/newsfirstlive-kannada/media/media_files/2025/10/03/kantara-2025-10-03-09-56-04.jpg)
ಮಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ವಿರುದ್ಧ ದೈವಾರಾದಕರು ಕೆಂಡಾಮಂಡಲವಾಗಿದ್ದಾರೆ. ಕಾಂತಾರ ಸಿನಿಮಾದಲ್ಲಿ ದೈವಾರಾಧನೆ ಬಳಕೆಯ ವಿರುದ್ಧ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೈವ ಕ್ಷೇತ್ರದಲ್ಲೇ ಸಿನಿಮಾದ ವಿರುದ್ಧ ದೈವಾರಾಧಕರು ದೂರು ನೀಡಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ, ಗುಳಿಗ, ಪಿಲಿ ದೈವದ ಆವೇಶ ಹಾಗು ದೈವ ನರ್ತನದ ವಿರುದ್ಧ ದೈವನರ್ತಕರು ಹಾಗು ದೈವಾರಾಧಕರು ಅಪಸ್ವರ ಎತ್ತಿದ್ದಾರೆ. ಇದಲ್ಲದೇ ಸಿನಿಮಾ ಬಿಡುಗಡೆ ಬೆನ್ನಲ್ಲೇ ಅನೇಕ ಪ್ರೇಕ್ಷಕರು ದೈವಾರಾಧನೆಯ ಅನುಕರಣೆ ಮಾರುತ್ತಿರುವುದು ಹಾಗು ಮೈಮೇಲೆ ದೆವ್ವ ಬಂದಂತೆ ವಿಕೃತಿ ಮೆರೆಯುತ್ತಿರುವುದು, ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ಕಾಂತಾರ ಚಿತ್ರದ ಹಾಗೂ ದೈವಾರಾಧನೆಯ ಅಪಹಾಸ್ಯದ ವಿರುದ್ಧ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲೂ ಭಾರೀ ಪರ-ವಿರೋಧಗಳು ಚರ್ಚೆಯಾಗ್ತಿವೆ.