/newsfirstlive-kannada/media/media_files/2025/12/06/gummadadi-naraasaiah-cinema-2025-12-06-15-38-53.jpg)
ಗುಮ್ಮಡಿ ನರಸಯ್ಯ ಜೀವನ ಆಧರಿತ ಸಿನಿಮಾ ನಿರ್ಮಾಣ
ಶಿವಣ್ಣ ನಟನೆಯ ಗುಮ್ಮಡಿ ನರಸಯ್ಯ ಸಿನಿಮಾದ ಮುಹೂರ್ತ ಸಮಾರಂಭ ಇಂದು ಅದ್ದೂರಿಯಾಗಿ ನೆರವೇರಿತು.. ಹಿರಿಯ ಮುತ್ಸದಿ, ಸರಳ ಸಜ್ಜನಿಕೆಯ ರಾಜಕಾರಣಿ ಆಗಿರೋ ಗುಮ್ಮಡಿ ನರಸಯ್ಯರ ಹುಟ್ಟೂರಾದ ಪಲ್ವಂಚಾದಲ್ಲಿ ಕಾರ್ಯಕ್ರಮ ನಡೆಯಿತು.. ಕಾರ್ಯಕ್ರಮದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದ ಶಿವಣ್ಣ ದಂಪತಿಯನ್ನು ಸ್ವಾಗತಿಸಲು ಇಡೀ ಊರಿಗೆ ಊರೇ ಜಮಾಯಿಸಿತ್ತು.. ಇನ್ನೂ ಸಿನಿಮಾಗೆ ಕ್ಲ್ಯಾಪ್ ಮಾಡುವ ಮೂಲಕ ಗೀತಾ ಶಿವರಾಜ್ ಕುಮಾರ್ ಸಿನಿಮಾಗೆ ಚಾಲನೆ ನೀಡಿದ್ರು..
ಆಂಧ್ರದ ಸರಳ, ಸಜ್ಜನಿಕೆಯ ರಾಜಕಾರಣಿ ಗುಮ್ಮಡಿ ನರಸಯ್ಯ ಕುರಿತು ಬಯೋಪಿಕ್ ಬರಲಿದೆ ಅನ್ನೋ ಮಾತುಗಳು ತುಂಬಾ ವರ್ಷಗಳಿಂದ ಕೇಳಿ ಬರ್ತಿತ್ತು.. ಆದರೆ ಸಿನಿಮಾ ಟೇಕಾಫ್ ಆಗಲು ತಡವಾಗಿತ್ತು.. ಆರಂಭದಲ್ಲಿ ತಮ್ಮ ಜೀವನದ ಕಥೆಯೇ ಸಿನಿಮಾ ಆಗಿ ಬರಲಿದೆ ಅನ್ನೋ ವಿಚಾರ ಕೇಳಿದಾಗ ಗುಮ್ಮಡಿ ನರಸಯ್ಯ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ.. ಆದರೆ ತಮ್ಮ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸ್ತಿದ್ದಾರೆ.. ಅಲ್ಲದೇ ನೈಜ ಘಟನೆಗಳನ್ನೇ ಸಿನಿಮಾದಲ್ಲಿ ತೋರಿಸುತ್ತೇವೆಂದು ಚಿತ್ರತಂಡ ಒಪ್ಪಿಕೊಂಡ ಬಳಿಕ ಸಿನಿಮಾ ತಂಡದ ಜೊತೆಯಾಗಿ ನಿಂತರು ಗುಮ್ಮಡಿ ನರಸಯ್ಯ.. ಈ ಮಧ್ಯೆ ಸಿನಿಮಾದ ಮುಹೂರ್ತಕ್ಕೂ ಮುಂಚಿನವಾಗಿ ಸರಳತೆ, ನ್ಯಾಯಪರ ದನಿಯಾಗಿರೋ ಗುಮ್ಮಡಿ ನರಸಯ್ಯ ಕುಟುಂಬವನ್ನು ಶಿವಣ್ಣ ದಂಪತಿ ಭೇಟಿಯಾಗಿದ್ರು.. ಗುಮ್ಮಡಿ ನರಸಯ್ಯರ ಯೋಗಕ್ಷೇಮ ವಿಚಾರಿಸೋದ್ರ ಜೊತೆಗೆ ಸಿನಿಮಾ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡ್ರು ಶಿವಣ್ಣ.. ಗುಮ್ಮಡಿ ನರಸಯ್ಯ ಬಯೋಪಿಕ್ ಸಿನಿಮಾವನ್ನು ಪ್ರಶಾಂತ್ ಹಿರ್ವಾಲೆ ನಿರ್ದೇಶನ ಮಾಡ್ತಿದ್ದು, ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ.. ಇಷ್ಟರಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
/filters:format(webp)/newsfirstlive-kannada/media/media_files/2025/12/06/gummadadi-naraasaiah-cinema-02-2025-12-06-15-40-48.jpg)
ಗುಮ್ಮಡಿ ನರಸಯ್ಯ ಮನೆಗೆ ಶಿವಣ್ಣ ಭೇಟಿ ನೀಡಿದ್ದರು. ಸಿನಿಮಾ ಮುಹೂರ್ತಕ್ಕೂ ಮುನ್ನ ಗುಮ್ಮಡಿ ನರಸಯ್ಯ ಕುಟುಂಬವನ್ನು ಶಿವರಾಜ್ ಕುಮಾರ್ ಭೇಟಿಯಾದರು. ಆಂಧ್ರದ ಖ್ಯಾತ ರಾಜಕಾರಣಿ ಆಗಿರೋ ಗುಮ್ಮಡಿ ನರಸಯ್ಯ ಪೀಪಲ್ಸ್ ಮ್ಯಾನ್ ಅಂತಲೇ ಜನಪ್ರಿಯರು. ದಶಕಗಳ ಕಾಲ ಶಾಸಕರಾಗಿದ್ರು. ಸರಳ ಜೀವನ ನಡೆಸುತ್ತಿರೋ ಗುಮ್ಮಡಿ ನರಸಯ್ಯ ಜೀವನ ಆಧರಿತ ಸಿನಿಮಾ ನಿರ್ಮಿಸಲಾಗುತ್ತಿದೆ.
/filters:format(webp)/newsfirstlive-kannada/media/media_files/2025/12/06/gummadadi-naraasaiah-cinema-03-2025-12-06-15-40-58.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us