದಂತೆ ಹತ್ತಾರು ಯಶಸ್ವಿ ಸಿನಿಮಾಗಳ  ನಿರ್ದೇಶಕರು. 
ಫಿಲಂ ಚೇಂಬರ್ ನಲ್ಲಿ ಸಭೆ ನಡೆಸುವಾಗ ಜೋಸೈಮನ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಜೋ ಸೈಮನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೇ, ಚಿಕಿತ್ಸೆ ಫಲಕಾರಿಯಾಗದೇ, ಸಂಜೆ 4.30 ರ ಸುಮಾರಿಗೆ ಜೋ ಸೈಮನ್ ವಿಧಿವಶರಾಗಿದ್ದಾರೆ. 
ಕರ್ನಾಟಕ ಫಿಲಂ ಚೇಂಬರ್ ನಲ್ಲಿ ಇಂದು ಎಕ್ಸಿಕ್ಯುಟೀವ್ ಕಮಿಟಿ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಜೋ ಸೈಮನ್ ಕೂಡ ಭಾಗಿಯಾಗಿದ್ದರು. ಸಭೆಯಲ್ಲಿ 50 ಮಂದಿ ಭಾಗಿಯಾಗಿದ್ದರು. ಮಧ್ಯಾಹ್ನ 3 ಗಂಟೆಗೆ ಸಭೆ ಆರಂಭವಾಗಿತ್ತು. ವಾಶ್ ರೂಮು ಬಳಿ ಜೋ ಸೈಮನ್ ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. 
ಸಿಂಹ ಜೋಡಿ, ಸಾಹಸಸಿಂಹ, ಹಾಂಕಾಂಗ್ ನಲ್ಲಿ ಅಮರ್, ಸ್ನೇಹದ ಕಡಲಲ್ಲಿ ಸೇರಿದಂತೆ ಹಲವು ಸಿನಿಮಾಗಳನ್ನು ಜೋ ಸೈಮನ್ ನಿರ್ದೇಶನ ಮಾಡಿದ್ದರು.   ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಆ್ಯಕ್ಟರ್, ಡೈರೆಕ್ಟರ್, ಡೈಲಾಗ್ ರೈಟರ್ ಆಗಿ ಕೆಲಸ ಮಾಡಿದ್ದ ಜೋ ಸೈಮನ್ ಯಶಸ್ವಿ ನಿರ್ದೇಶಕರಾಗಿದ್ದರು. 

CINEMA DIRECTOR JOE SIMON IS NO MORE (1)



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

JOE SIMON IS NO MORE
Advertisment