ವಿಶ್ವ ವಿಖ್ಯಾತ ನಾಡಹಬ್ಬ ದಸರಾ 2025 ಅದ್ಧೂರಿಯಾಗಿ ತೆರೆ ಕಂಡಿದ್ದೆ. ಇನ್ನು ದಸರಾವನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ಜಮಾವಣೆಗೊಂಡಿದ್ದರು. ಈ ವೇಳೆ ಜನರ ಮಧ್ಯೆ ಕುಳಿತು ನಟ ಶಿವರಾಜ್ ಕುಮಾರ್ ಸಾಮಾನ್ಯರಂತೆ ದಸರಾ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಜನರ ಜೊತೆ ಡ್ಯಾನ್ಸ್ ಮಾಡಿ ಎಲ್ಲರನ್ನೂ ರಂಜಿಸಿದ್ದಾರೆ. ಶಿವಣ್ಣರ ಈ ಸಿಂಪ್ಲಿಸಿಟಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಶಿವಣ್ಣ ಡ್ಯಾನ್ಸ್ ಮಾಡಿದ ವಿಡಿಯೋ ನೋಡಲು ಮೇಲಿನ ಲಿಂಕ್ ಕ್ಲಿಕ್ ಮಾಡಿ.
ಇನ್ನು ಜಂಬೂ ಸವಾರಿ ವೇಳೆ ಭೀಮಾ ಆನೆಯನ್ನ ಕಂಡು ಶಿವಣ್ಣ ಫುಲ್ ಖುಷಿಯಾದರು. ಆನೆಯನ್ನು ನೋಡಿದ ಶಿವಣ್ಣ, ಭೀಮಾ ಎಂದು ಜೋರಾಗಿ ಕೂಗಿದರು. ಈ ವೇಳೆ ಭೀಮಾ ಆನೆಯು ಶಿವಣ್ಣ ಅವರಿಗೆ ನಮಸ್ಕರಿಸಿದೆ. ಈ ವಿಡಿಯೋ ಸೋಶಿಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಶಿವರಾಜನಿಗೆ ಗಜರಾಮನ ನಮನ 🐘💥❤️#ShivaRajkukar#drshivarajkumar#shivanna#MysuruDasara#ShivuaDDApic.twitter.com/q1o5B9zBm9
— ಶಿವು ಅಡ್ಡ™ | 𝓼𝓱𝓲𝓿𝓾 𝓪𝓓𝓓𝓪™ (@shivuaDDa) October 2, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ