/newsfirstlive-kannada/media/media_files/2025/10/03/kanthara-cinema-show-book-by-pratap-simha-2025-10-03-17-23-25.jpg)
ಥಿಯೇಟರ್ ನ ಒಂದು ಷೋ ಪೂರ್ತಿ ಸೀಟು ಬುಕ್ ಮಾಡಿರುವ ಪ್ರತಾಪ್ ಸಿಂಹ
ಎಲ್ಲರೂ ಬನ್ನಿ ಕಾಂತಾರ ಸಿನಿಮಾ ನೋಡೋಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಾಂತಾರ ಸಿನಿಮಾದ ಟಿಕೆಟ್ ಬುಕ್ ಮಾಡಿದ್ದಾರೆ.
ಕಾಂತಾರ ಮೂವೀ ಪ್ರಮೋಷನ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಮುಂದಾಗಿದ್ದಾರೆ. ನಟ ರಿಷಭ್ ಶೆಟ್ಟಿ ಸಿನಿಮಾ ಪರ ಪ್ರತಾಪ್ ಸಿಂಹ ನಿಂತಿದ್ದಾರೆ. ಕಾಂತಾರ ಮೂವೀ ನೋಡಲು ಪ್ರತಾಪ್ ಸಿಂಹ ಫ್ರೀ ಟಿಕೆಟ್ ಆಫರ್ ಕೊಟ್ಟಿದ್ದಾರೆ. ಕಾರ್ಯಕರ್ತರೆಲ್ಲಾ ಒಡಗೂಡಿ ಕಾಂತಾರ ನೋಡೋಣ ಎಂದು ಫ್ರೀ ಟಿಕೆಟ್ ಆಫರ್ ನೀಡಿದ್ದಾರೆ. ಸಿನಿಮಾಗೆ ಬನ್ನಿ ಎಂದು ಪ್ರತಾಪ್ ಸಿಂಹ ಕರೆ ಕೊಟ್ಟಿದ್ದಾರೆ. ಎಲ್ಲರಿಗೂ ಟಿಕೆಟ್ ಬುಕ್ ಮಾಡಿದ್ದೇನೆ, ಕಾಂತಾರಗೆ ಬನ್ನಿ ಎಂದು ಫೇಸ್ ಬುಕ್ ನಲ್ಲಿ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಗಾಗಿ ಕಾಂತಾರ ಟಿಕೆಟ್ ಮಾಜಿ ಸಂಸದ ಪ್ರತಾಪ್ ಸಿಂಹ ಬುಕ್ ಮಾಡಿದ್ದಾರೆ. ಎಲ್ಲರೂ ಸಿನಿಮಾಗೆ ಬನ್ನಿ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನ ಡಿಆರ್‌ಸಿ ಸಿನಿಮಾಸ್‌ನಲ್ಲಿ ಟಿಕೆಟ್ ಬುಕ್ ಮಾಡಲಾಗಿದೆ. 68920/- ರೂಪಾಯಿ ನೀಡಿ ಟಿಕೆಟ್ ಗಳನ್ನು ಪ್ರತಾಪ್ ಸಿಂಹ ಬುಕ್ ಮಾಡಿದ್ದಾರೆ. ನಾಳೆ ಸಂಜೆ 4 ಗಂಟೆಯ ಫುಲ್ ಷೋ ಅನ್ನು ಪ್ರತಾಪ್ ಸಿಂಹ ಬುಕ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.